ಮುಖ್ಯ ಪುಟ
ಮುಖ ಪುಟ
ಕವಿಗಳ ಪರಿಚಯ

ಕವಿಗಳ ಪರಿಚಯ-1
ಕವಿಗಳ ಪರಿಚಯ-2
ಕವಿಗಳ ಪರಿಚಯ-3

 

 
 
 


ಕನ್ನಡ ಕವಿಗಳ ಪರಿಚಯ-1

ಬಸವಣ್ಣ
೧೨ನೇ ಶತಮಾನದಲ್ಲಿದ್ದ ಶರಣ ಪ್ರಮುಖ. ಪ್ರಸಿದ್ಧ ವಚನಕಾರ, ಸಮಾಜ ಸುಧಾರಕ. ಅಂದು ಕರ್ನಾಟಕದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಮಹಾಕ್ರಾಂತಿಯ ನೇತಾರ. ಬಿಜಾಪುರ ಜಿಲ್ಲೆಯ ಬಾಗೇವಾಡಿ ಇವರ ಜನ್ಮಸ್ಥಳ. ವಿದ್ವಾಂಸರು ಬಸವಣ್ಣನವರ ಜನನದ ಕಾಲವನ್ನು ೧೧೩೧ ಎಂದು ಅಭಿಪ್ರಾಯ ಪಡುತ್ತಾರೆ. ಬಿಜ್ಜಳನ ರಾಜ್ಯದ ಭಂಡಾರಿಯಾಗಿದ್ದ ಹಾಗೆ ರಾಜ್ಯದ ಭಕ್ತಿ ಭಂಡಾರಿಯೂ ಆಗಿದ್ದರು. ಕವಿ ಹೃದಯವುಳ್ಳ ವಚನಕಾರರಾಗಿದ್ದರು. ಇವರ ವಚನಗಳಲ್ಲಿ ಭಾವಗೀತೆಯ ತೀವ್ರತೆ ಹಾಗೂ ಮಧುರತೆಯಿದೆ. ೧೦೦೦ ಕ್ಕೂ ಹೆಚ್ಚು ವಚನಗಳುದೊರೆತಿವೆ. "ಕೂಡಲಸಂಗಮದೇವ" ಎಂಬುದು ಇವರ ಅಂಕಿತ. ಇವರ ವಚನಗಳು ಆ ಕಾಲದ ಸಾಮಾಜಿಕ ಹಾಗೂ ಧಾರ್ಮಿಕ ಜೀವನಕ್ಕೆ ಬೆಳಕನ್ನು ಚೆಲ್ಲುತ್ತವೆ ಹಾಗೂ ವಚನಕಾರರ ಜೀವನದೃಷ್ಟಿಯನ್ನು ತಿಳಿಸುತ್ತವೆ.

ಅಕ್ಕಮಹಾದೇವಿ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಜನನ. ಕನ್ನಡ ಸಾಹಿತ್ಯ ಮೊದಲ ಕವಯತ್ರಿ ಮತ್ತು ವಚನಗಾರ್ತಿ, ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವಳು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವಳು. "ಚನ್ನಮಲ್ಲಿಕಾರ್ಜುನ" ಎಂಬುದು ಈಕೆಯ ವಚನಗಳ ಅಂಕಿತ. "ಯೋಗಾಂಗತ್ರಿವಿಧಿ" ಅಕ್ಕಮಹಾದೇವಿಯ ಪ್ರಮುಖ ಕೃತಿ. ಶಿವಭಕ್ತೆ ಅಕ್ಕ
ಹಾದೇವಿಯ ಕಾವ್ಯದ ಗುಣವೆಂದರೆ ವೇದನೆ ಮತ್ತು ನಿವೇದನೆ. ರಾಜಪ್ರಭುತ್ವ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ದಿಕ್ಕರಿಸಿ ನಿಂತ ಅಕ್ಕನ ವಚನಗಳು ಕನ್ನಡದ ಸ್ತ್ರೀ ಸಂವೇದನಾ ಅಭಿವ್ಯಕ್ತಿಯ ದಾಖಲೆಯಾಗಿದೆ.


ಆದಿಕವಿ ಪಂಪ
ಹತ್ತನೇಯ ಶತಮಾನದ ಕವಿ. ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಎಂಬ ಎರಡು ಶ್ರೇಷ ಕೃತಿಗಳ ಕರ್ತೃ.ಪ್ರಾಚೀನ ಕನ್ನಡ ಕವಿಗಳಲ್ಲಿ ಅಗ್ರಗಣ್ಯ. ಸಂಸ್ಕ್ರುತಕ್ಕೆ ವಾಲ್ಮೀಕಿ ಹೇಗೆ ಆದಿಕವಿಯೋ, ಕಾಳಿದಾಸ ಹೇಗೆ ಕುಲ ಗುರುವೋ ಹಾಗೆ ಕನ್ನಡಕ್ಕೆ ಪಂಪ ಆದಿಕವಿಯೂ, ಕವಿಕುಲಗುರುವೂ ಆಗಿದ್ದಾನೆ ಎಂಬ ವಿಮರ್ಶಕ ಪರಂಪರೆಯ ಉಕ್ತಿ ಅತ್ಯುಕ್ತಿಯಲ್ಲ. ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂಬ ಕವಿನಾಗರಜನ (ಕ್ರಿ.ಶ.೧೩೩೧)ಉಕ್ತಿಯಂತೂ ಎಂದಿಗೂ ಸಲ್ಲುವ ಮಾತು. ಆದಿಪೂರಣ ವಿಕ್ರಮಾರ್ಜುನ ವಿಜಯಗಳೆರಡೂ ಕನ್ನಡದ ಅಗ್ರಮಾನ್ಯ.
ಪಂಪನಿಗೆ ಅವನ ಕಾಲದಲ್ಲೇ ಅನೇಕ ಪ್ರಶಸ್ತಿಗಳು ದೊರೆತಿದ್ದವು. ಅವನು ಸುಕವಿಜನ ಮನೋಮಾನ ಸೋತ್ರಂಸ ಹಂಸ, ಕವಿತಾ ಗುಣಾರ್ಣವ, ಸರಸ್ವತೀ ಮಣಿಹಾರ, ಅವನಿಗೆ ದೊರೆತಿದ್ದ ಹಲವಾರು ಬಿರುದುಗಳಲ್ಲಿ ಕವಿತಾಗುಣಾರ್ಣವ ಎಂಬ ಬಿರುದೇ ಅವನಿಗೆ ಹೆಚ್ಚು ಮೆಚ್ಚುಗೆಯಾಗಿದ್ದಂತೆ ಕಾಣುತ್ತದೆ. ತನ್ನ ಕೃತಿಗಳಲ್ಲಿ ಅನೇಕ ಕಡೆಗಳಲ್ಲಿ ಈ ಬಿರುದನ್ನೇ ಅವನು ಉಪಯೋಗಿಸಿದ್ದಾನೆ. ಕನ್ನಡದ ಪ್ರಮುಖ ಕವಿಗಳ ಮೇಲೆ ಪಂಪ ಬೀರಿರುವ ಪ್ರಭಾವ ಗಣನೀಯವಾಗಿದದ್ದು.ಈ ದೃಷ್ಟಿಯಿಂದಲೂ ಪಂಪ ಕನ್ನಡದ ಆದಿಕವಿ ಜಗತ್ತಿನ ಸಾಹಿತ್ಯ ಪ್ರಪಂಚದ ಯಾವುದೇ ಮಹಕಾವ್ಯಕ್ಕೆ ಸರಿಸಮವಾದ ಕೃತಿಯನ್ನು ರಚಿಸಿ ಕನ್ನಡದ ಕೀರ್ತಿಯನ್ನು ಅಮರವಾಗಿಸಿರುವ ಕವಿ.

