ಕನ್ನಡ ಕವಿಗಳ ಮಾಹಿತಿ                                                                                                                                                                                     ಮುಂದಿನಪುಟಕ್ಕೆ 

ಸಾ.ಶಿ.ಮರುಳಯ್ಯ
ಸಾ.ಶಿ. ಮರುಳಯ್ಯನವರು ೧೯೩೧ರ ಜನವರಿ ೨೮ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಜನಿಸಿದರು. ಸಾಸಲು ಶಿವರುದ್ರಯ್ಯ ಮರುಳಯ್ಯ ಇವರ ಪೂರ್ಣ ಹೆಸರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ ಎಂ.ಎ. ಪದವಿಗಳನ್ನು ಪಡೆದುಕೊಂಡರು. ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೭೧ ರಲ್ಲಿ ಪಿ.ಎಚ್.ಡಿ. ಪದವಿ ಪಡೆದುಕೊಂಡರು. ತದನಂತರ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪಡೆದುಕೊಂಡರು. ತದನಂತರ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ನಡೆಸಿದರು.  ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿ ಹಲವಾರು ಭಾರತೀಯ ಆಡಳಿತ ಸೇವೆ, (ಐ.ಎ.ಎಸ್), ಕರ್ನಾಟಕ ಆಡಳಿತ ಸೇವೆ (ಕೆ.ಎ.ಎಸ್) ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದಾರೆ.

ಕೃತಿಗಳು
ರಾಸಲೀಲೆ, ಕನ್ನಡ ಭಾಷಾಲೋಕ ಮತ್ತು ಪೂರಕ ಸಾಹಿತ್ಯ, ಅನಿಕೇತನ, ಅಕ್ಕನ ವಚನಗಳು, ಅವಳಿಪಡೆ ನುಡಿಕೋಶ, ಭಾರತೀಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನಕಲಾಂಕಲಷ್ಮಿ, ಕನ್ನಡ ಭಾಷಾಪ್ರವೇಶ, ಪರಿಕಲ್ಪನೆಗಳು, ಸಾ.ಶಿ. ಮ ಗದ್ಯ ಸಾಹಿತ್ಯ, ಸಾ.ಶಿ.ಮ ಸಂಶೋಧನೆ, ಸಾ.ಶಿ.ಮ ವಿಮರ್ಶೆ, ಸಾ.ಶಿ.ಮ ಸಮಗ್ರಿ ಕಾವ್ಯ, ಗೌರತಮ ಬುದ್ಧ, ಸಿದ್ದರಾಮಯ್ಯ ದೇವರ ಚನಗಳು ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು:
೧೯೬೨ರಲ್ಲಿ ಕರ್ನಾಟಕ ಸರ್ಕಾರದ ಪ್ರಶಸ್ತಿ
೧೯೬೩ರಲ್ಲಿ ದೇವರಾಜ ಬಹದ್ದೂರ್ ಬಹುಮಾನ
೧೯೭೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ;
೧೯೯೯ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದವು.
 

 

ಹಾ.ಮಾ. ನಾಯಕ
ಹಾ.ಮಾ.ನಾಯಕರು ೧೯೩೧ ನವೆಂಬರ್ ೧೨ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ ಗ್ರಾಮದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಹಾರೋಗದ್ದೆ ಮಾನಪ್ಪ ನಾಯಕ. ತಂದೆ ಶ್ರೀನಿವಾಸ ನಾಯಕ, ತಾಯಿ ರುಕ್ಮಿಣಿಯಮ್ಮ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಆಗುಂಬೆಯ ಹತ್ತಿರದ ನಾಲೂರಿನಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮೇಗರವಳ್ಳಿ, ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಹಾಗೂ ಬಿ.ಎ. ಪದವಿಯನ್ನು ಮೈಸೂರು ಮಹಾರಾಜ ಕಾಲೇಜಿನಲ್ಲೂ ಪಡೆದುಕೊಂಡರು. ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದುಕೊಂಡರು. ೧೯೬೨ರಲ್ಲಿ ಫುಲ್ ಬ್ರೈಟ್ ವಿದ್ಯಾರ್ಥಿವೇತನ ಪಡೆದು ಅಮೇರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯಿಕ ಮತ್ತು ಆಡುಭಾಷೆ ಎಂಬ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದುಕೊಂಡ ಇವರು ಪ್ರತಿಭಾವಂತ ಲೇಖಕರು.
ಕನ್ನಡ ಅಂಕಣ ಬರಹಕ್ಕೆ ಘನೆ, ಗೌರವ, ಕೀರ್ತಿ, ಸಾಹಿತ್ಯಿಕ ಮೌಲ್ಯ ತಂದುಕೊಟ್ಟ ಪ್ರಸಿದ್ಧ ಸಾಹಿತಿ. ಕನ್ನಡದ ಕೆಲಸವನ್ನು ಕಟ್ಟುವಲ್ಲಿ ಬದುಕು ಸವೆಸಿದ ಧೀಮಂತ ಹೋರಾಟಗಾರ.
೧೯೫೫ರಲ್ಲಿ ವಿದ್ಯಾಭ್ಯಾಸ ಪೂರೈಸಿದ ನಂತರ ತುಮಕೂರಿನಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದರು. ೧೯೫೯ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಭಾಷಾ ವಿಜ್ಞಾನದ ರೀಡರ್ ಆದರು. ೧೯೬೧ರಲ್ಲಿ ಸ್ನಾತಕೋತ್ತರ ಕನ್ನಡ ವಿಭಾಗಕ್ಕೆ ಬಂದ ಇವರು ಕಾಲಕ್ರಮೇಣ ಪ್ರವಾಚಕರಾಗಿ ೧೯೬೮ರಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೬೯ರಲ್ಲಿ ದೆ.ಜೇ.ಗೌ. ಅವರ ನಂತರ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದರು. ೧೯೮೪ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಎರಡು ವರ್ಷಗಳ ಕಾಲ ಸೇವೆ ಮಾಡಿ ತಾತ್ವೊಲ ಕಾರಣಗಳಿಂದಾಗಿ ರಾಜೀನಾಮೆ ನೀಡಿ ಮೈಸೂರು ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಗೆ ಪ್ರಾಧ್ಯಾಪಕರಾಗಿ ಮರಳಿದರು. ೧೯೯೧ರಲ್ಲಿ ವೃತ್ತಿಯಿಂದ ನಿವೃತ್ತರಾದರು.
ಹಾ.ಮಾ.ನಾಯಕರು ಹದಿನೈದು ವರ್ಷಗಳಷ್ಟು ಕಾಲ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ದೇ.ಜೆ.ಗೌ. ಆರಂಭಿಸಿದ ಕನ್ನಡ ವಿಶ್ವಕೋಶ, ಎಫಿಗ್ರಾಫಿಯಾ ಆಫ್ ಕರ್ನಾಟಕ, ಹರಿದಾಸ ಸಾಹಿತ್ಯ ಸಂಪಾದನೆ, ಜಾನಪದ ಗ್ರಂಥಗಳ ಪ್ರಕಟಣೆಯ ಯೋಜನೆಗಳನ್ನು ಮುನ್ನಡೆಸಿದರು. ರಚನಾತ್ಮಕ ಹಾಗೂ ಮಹತ್ವಪೂರ್ಣ ಕೆಲಸಗಳಿಂದ ಕನ್ನಡ ಕಟ್ಟುವ ಕಾರ್ಯವನ್ನು ನಿರಂತರವಾಗಿಸಿದರು. ಹಾ.ಮಾ. ನಾಯಕರು ೨೦೦೦ದ ನವೆಂಬರ್ ೧೦ರಂದು ನಿಧನರಾದರು.

ಕೃತಿಗಳು.
ಬಾಳ್ನೋಟಗಳು, ಸೂಲಂಗಿ, ಸಂಗತಿ, ನಮ್ಮ ಮನೆಯ ದೀಪ, ಸಂಪ್ರತಿ-೨, ಸಂಪ್ರತಿ-೩ ಸಂಭ್ರಮ, ಸೊಡರು, ಸಿಂಚನ, ಸಂಪಣ ಸಂಬಲ, ಕನ್ನಡ ಮನಸ್ಸು, ಕೆಲವು ಪ್ರಸಂಗಗಳು, ವೆಂಕಣ್ಣಯ್ಯ, ಇಂಗ್ಲಿಷ್‌ನಲ್ಲಿ ಲಿಟರರಿ ಅಂಡ್ ಕೊಲೆಕ್ವಿಯಲ್ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ, ವರ್ಧಮಾನದ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸುರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ಐ.ಬಿ.ಎಚ್. ಎಜುಕೇಷನಲ್ ಟ್ರಸ್ಟ್ ಪ್ರಶಸ್ತಿ,
೧೯೮೯ರಲ್ಲಿ ಇವರ ಸಂಪ್ರತಿಗೆ ಕೇಂದ್ರ ಸಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಜ್ಞಾನಪೀಠ ಸಮಿತಿ, ಬಿ.ಡಿ. ಗೋಯೆಂಕಾ ಮುಂತಾದ ಬಹುಮಾನಗಳ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
೬೦ ವರ್ಷಗಳು ತುಂಬಿದಾಗ ಅಭಿಮಾನಿಗಳು ಮಾನ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದರು.
ಇವರು ೧೯೮೫ರಲ್ಲಿ ಬೀದರ್‌ನಲ್ಲಿ ಜರುಗಿದ ೫೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
 

