ಮುಖ್ಯ ಪುಟ
ಮುಖ ಪುಟ
ಪತ್ರಿಕಾ ವರದಿ
 
 
 
 
 
 


ಪ್ರಕಾಶಕರ ಪರಿಚಯ :

ಮದ್ಯ ಕರ್ನಾಟಕದ ಸಾಹಿತ್ಯಕ- ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರಾಗಿರುವ ಆರ್. ಶಿವಕುಮಾರಸ್ವಾಮಿ ಕುರ್ಕಿ ಇವರು ಗ್ರಂಥಸರಸ್ವತಿಯ ಪ್ರಕಾಶಕರು. ವೃತ್ತಿಯಲ್ಲಿ ಸಿರಿಗೆರೆಯ ತರಬಾಳು ವಿದ್ಯಾಸಂಸ್ಥೆಯಲ್ಲಿ ಫ್ರೌಡಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಟಕ ರಚನೆ, ನಿರ್ದೇಶನ, ನಟನೆ ಹಾಗೂ ಸಂಘಟನೆ ಮಾಡುವ ಮೂಲಕ ರಂಗಾಸಕ್ತರಿಗೆ: ಕಾವ್ಯ-ಲೇಖನ ರಚನೆ ಮೂಲಕ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಇವರು ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ.

       ವಿವಿಧ ಕ್ಷೇತ್ರಗಳಲ್ಲಿ ತನದೇ ವಿಶಿಷ್ಟ ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ಮಾಡುವ ಮೂಲಕ ಜನರ ಪ್ರೀತಿ -ಅಭಿಮಾನ-ಗೌರವಗಳನ್ನು ಪಡೆದುಕೊಂಡಿದ್ದಾರೆ. ಸದಾ ಏನಾದರೊಂದು ಹೊಸತು ನಿರ್ಮಿಸುವರಲ್ಲಿ ಕ್ರಿಯಾಶೀಲರಾಗುವ ಇವರು 12 ಭಕ್ತಿಗೀತೆ ಧ್ವನಿಸುರುಳಿ, ಬೀಳ್ಕೂಡೆಗೆ ಕವನ ಸಂಕಲನ
ಹಾಗೂ ನಿಸರ್ಗವತಿ ನಾಟಕ ರಚಿಸಿದ್ದಾರೆ. ನಿಸರ್ಗವತಿ ನಾಟಕವನ್ನು ಸಾಣೇಹಳ್ಳಿಯ ಶಿವಸಂಚಾರವು ನಾಡಿನಾದ್ಯಂತ ಪ್ರದರ್ಶಿಸಿ ರಂಗಕರ್ಮಿಗಳ ಮನಸೂರೆಗೊಂಡಿದೆ. ಇದೀಗ ಈ ಕನ್ನಡ ಪ್ರಪಂಚ ವೆಬ್‌ಸೈಟ್ ನಿರ್ಮಿಸುವ ಮೂಲಕ ತಮ್ಮ ಕಾರ್ಯಕ್ಷೇತ್ರವನ್ನು ಜಗದಗಲ ವಿಸ್ತರಿಸುತ್ತಿದ್ದಾರೆ.

       ಈ ಎರಡೂ ಕ್ಯಾಲೆಂಡರಗಳೂ ಸಹ ವಿದ್ಯಾರ್ಥಿವೃಂದಕ್ಕೆ Project work ಶಿಕ್ಷಕರಿಗೆ Assignment ಹಾಗೂ Teaching Aids ಮತ್ತು ಡಿ.ಇಡಿ-ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಮಾರ್ಗದರ್ಶನ ಕೈಪಿಡಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಇವು ದಾರಿದೀಪವಾಗಲಿವೆ.
                                                                               

 
 
  
 

ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕನ್ನಡಪ್ರಪಂಚ.ಇನ್                                      Copyright @ kannadaprapancha.in, All rights reserved