 


ಕವಿರತ್ನ ರನ್ನ
ಹತ್ತನೆಯ ಶತಮಾನದ ಕನ್ನಡ ಸಾಹಿತ್ಯದ ಕವಿ ರತ್ನತ್ರಯಲ್ಲಿ ಒಬ್ಬ ಹಳಗನ್ನಡದ ಮಹತ್ವದ ಕವಿ. ಪಂಪನಕಿರಿಯ ಸಮಕಾಲೀನ ಅಜಿತತೀರ್ಥಂಕರ ಪುರಾಣತಿಲಕ.ಸಾಹಭೀಮವಿಜಯ(ಗದಾಯುದ್ದ)ಎಂಬ ಕಾವ್ಯಗಲ ಕರ್ತೃ, ಶಕ್ತಿಕವಿ,ಎಂದೇ ಖ್ಯಾತನಾಗಿರುವ ಈತ ರನ್ನನಿರುವ ಕನ್ನಡಕ್ಕೆ ಅನ್ಯರಿಂದ ಬಹುದೆ ಧಕ್ಕೆ? ಬರಿಯ ಕವಿಯ ಸಿಡಿಲ ಚಕ್ಕೆ "ಎಂಬ ಹೊಗಳಿಕೆಗೂ (ಕುವೆಂಪು) ಪಾತ್ರನಾಗಿದ್ದಾನೆ. ಮುದವೊಳಲ್ (ಈಗಿನ ಮುಧೋಳ)ಎಂಬುದೇ ರನ್ನನ ಜನ್ಮ ಸ್ಥಳ, ತಾಯಿ ಅಲ್ಬಲಬ್ಬೆ, ತಂದೆ ಜಿನವಲ್ಲಭ ,ತನ್ನ ಮಕ್ಕಳಿಗೆ ಚವುಂಡರಾಯ ಮತ್ತು ಅತ್ತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ.
ಚವುಂಡರಾಯನ ನೆರವಿನಿಂದ ಸಕಲ ವಿದ್ಯಾಪಾರಂಗತನಾಗಿದ್ದ ರನ್ನ ಗಂಗರಾಜ್ಯದಿಂದ ಚಾಲುಕ್ಯ ತೈಲಪನಲ್ಲಿ ಆಶ್ರಯ ಪಡೆದ. ತೈಲಪನ ಮಗನಾದ ಸತ್ಯಾಶ್ರಯ ಇರಿವಬೆಂಡಗ ಇವನಿಗೆ ಆಶ್ರಯ ನೀಡಿದ.ಹೀಗೆಬೆಳದರನ್ನ,ಚಕ್ರವರ್ತಿತೈಲಪನಲ್ಲಿ"ಮಹಿಮೋನ್ನತಿಯನ್ನೇ ಪಡೆದ .ಅವನಿಂದ ಕವಿ ಚಕ್ರವರ್ತಿ ಎಂಬ ಬಿರುದನ್ನು ಗಳಿಸಿದ.ಗದಾಯುದ್ದವನ್ನು ದಂಡನಯಕ ಕೇಶಿ ತಿದ್ದಿದವನೆಂದು ಹೇಳಿಕೊಡಿರುವುದರಿಂದ ,ಈ ಕೇಶಿಯು ರನ್ನನನ್ನು ಚಕ್ರವರ್ತಿಗೆ ಪರಿಚಯಿಸಿರಬೇಕೆಂದು ತೋವುರುದು.
ರನ್ನನ ಪೋಷಕರಲ್ಲಿ ಚಾವುಂಡರಾಯ, ತೈಲಪರಂತೆ ಅತ್ತಿಮಬ್ಬೆಯೂ ಮುಖ್ಯಳಗಿದ್ದಾಳೆ.ಚಕ್ರವರ್ತಿಗಳಲ್ಲಿ ತೈಲಪ ಶ್ರೇಷ್ಟನಾಗಿರುವಂತೆ ದಾನದಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆಯಗಿರುವುದು, ಕವಿಯ ಹೇಳಿಕೆ.

 

 

ಕುಮಾರವ್ಯಾಸ(ಗದುಗಿನ ನಾರಣಪ್ಪ)
 ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿದ್ದು. ಜನಪ್ರಯ ಗದುಗಿನ ಭಾರತವನ್ನು ಬರೆದ ಕವಿ. ಈತ ಕನ್ನಡ ಸಾಹಿತ್ಯದ ಉನ್ನತೋನ್ನತ ಕವಿ. ಕುಮಾರವ್ಯಾಸ ಎಂಬ ಪದ ಈಗ ಇವನ ಹೆಸರು ಎಂಬಂತೆ ಬಳಾಕೆಯಲ್ಲಿದೆ. ಕುಮಾರವ್ಯಾಸನ ಭಾರತ ಧರ್ಮರಾಜನ ಪಟ್ಟಾಭಿಷೇಕದಿಂದ ಮುಗಿಯುತ್ತದೆ. ಕವಿ ಜಾತಿಯಿಂದ ಬ್ರಾಹ್ಮಣ, ಮತ ವೈದಿಕರೆಂದು ಊಹಿಸಬಹುದು. ಕವಿ ನಾರಾಯಣಪ್ಪ ದಿನವೂ ವೀರನಾರಾಯಣಾ ದೇವಾಲಯದ ಆವರಣದಲ್ಲಿರುವ ಕೊಳದಲ್ಲಿ ಸ್ನಾನಮಾಡಿ ಒದ್ದೆಯಲ್ಲಿ ದೇವರೆದುರು ಕುಳಿತು ಕಾವ್ಯವನ್ನು ಹೇಳುತ್ತಿದ್ದನೆಂದು ಒಂದು ಸಂಪ್ರದಾಯದ ಮಾತು. ಒದ್ದೆಯಲ್ಲಿ ಕುಳಿತು ಎನ್ನುವುದು ಆ ಮೇಲಿನ ಜನ ಕಲ್ಪಿಸಿದ ಭಕ್ತಿಯ ಅತಿರೇಕ ಎಂದು ಕಾಣುತ್ತದೆ. ಬ್ರಾಹ್ಮಣದಲ್ಲಿ ಒದ್ದೆಯಲ್ಲಿರುವುದೆನ್ನುವುದು ಪ್ರೇತಕಾರ್ಯದಲ್ಲಿ ಕಾಣುವ ಸಂಗತಿ. ದೇವತಾಕಾರ್ಯದಲ್ಲಿ ಅಲ್ಲ. ಕಾವ್ಯವನ್ನು ಓದಿದರೆ ಅದು ಕವಿ ದೈವಸನ್ನಿಧಿಯಲ್ಲಿ ಆವೇಶದಿಂದ ತುಂಬಿದ ವೇಳೆ ಬರೆದದ್ದಾಗಿರಬೇಕು ಎಂದು ತೋರುವುದು ದಿಟ, ಅಂತೇ ಈತ ಒಬ್ಬ ವಿಷ್ಣು ಭಕ್ತ ಹೀಗಿದ್ದೂ ಶಿವವಿರೋಧಿ ಅಲ್ಲ. ಶಿವನನ್ನೂ ರೂಪಗಳ ಐಕ್ಯ, ಸಮಾನ್ಯತೆಗಳ ಒಪ್ಪಿದ ಒಂದು ಪಂಥದವನಾಗಿರಬೇಕು. ಕರ್ನಾಟಕದ ಭಾಗವತಪಂಥ ಇಂಥ ಒಂದು ಪಂಥ ತೊರವೆಯ ರಾಮಾಯಣ ವಿಠಲನಾಥನ ಭಾಗವತ, ಜೈಮಿನಿ ಭಾರತ ಗ್ರಂಥಗಳ ರಚಿತರು ಇದೇ ಪಂಥದ ಅನುಯಾಯಿಗಳು.