ಎಚ್.ಎಲ್. ನಾಗೇಗೌಡ
ಎಚ್.ಎಲ್.ನಾಗೇಗೌಡ ಅವರು ೧೯೧೫ರ ಫೆಬ್ರವರಿ ೧೧ರಂದು ಮಂಡ್ಯ ಜಿಲ್ಲೆಯ ನಾಗಮಂಡಲ ತಾಲ್ಲೂಕಿನ ಹೆರಗನಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮದೇವಿ, ಹೆರಗನಹಳ್ಳಿ, ನಾಗತಿಹಳ್ಳಿ, ಚನ್ನರಾಯಪಟ್ಟಣ, ಬೆಂಗಳೂರು, ಮೈಸೂರು, ಪೂನಾ ಮುಂತಾದ ಕಡೆಗಳಲ್ಲಿ ಶಿಕ್ಷಣ ಪಡೆದುಕೊಂಡರು.
ಇವರು ವಿಜ್ಞಾನ ಮತ್ತು ಕಾನೂನು ಪದವಿಗಳನ್ನು ಪಡೆದ ನಂತರ ೧೯೩೯ರಲ್ಲಿ ನರಸಿಂಹರಜಪುರ ಕೋಟ್ ಹೆಡ್ ಮುನ್ಸಿಯಾಗಿ ಸರ್ಕಾರಿ ಸೇವೆಗೆ ಸೇರಿದರು. ತದನಂತರ ಎಂ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆವಿನ್ಯೂ ಇಲಾಖೆಯಲ್ಲಿ ನೇಮಕಗೊಂಡರು. ತಹಶೀಲ್ದಾರ್ ಆಗಿ, ಅಸಿಸ್ಟೆಂಟ್ ಕಮಿಷನರ್ ಆಗಿ ಭಾರತ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ೧೯೬೧ರಲ್ಲಿ ಐ.ಎ.ಎಸ್. ಶ್ರೇಣಿ ಪಡೆದು ೧೯೬೯ರವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಅನಂತರ ಮುಂದೆ ರಾಜ್ಯದ ಲೇಬರ್ ಕಮಿಷನರ್, ಸರ್ವೆ ಇಲಾಖೆಯ ಮುಖ್ಯಾಧಿಕಾರಿ, ಮುಂಬೈ ಇಲಾಖೆಯ ಕಮಿಷನರ್ ಆಗಿ, ಸೇವೆ ಸಲ್ಲಿಸಿದರು. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾಗಿಯೂ, ಒಮ್ಮೆ ಮಂಡ್ಯ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಉದ್ಯೋಗ ಆಡಳಿತ ಕ್ಷೇತ್ರದಲ್ಲಿದ್ದರೂ ಕೂಡಾ ಇವರ ಮನಸ್ಸು ಒಲಿದದ್ದು ಸಾಹಿತ್ಯ ಮತ್ತು ಜಾನಪದಗಳ ಕಡೆಗೆ, ಕಥೆ, ಕವನ, ಕಾದಂಬರಿ, ಪ್ರವಾಸ ಸಾಹಿತ್ಯ, ಜೀವನ ಚರಿತ್ರೆ, ಜಾನಪದ ಸಾಹಿತ್ಯ, ಆತ್ಮಚರಿತ್ರೆ ಹೀಗೆ ಬಹುಮುಖ ಸಾಹಿತ್ಯವನ್ನು ಪರಿಚಯಿಸಿದವರಲ್ಲಿ ಪ್ರಮುಖರು. ಇವರು ಜಾನಪದ ಗಾಯಕರ ಧ್ವನಿಮುದ್ರಣ ಕರ್ನಾಟಕ ಜಾನಪದ ಪರಂಪರೆಯನ್ನು ಬಿಂಬಿಸುವ ವಿಡಿಯೋ ಚಿತ್ರೀಕರಣ, ಜಾನಪದ ಜಗತ್ತು ಜಾನಪದ ಪತ್ರಿಕೆಯ ಸಂಪಾದಕರು, ಜಾನಪದ ಲೋಕ (ರಾಮನಗರದ ಬಳಿ) ವಸ್ತು ಸಂಗ್ರಹಾಲಯ ಸ್ಥಾಪನೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರು ಆಗಿದ್ದರು. ಇವರು ೨೦೦೫ ಸೆಪ್ಟೆಂಬರ್ ೨೫ರಂದು ನಿಧನವರಾದರು.

ಕೃತಿಗಳು
ಕಾದಂಬರಿಗಳು: ದೊಡ್ಡಮನೆ, ಸೊನ್ನೆಯಿಂದ ಸೊನ್ನೆಗೆ, ಭೂಮಿಗೆ ಬಂದ ಭಗವಂತ,
ಕಥಾ ಸಂಕಲನಗಳು: ಕಂಡು ಕೇಳಿದ ಕಥೆಗಳು, ಖೈದಿಗಳ ಕತೆಗಳು.
ಬೆಟ್ಟದಿಂದ ಬಟ್ಟಲಿಗೆ, ಪ್ರವಾಸಿ ಕಂಡ ಇಂಡಿಯಾ (೮ ಸಂಪುಟಗಳು) ನಾಕಂಡ ಪ್ರಪಂಚ, ನಾಗಸಿರಿ, ಮಾರ್ಕ್‌ಪೋಲೊ ಪ್ರವಾಸಕಥನ.
ಅನುವಾದ: ಕೆನಿಲ್ ವರ್ತ್, ವೆರಿಯರ್ ಎಲ್ಟನ್ನನ ಗಿರಿಜನ ಪ್ರಪಂಚ.
ಸಂಪಾದಕರಾಗಿ: ಸೋಬಾನೆ ಚಿಕ್ಕಮ್ಮನ ಪದಗಳು, ಪದಗಳು, ಪದವವೆ ನಮ್ಮ ಎದೆಯಲ್ಲಿ, ಕರ್ನಾಟಕ ಜನಪದ ಕತೆಗಳು, ಕನ್ನಡ ಜಾನಪದ ಕೋಶ ಇತ್ಯಾದಿ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೭೪ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೮ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
೧೯೯೨ರಲ್ಲಿ ನಾಟಕ ಅಕಾಡೆಮಿ ಫೆಲೋಷಿಪ್
೨೦೦೩ ರಲ್ಲಿ ಪಂಪ ಪ್ರಶಸ್ತಿ
೨೦೦೫ ವಿಧಾನಪರಿಷತ್ತಿನ ಸದಸ್ಯರಾಗಿ ನೇಮಕ
ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ
೧೯೯೫ರಲ್ಲಿ ಮುಧೋಳದಲ್ಲಿ ಜರುಗಿದ ೬೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇವರ ಗೌರವಾರ್ಥವಾಗಿ ನಾಗವಲ್ಲಿ ಎಂಬ ಸಂಭಾವನಾ ಗ್ರಂಥವನ್ನು ಅಭಿಮಾನಿಗಳು ಅರ್ಪಿಸಿದ್ದಾರೆ.
 

ಕೆ.ಎಸ್.ನರಸಿಂಹಸ್ವಾಮಿ
ಕೆ.ಎಸ್. ನರಸಿಂಹಸ್ವಾಮಿಯವರು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೫ರಂದು ಜನಿಸಿದರು. ತಂದೆ ಸುಬ್ಬರಾಯ. ತಾಯಿ ನಾಗಮ್ಮ, ನರಸಿಂಹಸ್ವಾಮಿಯವರ ವಿದ್ಯಾಭ್ಯಾಸ ಮೈಸೂರಿನ ಮಹಾರಾಜ ಪ್ರೌಢಶಾಲೆ, ಇಂಟರ್‌ಮೀಡಿಯೇಟ್ ಕಾಲೇಜ್ ಮತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜುಗಳಲ್ಲಿ ಆಯಿತು. ಇವರ ಕಾಲೇಜು ಅಭ್ಯಾಸ ಆರ್ಥಿಕ ಸಂಕಷ್ಟದಿಂದಾಗಿ ಮೊಟಕಾಯಿತು. ಪದವಿ ವ್ಯಾಸಂಗ ಅಪೂರ್ಣಗೊಂಡಿತು. ತಮ್ಮ ಓದಿನ ವಿಷಯ ಕನ್ನಡವಲ್ಲದಿದ್ದರೂ ಕನ್ನಡ ತರಗತಿಗಳಿಗೆ ಹಾಜರಾಗಿ ಆಲಿಸುತ್ತಿದ್ದರು. ಗಣಿತ, ಭೌತವಿಜ್ಞಾನ, ಇಂಜಿನಿಯರಿಂಗ್ ಇವರ ಪಠ್ಯ ವಿಷಯಗಳಾಗಿದ್ದವು. ೧೯ನೇ ವಯಸ್ಸಿಗೆ ವಿದ್ಯಾಭ್ಯಾಸ ನಿಂತುಹೋಯಿತು. ತಮ್ಮ ೨೨ನೇ ವಯಸ್ಸಿಗೆ ಕೆಲಸಕ್ಕೆ ಸೇರಿದರು. ಶಿವಮೊಗ್ಗದ ವೆಂಕಮ್ಮ ಎಂಬುವವರೊಡನೆ ವಿವಾಹವಾದರು. ಇವರ ಪ್ರೇಮಮಯ ಜೀವನ ಗೀತೆ ರಚನೆಗೆ ಪುಷ್ಠಿ ನೀಡಿತು.
ನವೋದಯ ಕಾವ್ಯಮಾರ್ಗವನ್ನು ಹಿಡಿದು ಮುಂದುವರಿದ ಇವರಿಗೆ ಬಿ.ಎಂ.ಶ್ರೀಕಂಠಯ್ಯನವರ ಇಂಗ್ಲಿಷ್ ಗೀತೆಗಳು ದಾರಿದೀಪವಾಯಿತು. ಇವರ ಮೊದಲ ಕವಲ ಸಂಕಲನ ಮೈಸೂರು ಮಲ್ಲಿಗೆ ೧೯೪೨ರಲ್ಲಿ ಎ.ಆರ್. ಕೃಷ್ಣಶಾಸ್ತ್ರ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ.ಶ್ರೀಕಂಠಯ್ಯನವರ ಮಾರ್ಗದರ್ಶನದಲ್ಲಿ ಬೆಳಕಿಗೆ ಬಂದಿತು. ಕನ್ನಡ ಸಾಹಿತ್ಯದ ಕಾಲದಿಂದ ನವ್ಯಕಾವ್ಯ ಸೃಷ್ಟಿಯ ಕಾಲದವರೆಗೂ ತಮ್ಮ ಕಾವ್ಯ ಸೃಷ್ಟಿಯನ್ನು ನಡೆಸುತ್ತಾ ಬಂದವರು.
ನರಸಿಂಹಸ್ವಾಮಿಯವರು ನಂಜನಗೂಡು, ಮೈಸೂರು, ಬೆಂಗಳೂರುಗಳಲ್ಲಿ ಬೇರೆ ಬೇರೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದಿಂದ ೧೯೭೦ ಜನವರಿ ೨೬ರಂದು ನಿವೃತ್ತರಾದರು. ೨೦೦೩ ಡಿಸೆಂಬರ್ ೨೮ ರಂದು ಬೆಂಗಳೂರಿನಲ್ಲಿ ನಿಧನರಾದರು.