 

ಹರಿಹರ
ತುಂಗಭದ್ರಾ ನದೀ ತೀರದ ರಮ್ಯಪ್ರದೇಶ ಹಂಪೆಯಲ್ಲಿ ಒಬ್ಬ ಅಸಮಾನ್ಯ ಭಕ್ತನಿದ್ದ. ಉಷಃಕಾಲಕ್ಕೆ ಮುಂಚಯೇ ಎದ್ದು, ಹೂಗಳನ್ನು ಬಿಡಿಸಿ ತರುವುದು;ಹಂಪೆಯ ವಿರೂಪಾಕ್ಷನಿಗೆ ಅಲಂಕಾರ ಮಾಡಿ ಅವನನ್ನು ಭಕ್ತಿಯಿಂದ ಪೂಜಿಸುವುದು;ಅವನ ಗಣಗಾನ ಮಾಡುವುದು; ಭಕ್ತಿಪರವಶನಾಗಿ ಹಾಡುವುದು,ಕುಣಿಯುವುದು ಅವನ ಅಭ್ಯಾಸ.
ಈ ಮಹಾಭಕ್ತನೇ ಹಂಪೆಯ ಹರಿಹರ.ಇವನು ಪ್ರತಿಭಾಶಾಲಿಯಾದ ಕವಿ ಕೂಡ .ತನ್ನ ಉತ್ತಮ ಕೃತಿಗಳಿಂದ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕಾಣಿಕೆ ಸಲ್ಲಿಸಿದ ಈ ಕವಿ ರಗಳೆಯ ಕವಿಎಂದೂ ಪ್ರಸಿದ್ದನಾಗಿದ್ದಾನೆ.
ಗಿರಿಜಾ ಕಲ್ಯಾಣ, ವೈಶಿಷ್ಟಪೂರ್ಣ ಚಂಪೂ ಕಾವ್ಯ.
ಹರಿಹರನ ಪಂಪಶತಕ, ರಕ್ಷಾ ಶತಕ, ಪ್ರಸಿದ್ದವಾದವು. ಹರಿಹರನ ಶತಕಗಳಲ್ಲಿ ಹಂಪೆಯ ವಿರೂಪಾಕ್ಷನ ಬಗೆಗೆ ಅವನಿಗಿದ್ದ ನಿಸ್ಸೀಮ ಭಕ್ತಿ,ನಿಷೆ ಹೊರಹೊಮ್ಮಿದೆ.
ಹರಿಹರನನ್ನು ರಗಳೆಯ ಕವಿ ಎಂದು ಕರೆಯುವುದು ವಾಡಿಕೆ. ಹರಿಹರನ ಕೀರ್ತಿ ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ನೆಲೆನಿಂತಿರುವುದು ಕೂಡ ಅವನು ರಚಿಸಿರುವ ರಗಳೆಗಳಿಂದ.

 

 

ಮಹಾಕವಿ ಕಾಳಿದಾಸ
ಕಾಳಿದಾಸನ ಕಾಲ ಸುಮಾರು ೪ ನೆಯ ಶತಮಾನ. ಸಂಸ್ಖ್ರತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಇವನ ಕೃತಿಗಳು ಏಳು; ಎರಡು ಖಂಡಕಾವ್ಯಗಳು -ಋತುಸಂಹಾರ ಮತ್ತು ಮೇಘಸಂದೇಶ; ಎರಡು ಮಹಾಕಾವ್ಯಗಳು-ಕುಮಾರ ಸಂಭವ ಮತ್ತು ರಘುವಂಶ : ಮೂರು ನಾಟಕಗಳು-ಮಾಲವಿಕಾಗ್ಮಿ ಮಿತ್ರ, ವಿಕ್ರಮೋವಶೀಯ ಮತ್ತು ಅಭಿಜ್ಞಾನ ಶಾಕುಂತಲ ಕಾಳಿದಾಸನ ಕೃತಿಗಳು ಸರ್ವತೋಪೂರ್ಣವಾಗಿವೆ.
ಋತು ಸಂಹಾರ : ಇದೊಂದು ಕತೆಯಿಲ್ಲದ ಕಾವ್ಯ, ಬಹುಶಃ ಇದು ಕಾಳಿದಾಸ ಬರೆದ ಕಾವ್ಯಗಳಲ್ಲಿ ಮೊದಲನೆಯದು. ಇದರಲ್ಲಿ ಒಂದೊಂದು ಋತುವಿಗೆ ಒಂದೊಂದು ಸರ್ಗದಂತೆ ಆರು ಸರ್ಗಗಳಿವೆ.

 

 

ಕವಿಚಕ್ರವರ್ತಿ ಜನ್ನ
ಕನ್ನಡದ ಪ್ರಸಿದ್ದ ಜೈನಕವಿ.೧೩ನೆಯ ಶತಮಾನದ ಪೂರ್ವರ್ಧದಲ್ಲಿ ಕೃತಿರಚನೆ ಮಾಡಿದವ. ಹಳೆಯಬೀಡು ಪ್ರಾಂತದವನಾದ ಈತನ ತಂದೆ ಸುಮನೊಬಾಣನೆಂಬ ಬಿರುದು ಪಡೆದಿದ್ದ ಶಂಕರ. ತಾಯಿ ಗಂಗಾದೇವಿ ಹೆಂಡತಿ ಲಕುಮದೇವಿ.ಧರ್ಮಗುರು ರಾಮಚಂದ್ರ ದೇವಮುನಿ. ಉಪಾಧ್ಯಾಯ ಇಮ್ಮಡಿ ನಾಗವರ್ಮ,ಹೊಯ್ಸಳ ಬಲ್ಲಾಳನಿಂದ ಈತ ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದು,ಅನಂತರ ನರಸಿಂಹನಲ್ಲಿ ದಂಡಧಿಪತಿಯೂ ಮಂತ್ರಿಯೂ ಆಗಿದ್ದ. ಒಟ್ಟಿನಲ್ಲಿ ಈತ ಪಂಪನಂತೆ ಬಹುಮುಕ ವ್ಯಕ್ತಿತ್ವವುಳ್ಳವ.