ಕೃತಿಗಳು
ಕವನ ಸಂಕಲನಗಳು: ದೀಪದ ಮಲ್ಲಿ, ಐರಾವತ, ಉಂಗುರ ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ, ಮಲ್ಲಿಗೆಯ ಮಾಲೆ, ದುಂಡುಮಲ್ಲಿಗೆ, ಕೆಲವು ಚೀನಿ ಕವನಗಳು, ರಾಬಟ್ಸ್ ಕವಿಯ ಕೆಲವು ಪ್ರೇಮಗೀತೆಗಳು, ನವಿಲದನಿ, ಸಂಜೆ ಹಾಡು.
ಗದ್ಯ ಬರಹಗಳು: ಮಾದರಿಯ ಕಲ್ಲು, ಉಪವನ, ದಮಯಂತಿ
ಅನುವಾದಿತ ಕೃತಿಗಳು: ಗಾಂಧೀಜಿಯವರ ಹಲವು ಉಕ್ತಿಗಳು, ಯೂರಿಪಿಡೀಸನ ಮಿಡೀಯಾ ನಾಟಕ, ಮಾರ್ಕ್‌ಟ್ಟೇನನ ಹಕಲ್ ಬರಿಫಿನ್ನನ ಸಾಹಸಗಳು, ಸುಬ್ರಹ್ಮಣ್ಯ ಭಾರತಿ, ಮಾಯಶಂಖ ಮತ್ತು ಇರತ ಕೃತಿಗಳು, ರಾಣಿಯ ಗಿಳಿ ಮತ್ತು ರಾಜನ ಮಂಗ ಇವು ಇವರ ಅನುವಾದಿತ ಕೃತಿಗಳು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೩ ರಲ್ಲಿ ಮೈಸೂರು ಮಲ್ಲಿಗೆ ಕೃತಿಯು ದೇವರಾಜ ಬಹದ್ದೂರ್ ಬಹುಮಾನವನ್ನು ಪಡೆದಿದೆ.
೧೯೫೭ರಲ್ಲಿ ಶಿಲಾಲತೆ ಮೈಸೂರು ರಾಜ್ಯದ ಪ್ರಸಾರ ಶಾಖೆಯ ಬಹುಮಾನವನ್ನು ಪಡೆದಿದೆ.
೧೯೭೨ ರಲ್ಲಿ ಇವರ ಅಭಿಮಾನಿಗಳು ಚಂದನ ಎಂಬ ಅಭಿನಂದನ ಗ್ರಂಥವೊಂದನ್ನು ಸಮರ್ಪಿಸಿದ್ದಾರೆ.
೧೯೭೭ರಲ್ಲಿ ತೆರೆದ ಬಾಗಿಲು ಕವನ ಸಂಗ್ರಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದೆ.
೧೯೯೦ರಲ್ಲಿ ಇವರು ಮೈಸೂರಿನಲ್ಲಿ ಜರುಗಿದ ೬೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು
೧೯೯೨ರಲ್ಲಿ ಬೆಂಗಲೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
೧೯೯೫ರಲ್ಲಿ ದುಂಡುಮಲ್ಲಿಗೆ ಕವನಸಂಕಲನಕ್ಕೆ ಪಂಪ ಪ್ರಶಸ್ತಿ ಲಭಿಸಿದೆ.
೧೯೯೬ರಲ್ಲಿ ಮಾಸ್ತಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
೧೯೯೭ರಲ್ಲಿ ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಲಭಿಸಿದೆ.
ಇವರು ದೆಹಲಿ ಆಕಾಶವಾಣಿ ಕವಿ ಸಮ್ಮೇಳನದಲ್ಲಿ ಸರ್ವ ಭಾಷಾ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
 

ನಿರಂಜನ
ನಿರಂಜನ ೧೯೨೪ ಜೂನ್ ೧೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುಳಕುಂದ ಗ್ರಾಮದಲ್ಲಿ ಜನಿಸಿದರು. ಕುಳಕುಂದ ಶಿವರಾಯ ಇವರ ಮೂಲ ಹೆಸರು. ತಾಯಿ ಚೆನ್ನವಮ್ಮ. ಕಾಪುವಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸುಳ್ಯದಲ್ಲಿ ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದರು. ಅನಂತರ ನೀಲೇಶ್ವರದ ರಾಜಾಸ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ ಪರಕೀಯರ ಹಂಗು ಬೇಡವೆಂದು ಉತ್ತೀರ್ಣತಾ ಪತ್ರವನ್ನು ಹಿಂದಿರುಗಿಸಿದರು. ಇದು ಇವರಲ್ಲಿನ ದೇಶಾಭಿಮಾನವನ್ನು ಬಿಂಬಿಸುತ್ತದೆ. ಅನಂತರ ಉದ್ಯೋಗಕ್ಕಾಗಿ ಮಂಗಳೂರಿನ ಕಡೆ ಪ್ರಯಾಣ ಬೆಳೆಸಿದರು. ಅಲ್ಲಿನ ರಾಷ್ಟ್ರಬಂದು ಪತ್ರಿಕಾಲಯದಲ್ಲಿ ಕೆಲಸ ನಿರ್ವಹಿಸುತ್ತಲೇ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಪತ್ರಿಕಾರಂಗದಲ್ಲಿ ಹೆಚ್ಚಿನ ಅವಕಾಶಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ಬಂದರು.
ಪ್ರಜಾಮತ ಪತ್ರಿಕೆಯ ಸಹ ಸಂಪಾದಕರಾದರು. ೧೯೪೭ರಲ್ಲಿ ಆರಂಭವಾದ ಜನಶಕ್ತಿ ಪತ್ರಿಕೆಯ ಸಂಪಾದಕರಾದರು.
ಕನ್ನಡ ಅಂಕಣ ಬರಹದಲ್ಲಿ ಇವರದು ದೊಡ್ಡ ಹೆಸರು. ೧೯೬೪ರಲಲಿ ಇಂಡಿಯಾ ನ್ಯೂಸ್ ಅಂಡ್ ಫೀಚರ್ ಅಲಯನ್ಸ್ ಸಂಸ್ಥೆಗೆ ಬಾತ್ಮೀದಾರರಾಗಿ ನೇಮಕಗೊಂಡ ನಿರಂಜನರು ೧೯೬೭ರವರೆಗೂ ತುಂಬಾ ದಕ್ಷತೆಯಿಂದ ಸೇವೆ ಸಲ್ಲಿಸಿದರು.
ಕರ್ನಾಟಕ ಸಹಕಾರೀ ಪ್ರಕಾಶನ ಎಂಬ ಸಂಸ್ಥೆಯು ಕಿರಿಯರಿಗಾಗಿ ವಿಶ್ವಕೋಶವೊಂದನ್ನು ತಯಾರಿಸುವ ಯೋಜನೆ ಕೈಗೊಂಡಾಗ ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ನಿರಂಜನ ಅವರು ಮುಂದಾದರು. ಕೇವಲ ಐದು ವರ್ಷದೊಳಗಾಗಿ ಜ್ಞಾನ ಗಂಗೋತ್ರಿಯ ಎಲ್ಲ ಸಂಪುಟಗಳು ಸಿದ್ದಪಡಿಸಿದ್ದು ನಿರಂಜನ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ.

ಕೃತಿಗಳು.
ಚಿರಸ್ಮರಣೆ, ಮೃತ್ಯುಂಜಯ, ಅಪರಾಂಪರ, ಕಲ್ಯಾಣಸ್ವಾಮಿ, ಬನಶಂಕರಿ, ರಂಗಮ್ಮನ ವಠಾರ, ದೂರದ ನಕ್ಷತ್ರ,
ಅನುವಾದಿತ ಕೃತಿಗಳು: ತಾಯಿ, ಸಮತಾವಾದ, ಜನತೆಯ ನಡುವೆ, ಚೀನಾ ದೇಶದ ನೀತಿ ಕತೆಗಳು, ಮಾನವನ ಪಾಡು, ಸಂಗಮ್ ರಾಜಕೀಯ ವ್ಯವಸ್ಥೆ ಇವು ಇವರ ಅನುವಾದಿತ ಕೃತಿಗಳು.
ನಾಟಕಗಳು: ಸಂಗಮಸ್ನಾನ, ಆಹ್ವಾನ, ನಾವೂ ಮನುಷ್ಯರು,
ಸಂಪಾದನೆ: ನವಕರ್ನಾಟಕ ಪ್ರಕಾಶನ ವಿಶ್ವಕಥಾಕೋಶ ಮಾಲಿಕೆಯ ೨೫ ಸಂಪುಟಗಳು.
ಕರ್ನಾಟಕ ಸಹಕಾರಿ ಪ್ರಕಾಶನ ಹೊರತಂದ ಜ್ಞಾನ ಗಂಗೋತ್ರಿಯ ಏಳು ಸಂಪುಟಗಳು.
ಇವರು ೨೫ ಕಾದಂಬರಿಗಳನ್ನು ೯ ಕಥಾಸಂಗ್ರಹಗಳನ್ನು ೩ ನಾಟಕಗಳನ್ನು ೧ ಜೀವನಚರಿತ್ರೆಯನ್ನು, ೭ ಅಂಕಣಗಳ ಸಂಕಲನವನ್ನು ೧೦ ಭಾಷಾಂತರ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ನಿರಂಜನರು ಸಲ್ಲಿಸಿದ ನಾಡಿನ ಸಾಹಿತ್ಯ ಸೇವೆಗಾಗಿ ಅನೇಕ ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
೧೯೬೨ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೪ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ; ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ;
೧೯೫೬ರಲ್ಲಿ ರಾಯಚೂರಿನಲ್ಲಿ ಜರುಗಿದ ೩೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೇಖರ ಗೋಷ್ಠಿಯ ಅಧ್ಯಕ್ಷತೆ;
೧೯೭೬ರಲ್ಲಿ ದಾವಣಗೆರೆಯಲ್ಲಿ ಜರುಗಿದ ಪ್ರಗತಿ ಪಂಥ ಸಂಸ್ಥಾಪನಾ ಸಮ್ಮೇಳನದ ಅಧ್ಯಕ್ಷತೆ;
ಅಭಿಮಾನಿಗಳು ಇವರಿಗೆ ನಿರಂಜನ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ.
 