 

ಶ್ರೀ ಕನಕದಾಸರು
ಕನಕದಾಸರ ಕಾಲ ಸುಮಾರು ೧೯ ನೇ ಶತಮಾನ ಎನ್ನಲಾಗದೆ. ಧಾರವಾಡ ಜಿಲ್ಲೆಯ ಬಾಡ ಎಂಬ ಗ್ರಾಮದಲ್ಲಿ ಜನನ. ತಂದೆ ಬೀರೆಗೌಡ, ತಾಯಿ ಬಚ್ಚಮ್ಮ ತಂದೆ ಬಾಡದಲ್ಲಿ ಪಾಳೆಯ ಪಟ್ಟಿನ ಅಧಿಕಾರಿಯಗಿದ್ದರು. ತಂದೆಯ ಮರಣದ ನಂತರ ವಿಜಯನಗರದ ಅರಸರ ಸೇನೆಯನ್ನು ಸೇರಿಕೊಂಡರು. ಹಲವು ಸಮರಗಳಲ್ಲಿ ಭಾಗವಹಿಸಿ ವಿರಯೋಧ ಎಂಬ ಪ್ರಶಸ್ತಿಗೆ ಪಾತ್ರರಾದರು.ನೂರಾರು ದೇವರ ನಾಮಗಳನ್ನು ರಚಿಸಿದರು.
ಮಾಧ್ವ ಪ್ರಭಾವಕ್ಕೆ ಒಳಗಾದ ಭಾಗವತ ದೃಷ್ಟಿಯ ಕವಿ.ಕೀರ್ತನಕಾರ,ಕನಕದಾಸರುಸಾಮಾಜಿಕ ಕೆಳವರ್ಗದಿಂದ ಬಂದು ದಾಸದೀಕ್ಶೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟರು.ಆದಿಕೇಶವಎಂಬ ಅಂಕಿತದಲ್ಲಿ ಕೀರ್ತನೆಗಳನ್ನು,ತತ್ವಗರ್ಭಿತವಾದಮುಂಡಿಗೆಗಳನ್ನು ರಚಿಸಿದ್ದಲ್ಲದೆ ಅನೇಕ ಕೃತಿಗಳನ್ನು ರಚಿಸಿದರು.

 

ಶ್ರೀ ಪುರಂದರದಾಸರು
ದಾಸರ ನಿಜನಾಮ ಶೀನಪ್ಪನಾಯಕ. ಪುಣೆಯ ಬಳಿ ಪುರಂದರಗಡದಲ್ಲಿ ೧೪೮೪ ರಲ್ಲಿ ಜನನ. ತಂದೆಯ ಹೆಸರು ವರದಪ್ಪನಾಯಕ. ವೃತ್ತಿ ಚಿನ್ನದ ವ್ಯಾಪಾರ.ಪರಮಲೋಭಿ. ಹೆಂಡತಿ ಸರಸ್ವತಿ ಮಹಸ್ವಾಮಿ,ಉದಾರಿ, ದೈವಭಕ್ತೆ. ವ್ರತ_ನೇಮಗಳೆಂದರೆ ಅತೀವ ಶ್ರದ್ದೆ. ಒಮ್ಮೆ ನಡೆದ ವಿಚಿತ್ರ ಸಂಗತಿಯಿಂದ ತನ್ನನ್ನು ಮೀರಿದ ಶಕ್ತಿಯ ಕೈವಾಡವಿದೆ ಎಂದು ಅರಿವು ಮೂಡಿತು. ಇದರಿಂದ ಕಡುಲೋಭಿ ಶೀನಪ್ಪನಾಯಕ ಪರಮ ವೈರಾಗ್ಯ ಮೂರ್ತಿಯಾದ. ತನ್ನ ಐಶ್ವರ್ಯವನ್ನೆಲ್ಲಾ ದಾನ ಮಾಡಿದ. ತನಗೆ ಸನ್ಮಾರ್ಗ ತೋರಿದ ಪತ್ನಿಯನ್ನು ಕೊಂಡಾಡಿದ.
ದಾಸ ಸಾಹಿತ್ಯಕ್ಕೆ ಮತ್ತು ಕರ್ನಟಕ ಸಂಸ್ಕೃತಿಗೆ ಇವರ ಕೊಡುಗೆ ಅಪಾರವಾಗಿದ್ದು.ಪುರಂದರೋಪನಿಷತ್ತು ಎಂದು ಹೆಸರಿರುವ ಇವರ ಸಾಹಿತ್ಯ. ಸತ್ವವೂ, ಮಹತ್ವವೂ ಆಗಿ ಜನನದಲ್ಲಿ ಅಚ್ಚಳಿಯದೆ ಸುತ್ತಿಸಲ್ಪಟ್ಟಿದೆ, ಹರಿಗುರುಗಳ ಸ್ಮರಣೆ, ಸ್ತುತಿ,ಅಂತರಂಗ, ವೇದನೆ, ಕೃಷ್ಣಲೀಲೆ, ಸಮಾಜ ವಿಮರ್ಶೆ,ಸಮಾಜ ಭೋದನೆಗಳು ಇವರ ಹಾಡುಗಳಲ್ಲಿ ಕಾಣಬಹುದು.
ಇವರು ಮುಖ್ಯವಾಗಿ ಭಕ್ತಿಗೀತೆಗಳನ್ನು ರಚಿಸಿ ಜನ ಸಾಮಾನ್ಯರಿಗೂ,ಕನ್ನ್ನಡ ಸಾಹಿತ್ಯಕ್ಕೂ ಬೆಸುಗೆಯನ್ನುಂಟು ಮಾಡಿದ ದಾಸವರೇಣ್ಯರು; ಪುರಂದರ ದಾಸರು ೧೫೬೪ ರಲ್ಲಿ ರಕ್ತಾಕ್ಷಿ ಸಂವತ್ಸರದ ಪುಷ್ಯ ಬಹುಳ ಅಮಾವಾಸ್ಯೆಯಂದು ಹಂಪೆಯಲ್ಲಿ ದೈವಧೀನರಾದರು.ಹಂಪೆಯಲ್ಲಿ ಅವರು ತುಂಗಭದ್ರಾ ತೀರದಲ್ಲಿ ವಾಸಿಸುತ್ತಿದ್ದ ಸ್ಥಳ ಪುರಂದರ ಮಂಟಪ ಎಂದು ಈಗಲೂ ಪ್ರಸಿದ್ದವಾಗಿದೆ.

 

ಸರ್ವಜ್ಞ
೧೬_೧೭ ನೇ ಶತಮಾನದ ವಚನಕಾರನಾದ ಈತನ ಜೀವನದ ಬಗ್ಗೆ ಖಚಿತವಾದ ಯಾವುದೇ ಸಂಗತಿ ತಿಳಿದುಬಂದಿಲ್ಲ. ಧಾರವಾಡ ಜಿಲ್ಲೆಯ ಅಂಬಲೂರಿನಲ್ಲಿ ಜನನ. ಸರ್ವಜ್ಞನ ರಚನೆಗಳನ್ನು ವಚನಗಳು ಎಂದು ಕರೆಯುವುದು ರೂಢಿಯಲ್ಲಿದ್ದರೂ ಅವು ವಾಸ್ತವವಾಗಿ ತ್ರಿಪದಿಗಳು. ಅವನ ಹೆಸರಿನಲ್ಲಿ ೨೦೦ ಕ್ಕೂ ಹೆಚ್ಚು ಸಂಖ್ಯೆಯ ತ್ರಿಪದಿಗಳಿವೆ.
ಸರ್ವಜ್ಞ ವೀರಶೈವ ಮತದವನು ಎಂದು ತೋರಿದರೂ ಇವನದು ಮತಾತೀತವಾದ ವಿಶಾಲದೃಷ್ಟಿ. ಸರ್ವಜ್ಞನ ಜಾತಿ ಮಾನವ ಜಾತಿ. ಅವನ ಮತ ದೇವಮತ, ಅವನ ಕಾಲ ಸರ್ವಕಾಲ ಎಂದಿದ್ದಾರೆ ಬೇಂದ್ರೆಯವರು. ನಿರ್ಭೀತವಿರಕ್ತನಾದ ಇವನದು ಸತ್ಯನಿಷ್ಟುರವಾದ ವ್ಯಕ್ತಿತ್ವ. ಅಗಾಧ ಪಾಂಡಿತ್ಯ ,ಅಪಾರ ಜೀವನುಭವ, ಬಲ ತೀಕ್ಷ್ಣವಾದ ಅದರೆ ಅತಿ ಸರಳವಾದ ಭಾಷೆ. ಜಾನಪದ ಸತ್ವ, ಸಮಾಜದ ಮೂಡನಂಬಿಕೆಗಳನ್ನು ಕಟುವಾಗಿ ಟೀಕಿಸುವ ಪ್ರಾಣಿಕತೆಯಿರುವ ಸರ್ವಜ್ಞನ ತ್ರಿಪದಿಗಳು ಕನ್ನಡದ ಅತ್ಯಂತ ಜನಪ್ರಿಯ ವಚನಗಳಾಗಿವೆ.ತಮಿಳಿನ ತಿರುವಳ್ಳವರ್. ತೆಲುಗಿನ ವೇಮನರಂತೆ ಕನ್ನಡದಲ್ಲಿ ಸರ್ವಜ್ಞನ ಸ್ಥಾನ ವಿಶಿಷ್ಟವಾದದ್ದು.

 

ಸಂತ ಶಿಶುನಾಳ ಶರಿಫ
ಇವರ ಮೊದಲಿನ ಹೆಸರು ಮಹಮ್ಮದ ಶರೀಫ. ಶಿಗ್ಗವಿ ತಾಲೂಕಿನ ಶಿಶುನಾಳ ಇವರ ಜನ್ಮಸ್ಥಳ.೧೮೧೯ ಮಾರ್ಚ್೦೭ ರಂದು ಜನಿಸಿದರು. ಕನ್ನಡದ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೇ ಅದರ ಹಂಗು ಹರಿದುಕೊಂಡು ಆಧ್ಯತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿಕೊಂಡರು.
ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಿಂದಲೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ ವಿಕಸಗಳಿಗೆ ಮುಡುಪಿಡಲು ಮೊದಲು ಮಾಡಿದರು.


 

 

ಡಾ|| ದ.ರಾ ಬೇಂದ್ರೆ
(ಅಂಬಿಕಾತನಯದತ್ತ)
೧೯೪೩ - ಶಿವಮೊಗ್ಗ - ೨೭ನೆಯ ಕ.ಸಾ.ಸ. ಅಧ್ಯಕ್ಷರು
ಜೀವನಪಥ
ಜನನ : ೩೧.೦೧.೧೮೯೬, ಧಾರವಾಡ, ಮರಣ : ೨೬.೧೦.೧೯೮೧ (ಮುಂಬಯಿಯಲ್ಲಿ)
ತಂದೆ-ತಾಯಿ : ರಾಮಚಂದ್ರಬೇಂದ್ರೆ, ಅಂಬವ್ವ
ಗೌರವ : ೧೯೫೮ - "ಅರಳು-ಮರಳು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
೧೯೬೫ - ಮರಾಠಿ ಕೃತಿ "ಸಂವಾದ" ಕ್ಕೆ ಕೇಳ್ಕರ್ ಬಹುಮಾನ
೧೯೬೬ - ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
೧೯೬೮ - ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ , ಕೇಂದ್ರ ಸರ್ಕಾರದ "ಪದ್ಮಶ್ರೀ" ಪ್ರಶಸ್ತಿ
೧೯೬೯- ಕೇಂದ್ರ ಸಾಹಿತ್ಯ ಅಕಾಡೆಮಿ "ಫಲೋಗೌರವ"
೧೯೭೪ - "ನಾಕುತಂತಿ" ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ
೧೯೭೬ - ಕಾಶಿ ವಿಶ್ವ ವಿದ್ಯಾಪೀಠದ ಗೌರವ ಡಾಕ್ಟರೇಟ್.
ಸಾಹಿತ್ಯಪಥ
ಕೃತಿಗಳು : ಗರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಮೇಘದೂತ, ಗಂಗಾವತರಣ, ಅರಳು-ಮರಳು, ನಮನ , ಪರಿಚಯ, ಉತ್ತರಾಯಣ, ಮುಗಿಲಮಲ್ಲಿಗೆ, ಯಕ್ಷಯಕ್ಷಿ ನಾಕುತಂತಿ, ಬಾ ಹತ್ತರ, ಮತ್ತೆ ಶ್ರಾವಣ ಬಂತು, ಕಾವ್ಯೋದ್ಯೋಗ , ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕ ರತ್ನಗಳು , ಸಾಹಿತ್ಯ ವಿರಾಟ್ ಸ್ವರೂಪ , ಕುಮಾರವ್ಯಾಸ , ಟಾಗೋರರ ನೂರೊಂದು ಕವನಗಳು ಉಪನಿಷತ್ ರಹಸ್ಯ ಸಾಹಿತ್ಯ ಮತ್ತು ವಿಮರ್ಶೆ

 

ಡಾ|| ಕುವೆಂಪು
ಜನನ : ೧೯೦೪, ಡಿಸೆಂಬರ್ ೨೯, ಹಿರೇಕೂಡಿಗೆಯಲ್ಲಿ. ಬೆಳೆದದ್ದು ಕುಪ್ಪಳ್ಳಿಯಲ್ಲಿ.
ಶಿಕ್ಷಣ : ೧೯೧೮ ಮೈಸೂರು ಹಾರ್ಡ್‌ವಿಕ್ ಹೈಸ್ಕೂಲು, ಮಹಾರಾಜಾ ಕಾಲೇಜಿನಲ್ಲಿ ವ್ಯಾಸಂಗ. ೧೯೨೯ ಕನ್ನಡದಲ್ಲಿ ಎಂ.ಎ., ಪದವಿ ಪದವಿ ಮತ್ತು ಅಧ್ಯಾಪಕ ವೃತ್ತಿ. ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಿನ್ಸಿಪಾಲ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತಿ. ೧೯೫೫ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ. ೧೯೬೯ರಲ್ಲಿ ಅದೇ ಕೃತಿಗೆ ಜ್ಞಾನಪೀಠಕ್ಕೆ ಪ್ರಶಸ್ತಿ ೧೯೮೮ರಲ್ಲಿ ಪಂಪ ಪ್ರಶಸ್ತಿಯ ಪ್ರಥಮ ಪುರಸ್ಕಾರ. ೧೯೬೪ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಮುಂದೆ ಪದ್ಮವಿಭೂಷಣ ಪ್ರಶಸ್ತಿ. ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಎ.ಲಿಟ್. ನಿಧನ : ೧೦ ನವೆಂಬರ್ ೧೯೯೪.
ಕೃತಿಗಳು : ಬೊಮ್ಮನಹಳ್ಳಿಯ ಕಿಂದರಿ ಜೋಗಿ, ಕೊಳಲು, ಕೃತಿಕೆ, ಅಗ್ನಿಹಂಸ, ಕಥನಕವನಗಳು, ಕಲಾಸುಂದರಿ, ನವಿಲು, ಪಕ್ಷಿಕಾಶಿ, ಪಾಂಚಜನ್ಯ, ಕಿಂಕಿಣಿ, ಪ್ರೇಮ ಕಾಶ್ಮೀರ, ಶ್ರೀ ರಾಮಾಯಣ ದರ್ಶನಂ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್ , ಶೂದ್ರ ತಪಸ್ವಿ, ಬಲಿದಾನ, ಚಂದ್ರಹಾಸ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇತ್ಯಾದಿ