ಡಿ.ಎಲ್. ನರಸಿಂಹಚಾರ್
ಡಿ.ಎಲ್. ನರಸಿಂಹಚಾರ್ ಅವರು ೧೯೦೬ ಅಕ್ಟೋಬರ್ ೨೭ ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ತಮ್ಮ ತಾತ ಅಣ್ಣಸೌಅಮಿ ಅಯ್ಯಂಗಾರ್ಯರ ಮನೆಯಲ್ಲಿ ಜನಿಸಿದರು. ಇವರ ತಂದೆ ಶಾಮಯ್ಯಂಗಾರ್. ಮನೆಯ ಸುಸಂಸ್ಕೃತ ಸಾಹಿತ್ಯಿಕ ವಾತಾವರಣ ಇವರ ವಿಕಾಸಕ್ಕೆ ಇಂಬು ನೀಡಿತು. ಇವರ ಪೂರ್ಣ ಹೆಸರು ದೊಡ್ಡಬೆಲೆ ಲಕ್ಷ್ಮಿ ನರಸಿಂಹಚಾರ್. ತಂದೆ ಸಬ್ ರಿಜಿಸ್ಟ್ರಾರ್ ಕಛೇರಿಯ ಗುಮಾಸ್ತರಾಗಿದ್ದರಿಂದ ಕಾಲ ಕಾಲಕ್ಕೆ ವರ್ಗಾವನೆಯಾಗುತ್ತಿದ್ದರಿಂದ ಇವರ ವಿದ್ಯಾಭ್ಯಾಸವು ಪಾವಗಡ, ಮಧುಗಿರಿ, ಶಿರಾ ತುಮಕೂರುಗಳಲ್ಲಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದರು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ದುಕೊಂಡು ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿ ಬಿ.ಎ. ಪರೀಕ್ಷೆಯನ್ನು ಮುಗಿಸಿದರು. ಆ ಪರೀಕ್ಷೆಯಲ್ಲಿ ಕನ್ನಡದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದರಿಂದ ಚಿನ್ನದ ಪದಕ ಮತ್ತು ಬಹುಮಾನಗಳನ್ನು ಗಳಿಸಿಕೊಂಡರು. ಅದೇ ಸಾಲಿನಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಆರಂಭವಾಗಿದ್ದ ಕನ್ನಡ ಎಂ.ಎ. ತರಗತಿಗತಿಗಳಿಗೆ ಸೇರಿ ಪ್ರಥಮ ದರ್ಜೆಯಲ್ಲಿ ಎಂ.ಎ. ಪದವೀಧರರಾದರು.
೧೯೩೦ ರಲ್ಲಿ ಮೈಸೂರಿನ ಪ್ರಾಚ್ಯ ಸಂಶೋಧನಾಲಯದಲ್ಲಿ ಕನ್ನಡ ಪಂಡಿತರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ೧೯೩೨ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿಗೆ ಕನ್ನಡ ಪಂಡಿತರಾಗಿ ಬಂದರು. ೧೯೩೯ರಲ್ಲಿ ಮೈಸೂರಿನ ಯುವರಾಜ ಕಾಲೇಜಿಗೆ ಬಂದರು. ೧೯೪೫ರಲ್ಲಿ ಬಡ್ತಿ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಹೋದರು. ಮೂರು ವರ್ಷಗಳ ಬಳಿಕ ಮಹಾರಾಜ ಕಾಲೇಜಿಗೆ ಹಿಂತಿರುಗಿ ೧೬೫೪ರವರೆಗೆ ಕಾರ್ಯನಿರ್ವಹಿಸಿದರು. ೧೯೫೪ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡು ಬೆಂಗಳೂರಿಗೆ ಮರಳಿದರು. ಇವರು ಮೈಸೂರು ವಿಶ್ವವಿದ್ಯಾಲಯ, ಉಸ್ಮಾನಿಯಾ ವಿಶ್ವವಿದ್ಯಾಲಯ ಹಾಗೂ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದಾರೆ. ೧೯೭೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇವರ ಸಮ್ಮುಖದಲ್ಲಿಯೇ ನಿಘಂಟಿನ ಮೊದಲ ಸಂಪುಟ ಬಿಡುಗಡೆಯಾಯಿತು. ಇವರು ೧೯೫೨-೬೨ರ ಅವಧಿಯವರೆಗೂ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಯ ಏಳಿಗೆಗೆ ಶ್ರಮಿಸಿದರು. ಇವರು ೧೯೭೧ರ ಮೇ ೮ ರಂದು ನಿಧನರಾದರು.

ಕೃತಿಗಳು
ಸಾರಾರ್ಣವ, ಸಕಲ ವೈದ್ಯ, ಸಂಹಿತಾ, ಭೀಷ್ಮಪರ್ವ, ಪಂಪ ರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ಧರಾಮ ಚರಿತೆಯ ಸಂಗ್ರಹ, ಶಬ್ದಮಣಿ ದರ್ಪಣ, ಗೋವಿನಹಾಡು, ಸುಕುಮಾರ ಚರಿತ್ರೆ, ಸಿದ್ದರಾಮ ಚಾರಿತ್ರ್ಯ, ಶಬ್ದವಿಹಾರ, ಕನ್ನಡ ಗ್ರಂಥ ಸಂಪಾದನೆ, ಪೀಠಿಕೆಗಳು, ಲೇಖನಗಳು, ಪಂಪಭಾರತ ದೀಪಿಕೆ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೫೯ರಲ್ಲಿ ಬೀದರ್‌ನಲ್ಲಿ ಜರುಗಿದ ೪೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೬೦ರಲ್ಲಿ ಜ್ಞಾನೋಪಾಸಕ ಎಂಬ ಅಬಿನಂದನಾ ಗ್ರಂಥಾರ್ಪಣೆ,
೧೯೬೭ರಲ್ಲಿ ಉಪನಯನ ಎಂಬ ಇನ್ನೊಂದು ಬೃಹತ್ ಅಭಿನಂದನಾ ಗ್ರಂಥಾರ್ಪಣೆ
೧೯೬೭ರಲ್ಲಿ ಮೈಸೂರು ಸರ್ಕಾರದ ರಾಜ್ಯ ಪ್ರಶಸ್ತಿ ಗೌರವ,
೧೯೬೯ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಇವರ ಅಪಾರ ಸಾಹಿತ್ಯ ಸೇವೆಯನ್ನು ಮನ್ನಿಸಿ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದೆ.
 

ಎಸ್. ಸಿ. ನಂದೀಮಠ
ಎಸ್.ಸಿ.ನಂದೀಮಠರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಶಿವಲಿಂಗಯ್ಯ ಚೆನ್ನಬಸವಯ್ಯ ನಂದೀಮಠ. ಗೋಕಾಕ್ ಮತ್ತು ಬೆಳಗಾವಿಗಳಲ್ಲಿ ಆರಂಭದ ಶಿಕ್ಷಣವನ್ನು ಮುಗಿಸಿ, ೧೯೨೪ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನೂ, ೧೯೨೬ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದುಕೊಂಡರು. ಕೊಲ್ಲಾಪುರದ ರಾಜರಾಮ ಕಾಲೇಜಿನಿಲ್ಲಿ ಅಧ್ಯಾಪಕರಾಗಿ ಸ್ವಲ್ಪಕಾಲ ಕೆಲಸ ಮಾಡಿದರು. ಅನಂತರ ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ಅಲ್ಲಿ ಬಾರ್ನೆಟ್‌ರ ಮಾರ್ಗದರ್ಶನದಲ್ಲಿ ವೀರಶೈವ ಧರ್ಮ ಹಾಗೂ ತತ್ವಜ್ಞಾನಗಳ ಕೈಪಿಡಿ ಎಂಬ ವಿಷಯ ಕುರಿತ ಪ್ರೌಢ ಪ್ರಬಂಧವನ್ನು ಮಂಡಿಸಿ ೧೯೩೦ರಲ್ಲಿ ಪಿ.ಎಚ್.ಡಿ. ಪದವಿ ಪಡೆದರು. ತವರಿಗೆ ಮರಳಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಬೆಳಗಾವಿಯ ಲಿಂಗಾಯುತ ಎಜುಕೇಶನ್ ಸೊಸೈಟಿಯು ಆರಂಭಿಸಬೆಕೆಂದಿದ್ದ ಲಿಂಗರಾಜ ಕಾಲೇಜಿನ ಸ್ಥಾಪನೆಗಾಗಿ ಶ್ರಮಿಸಿದರು. ಅನಂತರ ಇವರು ಲಿಂಗರಾಜ ಕಾಲೇಜಿನ ಮೊದಲ ಪ್ರಾಂಶುಪಾಲರಾಗಿ ೧೯೩೩ ರಿಂದ ೧೯೪೪ರವರೆಗೆ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ದರು. ಇದಲ್ಲದೆ ಬಾಗಲಕೋಟೆಯಲ್ಲಿ ಬಸವೇಶ್ವರ ಕಾಲೇಜನ್ನು ಸ್ಥಾಪಿಸಿ ಬೆಳೆಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಇವರು ಸಿಂಡಿಕೇಟ್, ಸೆನೆಟ್, ಅಕಡೆಮಿಕ್ ಕೌನ್ಸಿಲುಗಳ ಸದಸ್ಯರಾಗಿಯೂ ಸ್ಮರಣೀಯ ಸೇವೆ ಸಲ್ಲಿಸಿದರು. ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ, ಕುಲಪತಿಗಳಾಗಿಯೂ ಇವರು ಸ್ವಲ್ಪಕಾಲ ಕಾರ್ಯ ನಿರ್ವಹಿಸಿದರು. ಮುಂಬಯಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದುಕೊಂಡು ಉತ್ತರ ಕರ್ನಾಟಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಲಯವನ್ನು ಪಡೆಯಲು ಶ್ರಮಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಗುವಾಗ ಅದರ ರೂಪರೇಷೆಗಳನ್ನು ಮತ್ತು ಕಾಯಿದೆ, ಕಾನೂನುಗಳನ್ನು ರೂಪಿಸುವಲ್ಲಿ ಮಹತ್ವದ ಕೆಲಸ ಮಾಡಿದ ನಾಲ್ಕಾರು ಶಿಕ್ಷಣ ತಜ್ಞ ಸಮಿತಿಯಲ್ಲಿ ಇವರು ಒಬ್ಬರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲ ಸಚಿವರಾಗಿಯೂ, ಕುಲಪತಿಗಳಾಗಿಯೂ ಇವರು ಸ್ವಲ್ಪಕಕಾಲ ಕಾರ್ಯ ನಿರ್ವಹಿಸಿದರು. ಇವರು ಸಂಸ್ಕೃತವಷ್ಟೇ ಅಲ್ಲದೆ ಕನ್ನಡ, ಪಾಳಿ, ಪ್ರಾಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಪರಿಶ್ರಮಗಳನ್ನು ಪಡೆದಿದ್ದ ಇವರು ಹಲವು ಅಮೂಲ್ಯ ಲೇಖನಗಳನ್ನು, ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಕೃತಿಗಳು
ಕರ್ನಾಟಕದ ಧರ್ಮಗಳ, ಹರಿಹರನ ಗಿರಿಜಾ ಕಲ್ಯಾಣ, ಕುವಲಯಾನಂದ, ಇಂಗ್ಲಿಷಿನಲ್ಲಿ ಹ್ಯಾಂಡ್‌ಬುಕ್ ಆಫ್ ವೀರಶೈವಿಸಂ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೫೨ರಲ್ಲಿ ಬೇಲೂರಿನಲ್ಲಿ ಜರುಗಿದ ೩೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೫೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು.
 