 

ಡಾ|| ಕೆ. ಶಿವರಾಮ ಕಾರಂತ
೧೯೫೫-ಮೈಸೂರು-೩೭ನೇ ಕ.ಸಾ.ಸ.ಅಧ್ಯಕ್ಷರು,
ಜೀವನಪಥ
ಜನನ : ೧೦.೧೦.೧೯೦೨, ದ.ಕ.ಜಿಲ್ಲೆಯ ಕೋಟ
ಮರಣ : ೧೯೯೭ ಡಿಸೆಂಬರ್
ತಂದೆ-ತಾಯಿ : ಶೇಷ ಕಾರಂತ, ಲಕ್ಷಮ್ಮ
೧೯೫೯ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೮ - ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ (ತುರ್ತು ಪರಿಸ್ಥಿತಿ ಹೇರಿಕೆ ಪ್ರತಿಭಟಿಸಿ ೧೯೭೫ರಲ್ಲಿ ಈ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಾಸ್ ಮರಳಿಸಿದರು)
೧೯೭೮ : ಜ್ಞಾನಪೀಠ ಪ್ರಶಸ್ತಿ
ತುಲಸೀ ಸಮ್ಮಾನ್ , ಇಂದಿರಾಗಾಂಧಿ ಪರ್ಯಾವರಣ ಪ್ರಶಸ್ತಿ , ಪಂಪ ಪ್ರಶಸ್ತಿ , ಗೌರವ ಡಾಕ್ಟರೇಟ್ ಇತ್ಯಾದಿ ಪ್ರಶಸ್ತಿಗಳು.
ಸಾಹಿತ್ಯ ಪಥ
ಚೋಮನದುಡಿ, ಸರಸಮ್ಮನ ಸಮಾಧಿ, ಮರಳಿ ಮಣ್ಣಿಗೆ , ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು . ಮೈಮನಗಳ ಸುಳಿಯಲ್ಲಿ ಇತ್ಯಾದಿ

 

ಡಾ|| ಪು.ತಿ ನರಸಿಂಹಾಚಾರ್
೧೯೮೧ - ಚಿಕ್ಕಮಂಗಳೂರು - ೫೩ನೇ ಕ.ಸಾ.ಸ ಅಧ್ಯಕ್ಷರು
ಜೀವನಪಥ
ಜನನ : ೧೭.೦೩.೧೯೦೫, ಮಂಡ್ಯಜಿಲ್ಲೆಯ ಮೇಲುಕೋಟೆ
ಮರಣ: ೧೩.೧೦.೧೯೯೮
ತಂದೆ- ತಾಯಿ : ತಿರುನಾರಾಯಣಯ್ಯಂಗಾರ್, ಶ್ರೀರಂಗಮ್ಮ
ವೃತ್ತಿ -ಗೌರವ : ೧೯೫೨-೬೦ ಮೈಸೂರು ಶಾಸನ ಸಭೆಯಲ್ಲಿ ಸಂಪಾದಕರು
೧೯೯೬- ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಂಸದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ
೧೯೭೧ - ಮೈ.ವಿ. ವಿದ್ಯಾಲಯದ ಗೌರವ ದಿ ಲಿಟ್ ಪದವಿ
೧೯೯೦ - "ಪದ್ಮಶ್ರೀ" ಪ್ರಶಸ್ತಿ
ಯದುಗಿರಿ ವೀಣೆ ಸಮರ್ಪಿತ ಗ್ರಂಥ
ಕೇಂದ್ರ ಸಾಹಿತ್ಯ ಆಕಾಡೆಮಿ "ಫಲೋಶಿಪ್"
೧೯೯೧ - ಶ್ರೀಹರಿ ಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ
ಸಾಹಿತ್ಯ ಪಥ
ಕೃತಿಗಳು : ಹಣತೆ, ಮಾಂದಳಿರು, ಗಣೇಶ ದರ್ಶನ, ಅತಿಥಿ, ಶ್ರೀಹರಿ ಚರಿತೆ, ಅಹಲ್ಯೆ, ಶಬರಿ, ಸತ್ಯಾಯನ ಹರಿಶ್ಚಂದ್ರ, ಗೋಕುಲನಿರ್ಗಮನ, ಹಂಸದಮಯಂತಿ ಮತ್ತು ಇತರ ರೂಪಕಗಳು , ರಥ ಸಪ್ತಮಿ, ಹರಿಚರಿತ, ರಸಸಮೀಕ್ಷೆ ಸಿರಿಬಾಯಿ ನುಡಿ, ಕನ್ನಡ ಭಗವದ್ಗೀತೆ, ಮಹಾಪ್ರಸ್ಥಾನ, ಗಯಟೆ ಕವಿಯ ಫಾಸ್ಟ್.

 

ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್
೧೯೨೯ - ಬೆಳಗಾವಿ - ೧೫ನೇಯ ಕ.ಸಾ.ಸ ಅಧ್ಯಕ್ಷರು
ಜೀವನಪಥ
ಜನನ : ೦೬.೦೮.೧೮೯೧ , ಕೋಲಾರ ಜಿಲ್ಲೆ, ಮಾಲೂರು ತಾಲ್ಲೂಕಿನ ಮಾಸ್ತಿ
ಮರಣ : ೦೬.೦೬.೧೯೮೬
ತಂದೆ-ತಾಯಿ : ರಾಮಸ್ವಾಮಿ ಅಯ್ಯಂಗಾರ್, ತಿರುಮಲಮ್ಮ
ಗೌರವ : ೧೯೪೨ - ರಾಜಸೇವಾಶಕ್ತಿ ಬಿರುದು
೧೯೪೬ - ಮದರಾಸಿನಲ್ಲಿ ನಡೆದ ದಕ್ಷಿಣ ಭಾರತೀಯಭಾಷೆಗಳ ಸಮ್ಮೇಳನದ ಅಧ್ಯಕ್ಷತೆ.
೧೯೬೧ - ಅಖಿಲ ಭಾರತ ಬರಹಗಾರ ಸಮ್ಮೇಳನಾಧ್ಯಕ್ಷತೆ
೧೯೫೬ - ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್.
೧೯೭೭ - ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್.
ಸಾಹಿತ್ಯ ಪಥ
ಕೃತಿಗಳು : ಸಣ್ಣಕತೆಗಳ ೧೧ ಸಂಪುಟಗಳು , ಸುಬ್ಬಣ್ಣ ಬಿನ್ನಹ ಗೌಡರಮಲ್ಲಿ, ರಾಮನವಮಿ ನವರಾತ್ರಿ , ಶ್ರೀರಾಮ, ಪಟ್ಟಾಭಿಷೇಕ , ಚೆನ್ನಬಸವನಾಯಕ, ಚಿಕ್ಕವೀರ ರಾಜೇಂದ್ರ
೧೯೩೦ - ಮೈಸೂರು - ೧೬ನೆಯ ಕ.ಸಾ.ಸ. ಅಧ್ಯಕ್ಷರು.

 

ಕೆ.ಎಸ್. ನರಸಿಂಹಸ್ವಾಮಿ
ಜನನ : ೧೯೧೫ ಜನವರಿ ೨೬, ಮಂಡ್ಯಜಿಲ್ಲೆಯ ಕಿಕ್ಕೇರಿ
ಶಿಕ್ಷಣ : ಪ್ರೌಢಶಾಲೆ , ಇಂಟರ್ ಮೀಡಿಯೇಟ್ ಮೈಸೂರಿನಲ್ಲಿ. ೧೯೭೭ರಲ್ಲಿ ತೆರೆದ ಬಾಗಿಲು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ೧೯೮೭ರಲ್ಲಿ ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ . ೧೯೯೦ರಲ್ಲಿ ಮೈಸೂರಿನಲ್ಲಿನಡೆದ ೬೦ನೇ ಕ.ಸಾ.ಸಮ್ಮೇಳನದ ಅಧ್ಯಕ್ಷತೆ. ೧೯೯೨ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ೧೯೯೫ "ದುಂಡು ಮಲ್ಲಿಗೆ" ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ , ೧೯೯೬ರಲ್ಲಿ ಮಾಸ್ತಿ ಸಾಹಿತ್ಯ ಪ್ರಶಸ್ತಿ .
ನಿಧನ : ೨೦೦೪

ಕೃತಿಗಳು : ಮೈಸೂರು ಮಲ್ಲಿಗೆ, ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ(ಸಮಗ್ರ ಕವಿತೆಗಳು) ಇತ್ಯಾದಿ.

 

ವಿನಾಯಕ ಕೃಷ್ಣ ಗೋಕಾಕ್
೧೯೫೮ - ಬಳ್ಳಾರಿ - ೪೦ನೇ ಕ.ಸಾ.ಸ. ಅಧ್ಯಕ್ಷರು
ಜೀವನಪಥ
ಜನನ : ೧೯೦೯ ಆಗಸ್ಟ್ ೯
ಮರಣ : ೧೯೯೨
೧೯೬೦ - ಪದ್ಮಶ್ರೀ ಪ್ರಶಸ್ತಿ
೧೯೮೨ - ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು
೧೯೯೧ - ಜ್ಞಾನಪೀಠ ಪ್ರಶಸ್ತಿ
ಸಾಹಿತ್ಯ ಪಥ
ಧ್ಯಾವಾ ಪೃಥವೀ, ಕಲೋಪಾಸಕ, ಸಮರಸವೇ ಜೀವನ, ಸಮುದ್ರದಾಚೆಯಿಂದ.

 

ದೇ. ಜವರೇಗೌಡ
ಜನನ : ೬ ಜುಲೈ, ೧೯೧೮, ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಚಕ್ಕೆರೆ.
ಶಿಕ್ಷಣ : ಚನ್ನಪಟ್ಟಣ, ಬೆಂಗಳೂರು, ಮೈಸೂರುಗಳಲ್ಲಿ ಶಾಲಾ ಕಾಲೇಜು ವಿದ್ಯಾಭ್ಯಾಸ. ೧೯೪೧ ಮಹಾರಾಜಾ ಕಾಲೇಜು, ಬಿ.ಎ. ಅನರ್ಸ್, ೧೯೪೩ ಎಂ.ಎ., ೧೯೪೬ರಲ್ಲಿ ಮೈ.ವಿ.ವಿ.ದಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಪ್ರಾರಂಭ. ೧೯೯೬ ಕನ್ನಡ ಅಧ್ಯಯನ ಸಂಸ್ಥೆಯ ಪ್ರಥಮ ಸಂಸ್ಥಾಪಕ ಸಿರ್ದೇಶಕರು. ೧೯೬೯-೭೫ ಮೈಸೂರು ವಿ.ವಿ.ದ ಕುಲಪತಿ.

 

 

ಡಾ|| ಯು.ಆರ್. ಅನಂತಮೂರ್ತಿ
೨೦೦೨ - ತುಮಕೂರು - ೬೯ನೇ ಕ.ಸಾ.ಸ ಅಧ್ಯಕ್ಷತೆ
ಜೀವನಪಥ
ಜನನ:೨೧.೧೨.೧೯೩೨,ತೀರ್ಥಹಳ್ಳಿ ತಾಲ್ಲೂಕು ಮೇಳಿಗೆಹಳ್ಳಿ
ತಂದೆ-ತಾಯಿ: ಯು.ಪಿ.ರಾಜಗೋಪಾಲಚಾರ್ಯ, ಸತ್ಯಭಾಮ
ವೃತ್ತಿ-ಗೌರವ : ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ, ಕೇರಳ ವಿಶ್ವವಿದ್ಯಾಲಯದ ಕುಲಪತಿ
೧೯೯೪ - "ಜ್ಞಾನಪೀಠ" ಪ್ರಶಸ್ತಿ ( ಸಮಗ್ರಕಾವ್ಯ )
೧೯೭೦ - "ಸಂಸ್ಕಾರ" ಚಲನಚಿತ್ರವಾಗಿದೆ
೧೯೯೫ - ಶಾಂತಿ ಭಾರತಿ ದಿ.ಲಿಟ್ ಗೌರವ, ಶಿಖರ ಸನ್ಮಾನ ಪ್ರಶಸ್ತಿ
೧೯೯೮ - ಪದ್ಮಭೂಷಣ ಪ್ರಶಸ್ತಿ
ಸಾಹಿತ್ಯಪಥ :
ಕೃತಿಗಳು : ಅವಸ್ಥೆ, ಭಾರತೀಪುರ, ಸಂಸ್ಕಾರ, ಆಕಾಶ ಮತ್ತು ಬೆಕ್ಕು, ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಸನ್ನಿವೇಶ, ಸಮಕ್ಷಮ ಆವಾಹನೆ.

 

ಜಿ.ಎಸ್. ಶಿವರುದ್ರಪ್ಪ
ಜನನ : ೧೯೨೬ ಫೆಬ್ರವರಿ ೭, ಶಿವಮೂಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.
ಶಿಕ್ಷಣ:ಮೈಸೂರುವಿಶ್ವವಿದ್ಯಾಲಯದಲ್ಲಿ ೧೯೪೯ರಲ್ಲಿ ಬಿ.ಎ. ಆನರ್‍ಸ್ ಮತ್ತು ೧೯೫೩ರಲ್ಲಿ ಕನ್ನಡ ಎಂ.ಎ. ಸೌಂದರ್‍ಯ ಸಮೀಕ್ಷೆ ಪ್ರೌಢ ಪ್ರಬಂಧಕ್ಕೆ ೧೯೬೦ ರಲ್ಲಿ ಪಿ.ಎಚ್.ಡಿ., ೧೯೭೦ರಿಂದ ೧೯೮೬ ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಮತ್ತು ನಿರ್ದೇಶಕರು. ೧೯೭೪, ಮಾಸ್ಕೋದಲ್ಲಿ ೨೨ ದಿನ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ. ೧೯೮೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಿಮಿ ಪುರಸ್ಕಾರ. ೧೯೮೪ರಲ್ಲಿ ಕಾವ್ಯಾರ್ಥ ಚಿಂತನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ೧೯೮೭ರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪದವಿ ಮಾನ್ಯತೆ. ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೆಯ ಅ,ಭಾ. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ. ೧೯೯೪-೯೫ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರು. ೧೯೯೭ ಪಂಪ ಪ್ರಶಸ್ತಿ ಗೌರವ
ಕೃತಿಗಳು : ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ತೀರ್ಥವಾಣಿ, ಕಾರ್ತೀಕ, ದೀಪದ ಹೆಜ್ಜೆ, ಅನಾವರಣ, ತೆರೆದ ದಾರಿ, ಮಾಸ್ಕೋದಲ್ಲಿ ೨೨ ದಿನ, ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ, ವಿಮರ್ಶೆಯ ಪೂರ್ವಪಶ್ಚಿಮ, ಪರಿಶೀಲನ, ಗತಿಬಿಂಬ, ಪ್ರತಿಕ್ರಿತೆ, ನವೋದಯ, ಕನ್ನಡ ಸಾಹಿತ್ಯ ಸಮೀಕ್ಷೆ, ಅನುರಣನ, ಇತ್ಯಾದಿ.