ಪು.ತಿ.ನರಸಿಂಹಚಾರ್
ಪುರೋಹಿತ ತಿರುನಾರಾಯಣಯ್ಯಂಗಾರ್ ನರಸಿಂಹಾಚಾರ್‌ರವರು ೧೯೦೫ ಮಾರ್ಚ್ ೧೭ರಂದು ಮಂಡ್ಯ ಜಿಲ್ಲೆಯ ಮೇಲುಕೋಟಿಯಲ್ಲಿ ಜನಿಸಿದರು. ಇವರು ಪು.ತಿ.ನ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ. ತಂದೆ ತಿರುನಾರಾಯಣಯ್ಯಂಗಾರ್; ತಾಯಿ ರಂಗಮ್ಮ ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮೇಲುಕೋಟೆಯಲ್ಲಿ ಪಡೆದು ಪದವಿ ವ್ಯಾಸಂಗಕ್ಕೆ ಮೈಸೂರಿಗೆ ಬಂದು ೧೯೨೬ರಲ್ಲಿ ಬಿ.ಎ. ಪದವಿ ಪಡೆದರು.
೧೯೨೬ರಲ್ಲಿ ಇನ್ಸ್‌ಪೆಕ್ಟರ್ ಆಫ್ ಸಿಸ್ಟಮ್ ಅಂಡ್ ಕೌ. ಪ್ರೊಟೆಕ್ಷನ್ ಹುದ್ದಗೆ ಆಯ್ಕೆಯಾದರು. ಅನಂತರ ೧೯೫೨ರವರೆಗೆ ಸೂಪರಿಟೆಂಡೆಂಟ್ ಆಫ್ ಮಿಲಟರಿ ಸ್ಟೋರ‍್ಸ್‌ನಲ್ಲಿ ಸೇವೆ ಸಲ್ಲಿಸಿದರು. ೧೯೫೨ ರಿಂದ ೧೯೬೦ರವರೆಗೆ ಮೈಸೂರು ಶಾಸನ ಸಭೆಯಲ್ಲಿ ಸಂಪಾದಕರಾಗಿದ್ದರು. ಹಲವಾರು ವೃತ್ತಿಯನ್ನು ಮಾಡಿದ ಇವರು ಸಾಹಿತ್ಯದ ಪ್ರವೃತ್ತಿಯನ್ನು ಬೆಳಸಿಕೊಂಡು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ೧೯೨೫ರಲ್ಲಿ ಶೇಷಮ್ಮ ಎಂಬುವರೊಡನೆ ವಿವಾಹವಾದರು. ಅರವತ್ತು ವರ್ಷಗಳ ತುಂಬು ಜೀವನವನ್ನು ನಡೆಸಿದ್ದಾರೆ. ಶ್ರೀ. ಸು.ರಂ. ಎಕ್ಕುಂಡಿಯವರು ಪು.ತಿ.ನ. ರವನರನ್ನು ಕುರಿತ ಕಿರುಪುಸ್ತಕವೊಂದನ್ನು ರಚಿಸಿದ್ದಾರೆ.
ವೃತ್ತಿಗಳ ಜೊತೆಗೆ ಕನ್ನಡ ಸಾಹಿತ್ಯದಲ್ಲೂ ಹೇಗೆ ಅಂಟಿಕೊಂಡರೋ ಎಂಬ ಸಂಶಯ ಸಹಜವಾಗಿ ಮೂಡುತ್ತದೆ. ಅವರೇ ಹೇಳುವಂತೆ ಗುರುಗಳಾದ ಎಂ. ಹಿರಣ್ಣಯ್ಯನವರು, ಸ್ನೇಹಿತರಾದ ತೀ.ನಂ. ಶ್ರೀಕಂಠಯ್ಯ, ಶಿವರಾಜಶಾಸ್ತ್ರಿ ಮುಂತಾದವರು ನನ್ನ ಕಾವ್ಯ ರಚನೆಗೆ ಪ್ರೇರಕ ಶಕ್ತಿಗಳಾದರು ಎಂದಿದ್ದಾರೆ.
ಪು.ತಿ.ನ. ಅವರ ಸಾಹಿತ್ಯ ಸೃಷ್ಟಿಯು ಕಾವ್ಯ ನಾಟಕ, ಲಲಿತ ಪ್ರಬಂಧ, ಬಾವ ಪ್ರಬಂಧ, ಕಾವ್ಯಾರ್ಥ ಚಿಂತನೆ, ಅನುವಾದ ಮುಂತಾದ ಹಲವು ಪ್ರಕಾರಗಳಲ್ಲಿ ಹಂಚಿಕೊಂಡಿದೆ. ಕಾವ್ಯ ಕುತೂಹಲ ಎಂಬುದು ಅವರ ಕಾವ್ಯ ಮೀಮಾಂಸೆಯ ಪ್ರಮುಖ ಕೃತಿಯಾಗಿದೆ. ಭಾವಗೀತೆ, ನಾಟಕ, ಸಂಗೀತ ರೂಪಕ, ಸಣ್ಣ ಕತೆ, ಲಲಿತ ಪ್ರಂಬಂಧ, ಗೀತ ನಾಟಕ, ವಿಚಾರ ಸಾಹಿತ್ಯ, ಕವನ ಸಂಕಲನ ಹೀಗೆ ಹಲವಾರು ರಂಗಗಳಲ್ಲಿ ಸಾಹಿತ್ಯ ಕೃಷಿ ನಡೆಸಿ ಕನ್ನಡ ನಾಡಿನ ಜನರ ಅಪಾರ ಮೆಚ್ಚುಗೆ ಗಳಿಸಿದ್ದಾರೆ.
ಕನ್ನಡ ವಿಶ್ವಕೋಶ ರಚಿಸುವಲ್ಲಿ ಭಾಷಾಂತರಕಾರಿಯೂ ಇಂಗ್ಲಿಷ್ ಕನ್ನಡ ನಿಘಂಟಿನ ಸಂಪಾದಕರಲ್ಲಬರಾಗಿ ದುಡಿದ್ದಾರೆ. ಇವರನ್ನು ಗೀತ ನಾಟಕಗಳ ಇತಿಹಾಸದ ಸೃಷ್ಟಿಕರ್ತರೆಂದರೆ ಅತಿಶಯೋಕ್ತಿಯಾಗಲಾರದು. ಇವರ ಸಾಹಿತ್ಯ ಕೊಡುಗೆ ಅಪಾರವಾದದ್ದು. ೧೯೯೮ರ ಅಕ್ಟೋಬರ್ ೧೩ರಂದು ನಿಧನ ಹೊಂದಿದರು.
ಕೃತಿಗಳು
ಹಣತೆ, ಮಾಂದಳಿರು, ಗಣೇಶ ದರ್ಶನ, ಶಾರದಾ ಯಾಮಿನಿ, ಹೃದಯವಿಹಾರಿ, ಮಲೆದೇಗುಲ, ಶ್ರೀ ಹರಿಚರಿತೆ, ಅತಿಥಿ, ರಸ ಸರಸ್ವತಿ ಮತ್ತು ಇತರ ಕವನಗಳು, ಇರುಳ ಮೆರುಗು, ಹಳೆಯ ಬೇರು ಹೊಸ ಚಿಗುರು, ಅಹಲ್ಯೆ, ಶಬರಿ, ವಿಕಟಕವಿ ವಿಜಯ, ಸತ್ಯಾಯನ ಹರಿಶ್ಚಂದ್ರ ಪಟ್ಟಾಭಿಷೇಕಂ, ಗೋಕುಲ ನಿರ್ಗಮನ, ದೋಣಿಯ ಬಿನದ ಮತ್ತು ಕವಿ, ವಸಂತ ಚಂದನ, ಸೀತಾ ಕಲ್ಯಾಣ, ಜಾಹ್ನವಿಗೆ ಜೋಡಿ ದೀವಿಗೆ, ಹಂಸದಮಯಂತಿ ಮತ್ತು ಇತರ ರೂಪಕಗಳು, ರಾಮಾಚಾರಿಯ ನೆನಪು, ರಥಸಪ್ತಮಿ, ಧ್ವಜ ರಕ್ಷಣೆ, ಈಚಲು ಮರದ ಕೆಳಗೆ, ಧೇನುಕ ಪುರಾಣ, ಕಾವ್ಯ ಕುತೂಹಲ, ಹರಿಚರಿತ, ಮನನ, ರಸ ಸಮೀಕ್ಷೆ, ದೀಪ ರೇಖೆ, ಸಿರಿಬಯಿ ನುಡಿ, ಕನ್ನಡ ಭಗವದ್ಗೀತೆ, ಮಹಾಪ್ರಸ್ಥಾನ, ಗಯಟೆಯ ಫಾಸ್ಟ್ ಬದಲಿಸಿದ ತಲೆಗಳು ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಹಂಸ ದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ೧೯೬೬ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಅದೇ ವರ್ಷ ಅದೇ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
೧೯೭೧ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ೫೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೯೦ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು.
ಯದುಗಿರಿಯ ವೀಣೆ ಇವರಿಗೆ ಸಮರ್ಪಿತ ಕವನ ಸಂಕಲನವಾಗಿದೆ.
 

ಡಿ.ಆರ್. ನಾಗರಾಜ್
ಡಿ.ಆರ್.ನಾಗರಾಜ ಅವರು ೧೯೫೪ರ ಫೆಬ್ರವರಿ ೨೦ ರಂದು ದೊಡ್ಡಬಳ್ಳಾಪುರದಲ್ಲಿ ಜನಿಸಿದರು. ತಂದೆ ರಾಮಯ್ಯ ಮತ್ತು ತಾಯಿ ಅಕ್ಕಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿ; ಅನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದುಕೊಂಡರು. ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ, ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಹಾಗೂ ಅಕ್ಷರ ಪ್ರಕಾಶನ ಅಕ್ಷರ ಚಿಂತನಮಾಲೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅಧ್ಯಯನದ ಸಂದರ್ಭದಲ್ಲಿ ಚರ್ಚಾಸ್ಪರ್ಧೆ, ಸಂವಾದಗಳಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳುತ್ತಿದ್ದ ನಾಗರಾಜ ಅವರಿಗೆ ಅವು ತಮ್ಮ ವ್ಯಾಪಕವಾದ ಅಧ್ಯಯನವನ್ನು ಮಾಡಲು ಸಾಧ್ಯವಾಗಿಸಿದವು. ಕನ್ನಡ ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಅವರು ಪಡೆದಿದ್ದ ಪಾಂಡಿತ್ಯ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಗ್ಮಿಯಾಗಿಸಿತು.
ನಾಗರಾಜ ಅವರು ಕೆಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ನಿರ್ದೇಶಕರಾಗಿಯೂ ಹಾಗೆಯೇ ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸೀನಿಯರ್ ಫೆಲೊ ಆಗಿಯೂ ಕಾರ್ಯ ನಿರ್ವಹಿಸಿದರು. ಸಿಮ್ಲಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್‌ನ ಫೆಲೊ ಆಗಿ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದ ತಾಲ್ಲೂಕಿನ ಸಾಹಿತ್ಯ ಕೇಂದ್ರದ ಸಂಶೋಧಕ ಸಹಾಯಕರಾಗಿ ಇಂಗ್ಲೆಂಡ್, ಅಮೆರಿಕಾ, ಜರ್ಮನಿ, ಇಟಲಿ, ಬ್ರೆಜಿಲ್, ರಷ್ಯಾ, ಚೀನಾ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆದ ವಿಚಾರಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದಾರೆ. ಡಿ.ಆರ್ರ‍. ನಾಗರಾಜ ಅವರು ೧೯೯೮ ಆಗಸ್ಟ್ ೧೨ ರಂದು ನಿಧನರಾದರು.

ಕೃತಿಗಳು:
ವಿಮರ್ಶಾ ಕೃತಿಗಳು: ಅಮೃತ ಮತ್ತು ಗರುಡ, ಶಕ್ತಿ ಶಾರದೆಯ ಮೇಳ, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ನಾಗಾರ್ಜುನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಪಾಶ್ಚಾತ್ಯ ಸಾಹಿತ್ಯ ದರ್ಶನ
ನಾಟಕ: ಕತ್ತಲೆ ದಾರಿ ದೂರ
ಅನುವಾದ: ಅನುಭಾವಿ ಕವಿರೂಮಿ, ಉರ್ದು ಸಾಹಿತ್ಯ
ಸಂಪಾದಿತ: ಸಮಾಜವಾದಿ ಅಚಾರ್ಯ
ಇಂಗ್ಲಿಷ್ ಕೃತಿಗಳು: ಪ್ಲೇಮಿಂಗ್ ಫೀಟ್, ರಿಕ್ರೀಯೆಟಿಂಗ್ ಈಚ್‌ಅದರ್, ಶಿವಾಸ್ ಪ್ಲೆಟ್.
ಅಕ್ಷರ ಚಿಂತನ ಮಾಲೆಯ ಸಂಪಾದಕರಾಗಿ, ಆಶೀಶ್ ನಂದಿ ವಿಚಾರ, ದಾರಾಶಿಖೊ, ಅಭಿನವ ಗುಪ್ತ, ದಾವ್ ದಜಂಗ್, ಅನಂದ ಕುಮಾರಸ್ವಾಮಿ, ತಮಿಳು ಕಾವ್ಯಮೀಮಾಂಸೆ, ಪ್ರತಿಭೆಯು ಒಂದು ಪ್ರವಾಹ ಇನ್ನು ಮುಂತಾದವರು.

ಗೌರವ, ಪ್ರಶಸ್ತಿ-ಪುರಸ್ಕಾರಗಳು;
೧೯೮೮ ರಲ್ಲಿ ವರ್ಧಮಾನ ಪ್ರಶಸ್ತಿ
೧೯೯೫ರಲ್ಲಿ ಶಿವರಾಮಕಾರಂತ ಪ್ರಶಸ್ತಿ
೧೯೯೮ರಲ್ಲಿ ಆರ್ಯಭಟ ಪ್ರಶಸ್ತಿ
ಸಾಹಿತ್ಯ ಕಥನ ಕೃತಿಗೆ ೧೯೯೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
 

ಆರ್. ನರಸಿಂಹ ಚಾರ್
ಆರ್. ನರಸಿಂಹಚಾರ್ ಅವರು ಮಂಡ್ಯದ ಕೊಪ್ಪಲುವಿನಲ್ಲಿ ೧೮೬೦ ಏಪ್ರಿಲ್ ೯ರಂದು ಜನಿಸಿದರು. ತಂದೆ ತಿರುನಾರಾಯಣ ಪೆರುಮಾಳ್; ತಾಯಿ ಶಿಂಗಮ್ಮಾಳ್, ಬಾಲ್ಯದಲ್ಲಿ ತಂದೆಯಿಂದಲೇ ಸಂಸ್ಕೃತ ಅಭ್ಯಾಸ ಮಾಡಿ ಅನಂತರ ಐದು ವರ್ಷ ತಮಿಳು ಅಭ್ಯಾಸ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ೧೮೭೮ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದರು. ಬೆಂಗಲೂರಿಗೆ ಬಂದು ತಮಿಳು ಮತ್ತು ಸಂಸ್ಕೃತಗಳನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿನಿಂದ ೧೮೮೨ ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉಚ್ಛ ತರಗತಿಯಲ್ಲಿ ಪಾಸಾದರು.
೧೮೯೩ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಕನ್ನಡದಲ್ಲಿ ಎಂ.ಎ. ಪದವಿ ಪಡೆದವರಲ್ಲಿ ಇವರೇ ಮೊದಲಿಗರು. ೧೮೯೪ರಲ್ಲಿ ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರಾಗಿ ನೇಮಕಗೊಂಡರು. ೧೮೯೯ರಲ್ಲಿ ಮೈಸೂರಿನ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯಲ್ಲಿ ಸೇರಿ, ಬಿ.ಎಲ್. ರೈಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ ಅವರಿಗೆ ತುಂಬ ಆತ್ಮೀಯರಾದರು. ರೈಸ್ ಅವರ ನಂತರ ೧೯೦೬ರಲ್ಲಿ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆಯಲ್ಲಿ ನಿರ್ದೇಶಕರಾಗಿ ನೇಮಕಗೊಂಡರು. ೧೯೨೨ರವರೆಗೆ ಅದರ ನಿರ್ದೇಶಕರಾಗಿಯೇ ಮುಂದುವರೆದು ಅನೇಕ ಮಹತ್ವದ ಕೃತಿಗಳನ್ನು ಹೊರತಂದರು. ೧೯೨೨ರಲ್ಲಿ ಇಲಾಖೆಯಿಂದ ನಿವೃತ್ತರಾದರು.
ಚಿಕ್ಕಮಗಳೂರು ಹಾಸನ, ಶಿವಮೊಗ್ಗ ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದರು. ಮೈಸೂರಿನ ಮಹಾರಾಜ ಕಾಲೇಜ್, ಮಹಾರಾಣಿ ಕಾಲೇಜ್‌ಗಳಲ್ಲಿಯೂ ಅಧ್ಯಾಪಕರಾಗಿದ್ದರು. ೧೬ ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ವಿವಿಧ ಭಾಗಗಳಲ್ಲಿ ಸಂಚರಿಸಿ ಸುಮಾರು ೫೦೦೦ ಶಾಸನಗಳನ್ನು ಸಂಗ್ರಹಿಸಿದ್ದರು. ಆರ್. ನರಸಿಂಹಚಾರ್ಯರು ಒಳ್ಳೆಯ ಅನುವಾದಕರು ಕೂಡಾ ಆಗಿದ್ದರು. ೧೯೩೬ರ ಡಿಸೆಂಬರ್ ೬ರಂದು ಆರ್. ನರಸಿಂಹಚಾರ್ಯರು ನಿಧನ ಹೊಂದಿದರು.

ಕೃತಿಗಳು
ನೀರಿ ಮಂಜರಿ (೧೯೧೧), ನಗೆಗಡಲು (೧೮೯೮), ಶಾಸನ ಪದ್ಯಮಂಜರಿ (೧೯೨೩), ಕರ್ನಾಟಕ ಕವಿ ಚರಿತೆ ಮೂರು ಸಂಪುಟಗಳು, ಕಾವ್ಯಾವಲೋಕನ, ಭಾಷಾ ಭೂಷಣ, ಶಬ್ಧಾನುಶಾಸನ ಇತ್ಯಾದಿ. ಇಂಗ್ಲೀಷ್‌ನಲ್ಲಿ ಹಿಸ್ಟರಿ ಆಫ್ ಕನ್ನಡ ಲಿಟರೇಚರ್, ಹಿಸ್ಟರಿ ಆಫ್ ಕನ್ನಡ ಲಾಂಗ್ವೇಜ್, ಎಪಿಗ್ರಾಫಿಯಾ ಕರ್ನಾಟಿಕ್ ಸಂಪುಟಗಳು.

ಗೌರವ, ಪ್ರಶಸ್ತಿ-ಪುರಸ್ಕಾರಗಳು;
೧೯೦೭ ರಲ್ಲಿ ಆಗಿನ ಘನ ಸರ್ಕಾರದಿಂದ ರಾಯಲ್ ಏಷ್ಯಾಟಿಕ ಸೊಸೈಟಿಯ ಗೌರವ ಸದಸ್ಯತ್ವ.
೧೯೧೩ರಲ್ಲಿ ಮೈಸುರು ಮಹಾರಾಜರಿಂದ ಪ್ರಾಕ್ತನ ವಿಮರ್ಶಾ ವಿಚಕ್ಷಣ ಪ್ರಶಸ್ತಿ;
೧೯೧೬ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ;
೧೯೨೨ ರಲ್ಲಿ ಕಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘದಿಂದ ಕರ್ನಾಟಕ ಪ್ರಾಚ್ಯ ವಿದ್ಯಾವೈಭವ ಬಿರುದು,
೧೯೩೪ರಲ್ಲಿ ಭಾರತ ಸರ್ಕಾರದಿಂದ ಮಹಾಮಹೋಪಾಧ್ಯಾಯ ಪ್ರಶಸ್ತಿ;
೧೯೧೮ರಲ್ಲಿ ಧಾರವಾಡದಲ್ಲಿ ಜರುಗಿದ ೪ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೦೭ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷರೂ ಇವರಾಗಿದ್ದರು.
 