 

ಡಾ|| ಗಿರೀಶ್ ಕಾರ್ನಾಡ್
ಮುಖ್ಯ ಸಂಗತಿಗಳು
೧೯೩೮ : ಮೇ ೧೯ರಂದು ಜನನ
೧೯೬೩-೭೦ : ಉಪವ್ಯವಸ್ಥಾಪಕರು, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ಮದರಾಸು,
೧೯೭೨ :ಕಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
೧೯೯೨ : ಭಾರತ ಸರ್ಕಾರದಿಂದ "ಪದ್ಮಭೂಷಣ"
೧೯೯೮ : ಜ್ಞಾನಪೀಠ ಪ್ರಶಸ್ತಿ
ಧಾರವಾಡ ಕಲಾಕೇಂದ್ರ ಸ್ಥಾಪನೆ
ಪುಣೆಯ ಫಿಲ್ಮ್ ಇನ್ಸಿಟ್ಯೂಟ್ ನಿರ್ದೇಶಕ,
ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷ
ಇಂಗ್ಲೇಂಡಿನ ಆಕ್ಸ್‌ಫರ್ಡ್ - ಯೂನಿಯನ್ ಸೊಸೈಟಿಯ ಅಧ್ಯಕ್ಷ
ಅಮೆರಿಕ, ಜರ್ಮನಿ, ಮುಂತಾದ ದೇಶದಲ್ಲಿ ಇವರ ನಾಟಕಗಳ ಪ್ರದರ್ಶನ
"ಯುಯಾತಿ" ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ
ಇವರ ನಿರ್ದೇಶನದ ವಂಶವೃಕ್ಷ / ತಬ್ಬಲಿಯು ನೀನಾದೆ ಮಗನೆ
ಚಲನಚಿತ್ರಗಳಿಗೆ ಭಾರತ ಸರ್ಕಾರದ ರಜತ ಕಮಲ ಪ್ರಶಸ್ತಿ
ತಾವೇ ನಿರ್ದೇಶಿಸಿದ ಉತ್ಸವ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ
ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ
ಷಿಕಾಗೋ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ
"ತಲೆದಂಡ"ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
ಕೆಲವು ಪ್ರಮುಖ ಕೃತಿಗಳು :
ನಾಟಕಗಳು : ಯಯಾತಿ, ಟಿಪ್ಪುಸುಲ್ತಾನ್, ತುಘಲಕ್ , ಹಯವದನ, ನಾಗಮಂಡಲ, ತಲೆದಂಡ, ಅಂಜುಮಲ್ಲಿಗೆ, ಹಿಟ್ಟಿಯ ಹುಂಜ, ಅಗ್ನಿ ಮತ್ತು ಮಳೆ (ಇಂಗ್ಲೀಷ್‌ಗೆ ಭಾಷಾಂತರ ಮತ್ತು ನಾಟಕ ಪ್ರದರ್ಶನ)
ಚಲನಚಿತ್ರಗಳ ನಿರ್ದೇಶನ : ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಉತ್ಸವ್
ಸಾಕ್ಷ ಚಿತ್ರಗಳ ನಿರ್ಮಾಣ : ಕನಕಪುರಂದರ, ದ.ರಾ.ಬೇಂದ್ರೆ, ಸೂಫಿ ಪಂಥ ಮುಂತಾದವು.

 

ಚಿನ್ನವೀರ ಕಣವಿ
ಜನನ : ೧೯೨೮ ಜೂನ್ ೨೮, ಧಾರವಾಡ ಜಿಲ್ಲೆಯ ಹೂಂಬಳದಲ್ಲಿ.
ಶಿಕ್ಷಣ:೧೯೫೬ರಲ್ಲಿ ಪ್ರಸಾರಾಂಗದ ನಿರ್ದೇಶಕರಾಗಿ ನೇಮಕ.೧೯೮೧ರಲ್ಲಿ ಜೀವದ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ೧೯೮೫ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ. ೧೯೮೯ ಕರ್ನಾಟಕ ರಾಜ್ಯ ಪ್ರಶಸ್ತಿ. ೧೯೯೬ರಲ್ಲಿ ಹಾಸನದಲ್ಲಿ ನಡೆದ ೬೫ನೇ ಅ.ಭಾ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೧೯೯೯ರಲ್ಲಿ ಪಂಪ ಪ್ರಶಸ್ತಿ
ಕೃತಿಗಳು : ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ದೀಪದಾರಿ, ಮಣ್ಣಿನ ಎಲ್. ಬಸವರಾಜು
ಜನನ : ೭, ಅಕ್ಷೆಬರ್ ೧೯೧೯, ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಇಡಗನೂರು.
ಶಿಕ್ಷಣ : ಇಡಗನೂರು, ಸಿದ್ಧಗಂಗೆಗಳಲ್ಲಿ ಶಾಲಾ ವಿಧ್ಯಾಭಾಸ, ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಅನರ್ಸ್ ಮತ್ತು ಎಂ.ಎ., ಮೈಸೂರು ವಿ.ವಿ. ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ. ಮೈಸೂರು ವಿ.ವಿ.ದಿಂದ ೧೯೬೮ರಲ್ಲಿ ಅಲ್ಲಮನ ವಚನ ಚಂದ್ರಿಗೆ ಮತ್ತು ಶಿವದಾಸ ಗೀತಾಂಜಲಿ ಕೃತಿಗಳಿಗಾಗಿ ಡಿ.ಲಿಟ್ ಪದವಿ. ವಚನಚಂದ್ರಿಕೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ೧೯೯೬ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬುದ್ಧ ಚರಿತ ಕ್ಕೆ ಅನುವಾದ ಪ್ರಶಸ್ತಿ.
ಕೃತಿಗಳು : ಪಂಪಕವಿಯ ಆದಿಪುರಾಣ, ಸರಳ ಪಂಪ ಭಾರತ, ಅಲ್ಲಮನ ವಚನಚಂದ್ರಿಕೆ, ಶಿವದಾಸ ಗೀತಾಂಜಲಿ, ಕನ್ನಡ ಛಂದಸ್ಸಂಪುಟ, ಶಪ್ದಮಣಿದರ್ಪಣಂ, ಬುದ್ಧಚರಿತ, ಸೌಂದರನಂದ, ಭಾಸನ ನಾಟಕಗಳ ಗದ್ಯಾನುವಾದ, ಗೂಳೂರು, ಇತ್ಯಾದಿ                                             

 
 
  
 

ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕನ್ನಡಪ್ರಪಂಚ.ಇನ್                                      Copyright @ kannadaprapancha.in, All rights reserved