ನಂಜನಗೂಡು ತಿರುಮಲಾಂಬಾ
ನಂಜನಗೂಡು ತಿರುಮಲಾಂಬಾರವರು ೧೮೮೭ ಮಾರ್ಚ ೨೫ ರಂದು ನಂಜನಗೂಡಿನಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣ ಅಯ್ಯಂಗಾರ್, ತಾಯಿ ಅಲಮೇಲಮ್ಮ, ಪತಿ ನಂಜುಂಡಯ್ಯ ವಕೀಲರಾಗಿದ್ದರು. ತಿರುಮಲಾಂಬರವರು ಪ್ರಾಥಮಿಕ ಶಿಕ್ಷಣವನ್ನು ಮಾತ್ರ ಹೊಂದಿದ್ದರು. ತಿ ಹಿತೈಷಿಣಿ ಇವರ ಕಾವ್ಯನಾಮ, ಈಕೆ ಕನ್ನಡದ ಪ್ರಥಮ ಕಾದಂಬರಿಗಾರ್ತಿ. ಇವರಿಗೆ ಕನ್ನಡ, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ ಒಳ್ಳೆಯ ಪರಿಶ್ರಮವಿತ್ತು. ಇವರು ಕರ್ನಾಟಕ ನಂದಿನಿ ಎಂಬ ಪತ್ರಿಕೆಯ ಸಂಪಾದಕಿಯಾಗಿದ್ದರು. ಇದು ಕನ್ನಡದಲ್ಲಿ ಪ್ರಪಥಮವಾಗಿ ಸ್ತ್ರೀಯರಿಂದ ಪ್ರಾರಂಭವಾದ ಸ್ರೀಯರಿಗೋಸ್ಕರೌಆದ ಪತ್ರಿಕೆ. ಇವರು ಸನ್ಮಾರ್ಗದರ್ಶಿ ಎಂಬ ಮಾಸಪತ್ರಿಕೆಯನ್ನು ಪ್ರಕಟಿಸಿದ್ದರು. ಇವರು ಪ್ರಥಮ ಮಹಿಳಾ ಪ್ರಕಾಶಕಿಯೂ ಆಗಿದ್ದರು. ಇವರು ಸತಿ ಹಿತೈಷಿಣೀ ಎಂಬ ಗ್ರಂಥಮಾಲೆಯ ಮೂಲಕ ಪ್ರಕಾಶನ ಸಂಸ್ಥೆಯನ್ನು ೧೯೧೩ರಲ್ಲಿ ಆರಂಭಿಸಿದರು. ಇವರ ಕೆಲವು ಕೃತಿಗಳು ಮೈಸೂರು ಹಾಗೂ ಮದ್ರಾಸು ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಪಠ್ಯಗಳಾಗಿದ್ದವು. ಇವರು ೧೯೮೨ ಆಗಸ್ಟ್ ೩೧ ರಂದು ನಿಧನರಾದರು.

ಕೃತಿಗಳು;
ಸುಶೀಲೆ, ವಿದ್ಯುಲ್ಲತಾ, ನಭಾ, ರಮಾನಂದ, ವಿರಾಗಿಣಿ, ವಿವಕೋದಯ, ಮಾತೃನಂದಿನಿ, ಗಿರಿಜಾಬಾಯಿ, ಅಜಾಮಿಳೋಪಾಖ್ಯಾನಂ, ಪೂರ್ಣಕಲಾ ಮಣಿಮಾಲಾ, ರವಿವರ್ಮ, ದಕ್ಷಕನ್ಯಾ, ವಿಕ್ರಮ, ನಿಶಾಕಾಂತ, ಚಂದ್ರವದನ, ಭಾರ್ಗವ ಗರ್ವಭಂಗ, ಭಕ್ತಿಗೀತಾವಳಿ, ಭದ್ರಗೀತಾವಲಿ, ಭಾವಗೀತಾವಳಿ ಸುಮುಖೀ ವಿಜಯ, ಸೇವಾವಿಚಾರ, ವಿಧವಾ ತತ್ವ ವಿದ್ಯಾವಾತಾರ, ಅಬಲಾ ದೌರ್ಜನ್ಯಂ ಸಚ್ಚರಿತ ಸುಧಾರ್ಣವ ಮೊದಲಾದವು.

ಗೌರವ, ಪ್ರಶಸ್ತಿ - ಪುರಸ್ಕಾರಗಳು
೧೯೮೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ
ಇವರಿಗೆ ಮೈಸೂರು, ಮುಂಬಯಿ, ಮದ್ರಾಸು, ಸರ್ಕಾರದಿಂದ ಅನೇಕ ಬಹುಮಾನಗಳು ದೊರೆತಿವೆ.
೧೯೮೭-೮೮ರಲ್ಲಿ ತಿರುಮಾಲಾಂಬ ಅವರ ಜನ್ಮಶತಮಾನೋತ್ಸವ ನೆರವೇರಿತು.
 

ಕೆ.ಎಸ್. ನಿಸಾರ್ ಅಹಮದ್
ನಿಸಾರ್ ಅಹಮದ್‌ರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ೧೯೩೬ರ ಫೆಬ್ರವರಿ ೫ರಂದು ಜನಿಸಿದರು. ತಂದೆ ಷೇಕ್ ಹೈದರ್, ತಾಯಿ ಹಮೀದಾ ಬೇಗಂ. ಬೆಂಗಲೂರಿನ ಸೆಂಟ್ರಲ ಕಾಲೇಜಿನಲ್ಲಿ ಅಧ್ಯಯನ ಮಾಡಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅನಂತರ ಅಧ್ಯಾಪಕರಾಗಿ ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದರು. ಪ್ರಾಧ್ಯಾಪಕರಾಗಿ ನಿವೃತ್ತರಾದರು. ವಿದ್ಯಾರ್ಥಿ ದಿನಗಳಲ್ಲಿ ಸೆಂಟ್ರಲ್ ಕಾಲೇಜಿನ ಪ್ರತಿಷ್ಠಿತ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕನ್ನಡ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ೨೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ.
ನಿಸಾರರು ಕನ್ನಡದ ಅತ್ಯುತ್ತಮ ಕವಿಗಳಲ್ಲೊಬ್ಬರು. ಇವರ ಕಾವ್ಯದಲ್ಲಿ ರಾಷ್ಟ್ರಾಭಿಮಾನ, ನಿಸರ್ಗ ಪ್ರೀತಿ, ಸಂಸ್ಕೃತಿಯನ್ನು ಒಪ್ಪಿಕೊಳ್ಳುವ ಮನೋಭಾವ ಮೊದಲಾದ ನವೋದಯದ ಆಶಯಗಳು ವಿಶೇಷವಾಗಿ ಕಂಡುಬರುತ್ತವೆ. ಇವರು ಸಂಘರ್ಷಕ್ಕಿಂತ ಸಮನ್ವಯಗಳಲ್ಲಿ ನಂಬಿಕೆಯುಳ್ಳ ಕವಿ. ಜೊತೆಗೆ ಸುತ್ತಮುತ್ತಲ ಬದುಕಿನ ರೀತಿ ನೀತಿಗಳ ಬಗ್ಗೆ ಅತ್ಯಂತ ಸೂಕ್ಷ್ಮವಾಗಿ ಚಿಂತಿಸುವ ವಿಶಾಲ ಮನೋಭಾವ ವ್ಯಕ್ತಪಡಿಸುವ ಗುಣವನ್ನು ಇವರ ಕಾವ್ಯದಲ್ಲಿ ಗುರುತಿಸಬಹುದಾಗಿದೆ. ಇವರ ಕವಿತೆಗಳು ಇಂಗ್ಲಿಷ್, ಹಿಂದಿ, ಉರ್ದು, ಮಲೆಯಾಳಂ, ತೆಲಗು, ಮರಾಠಿ ಹಾಗೂ ಚೀನಿ ಭಾಷೆಗಳಿಗೆ ಅನುವಾದಗೊಂಡಿವೆ.
ನಿಸಾರರು ಅನುವಾದದ ಕ್ಷೇತ್ರದಲ್ಲಿಯೂ ಗಮನ ಸೆಲೆದಿದ್ದಾರೆ. ಷೇಕ್ಸ್‌ಪಿಯರ್ ಮಹಾಕವಿಯ ಒಥೆಲೊ ಮತ್ತು ಎಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ನಾಟಕಗಳನ್ನು ಸಮಕಾಲಿನ ಭಾಷೆಯಲ್ಲಿ ಅನುವಾದಿಸಿ ಅನುವಾದ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಮೊಟ್ಟ ಮೊದಲನೆಯ ಭಾವಗೀತೆಗಳ ಕ್ಯಾಸೆಟ್ ನಿತ್ಯೋತ್ಸವವನ್ನು ೧೯೭೮ರಲಲಿ ಹೊರತಂದು ಹೊಸಹಾದಿ ನಿರ್ಮಿಸಿದ ಕೀರ್ತಿ ನಿಸಾರರಿಗೆ ಸಲ್ಲುತ್ತದೆ. ಇಲ್ಲಿನ ಕವಿತೆಗಳಿಗೆ ಸಂಗೀತ ನೀಡಿ ಹಾಡಿದವರು ಮೈಸೂರು ಅನಂತಸ್ವಾಮಿಯವರು. ದೇಶ ವಿದೇಶಗಳಲ್ಲಿಯೂ ಕೂಡ ಈ ಕ್ಯಾಸೆಟ್ ಜನಮನ್ನಣೆ ಗಳಿಸಿದೆ. ಇದಲ್ಲದೆ ಸುಮಧುರ, ನವೋಲ್ಲಾಸ ಕ್ಯಾಸೆಟ್‌ಗಳು, ಅಡಕ ಮುದ್ರಕ (ಸಿ.ಡಿ) ರೂಪದಲ್ಲಿ ಹೊರಬಂದಿದೆ. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು
ಮನಸು ಗಾಂದಿ ಬಜಾರು, ನೆನದವರ ಮನದಲ್ಲಿ, ಸುಮುಹೂರ್ತ, ಸಂಜೆ ಐದರ ಮಳೆ,ದಶವಾರ್ಷಿಕ ವಿಮರ್ಶೆ, ಸರಸೋಕ್ತಿಗಳ ಸಂಗಾತಿ. ಸತ್ವ ಸಂಪನ್ನರು ಮುಂತಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೭ ಹಾಗೂ ೧೯೮೫ರಲ್ಲಿ ದೆಹಲಿಯಲ್ಲಿ ಏರ್ಪಾಡಾಗುವ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಇವರು ಭಾಗವಹಿಸಿದ್ದಾರು;
೧೯೭೮ ಅಂತರಾಷ್ಟ್ರೀಯ ಮಕ್ಕಳ ವರ್ಷದಲ್ಲಿ ಇವರ ಹಕ್ಕಿಗಳು ಎಂಬ ಪುಸ್ತಕಕ್ಕೆ ರಾಷ್ಟ್ರೀಯ ಬಹುಮಾನ;
೧೯೮೧ ರಲ್ಲಿ ಇವರ ಹೆಜ್ಜೆ ಗುರುತು ಎಂಬ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರು ಅಂತರಾಷ್ಟ್ರೀಯ ಪುರಸ್ಕಾರ;
೧೯೮೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೪ ರಲ್ಲಿ ದುಬೈ ಹಾಗೂ ಅಬುಧಾಬಿ ಪಟ್ಟಣಗಳಲ್ಲಿನ ಕರ್ನಾಟಕ ಸಂಘಗಳಿಂದ ಗೌರವ;
೧೯೮೧ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೦ರಲ್ಲಿ ಕೆಂಪೇಗೌಡ ಪ್ರಶಸ್ತಿ
೧೯೯೫ ವಿಶ್ವಮಾನವ ಪ್ರಶಸ್ತಿ
೧೯೯೮ ಸದ್ಭಾವನಾ ಪ್ರಶಸ್ತಿ
೨೦೦೧ ಅ.ನ.ಕೃ ನಿರ್ಮಾಣ್ ಪ್ರಶಸ್ತಿ
೧೯೮೪ ರಿಂದ ೮೭ ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆ;
೨೦೦೬ ರಲ್ಲಿ ಶಿವಮೊಗ್ಗದಲ್ಲಿ ಜರುಗಿದ ೭೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೨೦೦೭ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ;
ನಿಸಾರ್ ನಿನಗಿದೊ ನಮನ ಇವರ ಅಭಿನಂದನಾ ಗ್ರಂಥ.
 

ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ೧೯೫೮ ಆಗಸ್ಟ್ ೧೫ ರಂದು ಜನಿಸಿದರು. ತಂದೆ ತಿಮ್ಮಶೆಟ್ಟಿಗೌಡ, ತಾಯಿ ಪಾರ್ವತಮ್ಮ. ಇವರು ಚಿಕ್ಕಂದಿನಿಂದಲ್ಲೆ ಸಾಹಿತ್ಯದಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಹತ್ತು ಚಿನ್ನದ ಪದಕಗಳೊಂದಿಗೆ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವ್ಯಾಪಕ ಪ್ರವಾಸ ಕೈಗೊಂಡು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಹೆಸರಾಂತ ಚಲನಚಿತ್ರ ನಿರ್ದೇಶಕರೂ ಕೂಡ. ಕೋಟ್ರೇಶಿ ಕನಸು, ಬಾನಲ್ಲೆ ಮಧುಚಂದ್ರಕೆ, ಅಮೆರಿಕಾ ಅಮೆರಿಕಾ, ಹೂಮಳೆ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ, ಮಾತಾಡ್ ಮಾತಾಡು ಮಲ್ಲಿಗೆ, ಅಮೃತಧಾರೆ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಚಲನ ಚಿತ್ರಗಳು ವಿದೇಶಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿವೆ. ಇವರು ಪ್ರತಿಬಿಂಬ ಮತ್ತು ವಠಾರ ಎಂಬ ಧಾರವಾಹಿಗಳನ್ನು ನಿರ್ದೇಶಿಸಿ ಕಿರುತೆರೆಯಲ್ಲೂ ಜನಪ್ರಿಯರಾಗಿದ್ದಾರೆ.

ಕೃತಿಗಳು
ಹದ್ದುಗಳು, ನನ್ನ ಪ್ರೀತಿಯ ಹುಡುಗನಿಗೆ, ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ, ಸನ್ನಿದಿ, ಅಕಾಲ, ನನ್ನ ಪ್ರೀತಿಯ ಹುಡುಗಿಗೆ, ೧,೨,೩,೪೫,೬, ಆಯನ, ಬಾನಲ್ಲೆ ಮಧುಚಂದ್ರಕೆ, ಅಮೆರಿಕಾ ಅಮೆರಿಕಾ, ಛಿದ್ರ, ಚುಕ್ಕಿಚಂದ್ರಮರ ನಾಡಿನಲ್ಲಿ ಹೊಳೆದಂಡೆ, ದಕ್ಷಿಣ ಧ್ರವದಿಂ, ಪ್ರೇಮಕಥಾ ಸಂಪುಟ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಶತಮಾನದಂಚಿನಲ್ಲಿ, ವಲಸೆ ಹಕ್ಕಿ ಹಾಡು, ಉಂಡು ಹೋದ ಕೊಂಡು ಹೋದ ಚಿತ್ರಕ್ಕೆ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ, ಕೋಟ್ರೇಶಿ ಕನಸು ಚಿತ್ರಕ್ಕೆ ರಾಜ್ಯ ಪ್ರಶಸ್ತಿ, ಕೋಟ್ರೇಶಿ ಕನಸು ಚಿತ್ರಕ್ಕೆ ೧೯೯೪ರಲ್ಲಿ ರಾಷ್ಟ್ರ ಪ್ರಶಸ್ತಿ, ಅಮೆರಿಕಾ ಅಮೆರಿಕಾ,ಚಿತ್ರ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ, ಹಾಗೂ ಅತ್ಯುತ್ತಮ ಕಥಾ ಪ್ರಶಸ್ತಿ, ನನ್ನ ಪ್ರೀತಿಯ ಹುಡುಗಿ ೨೦೦೧ ರ ಅತ್ಯುತ್ತಮ ಯಶಸ್ವಿ ಚಿತ್ರವೆಂದು ಪ್ರಶಸ್ತಿ ಪಡೆದುಕೊಂಡಿದೆ.
 

ಜೀ.ಶಂ. ಪರಮಶಿವಯ್ಯ.
ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವಾಲಗೇ ಜನಪದ ಬರವಣಿಗೆಯಿಂದ ನಾಡಿನ ಗಮನ ಸೆಳೆದಿದ್ದರು. ಇವರು ಕಥೆಗಾರರಾಗಿ, ಕವಿಯಾಗಿ, ಪ್ರಬಂಧಕಾರರಾಗಿ ಹೆಸರುಗಳಿಸಿದ್ದರೂ ಇವರು ಪೂರ್ಣವಾಗಿ ಮಾರು ಹೋಗಿದ್ದು ಜಾನಪದ ಕ್ಷೇತ್ರದಲ್ಲಿ ಜನಪದ ಗೀತೆ, ಕಾವ್ಯಗಳ ವ್ಯಾಪಕ ಸಂಗ್ರಹ ಹಾಗೂ ಅವುಗಳ ಕ್ರಮಬದ್ಧ ಅಧ್ಯಯನ, ಕರ್ನಾಟಕ ಜನಪದ ಗದ್ಯಕಾವ್ಯಗಳ ಅಧ್ಯಯನದ ಮಹತ್ವವನ್ನು ಎತ್ತಿ ಹಿಡಿದು ಉತ್ತಮ ಸಂಗ್ರಹಗಳನ್ನು ಹೊರತಂದುದು ಇವೇ ಮೊದಲಾದ ಸಾಧನೆಗಳನ್ನು ಜಾನಪದ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ವಸ್ತು ಸಂಗ್ರಾಹಾಲಯವನ್ನು ಕಟ್ಟಿ ಬೆಳೆಸಿದರು. ೧೯೬೮ರಲ್ಲಿ ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪಿಸುವಲ್ಲಿ ಇವರದೂ ಪಾತ್ರವಿತ್ತು. ಇವರು ವಿದೇಶಗಳಲ್ಲಿ ಪ್ರವಾಸ ಮಾಡಿ ಜಾನಪದ ಅಧ್ಯಯನ ಕೇಂದ್ರಗಳನ್ನು ಸಂದರ್ಶಿಸಿ ಬಂದರು. ಜಾನಪದದಲ್ಲಿ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೯೫ ಜೂನ್ ೧೭ ರಂದು ಬೆಂಗಳೂರಿನಲ್ಲಿ ನಿಧನರಾದರು.

ಕೃತಿಗಳು
ಜಾನಪದ ಕೆಲವು ಮುಖಗಳು, ಜಾನಪದ ಕಲಾವಿಹಾರ, ಜಾನಪದ ಗಂಗೋತ್ರಿ ನಮ್ಮ ಜಾನಪದ ಸಾಹಿತ್ಯ, ಜಾನಪದ ಸಾಹಿತ್ಯ ಸಮೀಕ್ಷೆ, ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು, ಕನ್ನಡ ವೃತ್ತಿ ಗಾಯಕ ಕಾವ್ಯಗಳು, ದಕ್ಷಿಣ ಕರ್ನಾಟಕದ ಜನಪದ ಕತೆಗಳು, ಒಗಟುಗಳು, ಚಿಂತನಲಹರಿ, ಪಿರಿಯಾಪಟ್ಟಣದ ಕಾಳಗ ಮೊದಲಾದವು.
ಗೌರವ, ಪ್ರಶಸ್ತಿ - ಪುರಸ್ಕಾರಗಳು
೧೯೭೭ ರಲ್ಲಿ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಪ್ರಶಸ್ತಿ
೧೯೮೭ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
೧೯೮೧ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಸ್ಥಾನವಹಿಸಿದ್ದರು.
೧೯೮೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 

ಬಿ. ಪುಟ್ಟಸ್ವಾಮಯ್ಯ :
ಬಿ.ಪುಟ್ಟಸ್ವಾಮಯ್ಯರವರು ೧೮೯೭ರಂದು ಬೆಂಗಲೂರಿನಲ್ಲಿ ಜನಿಸಿದರು. ತಂದೆ ಬಸಪ್ಪ, ತಾಯಿ ಮಲ್ಲಮ್ಮ. ತಮ್ಮ ಹತ್ತನಿಯ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರು. ಆದ್ದರಿಂದ ಓದನ್ನು ಕೈ ಬಿಟ್ಟರು. ಹಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಇವರು ಇಪ್ಪತ್ತು ವರ್ಷದವರಾಗಿದ್ದಾಗ ಪತ್ರಿಕೋದ್ಯಮಕಡಿಗೆ ಆಸಕ್ತಿ ಹೊರಳಿತು. ೧೯೨೫ರಲ್ಲಿ ನ್ಯೂ ಮೈಸೂರ್ ಎಂಬ ವಾರಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಮೈಸೂರಿನಲ್ಲಿ ಪ್ರಕಟವಾಗುತ್ತಿದ್ದ. ಮೈಸೂರ್ ಸ್ಟಾರ್ ಎನ್ನುವ ಪತ್ರಿಕೆಗೆ ವರದಿಗಾರರಾಗಿ ದುಡಿದರು. ಇವರು ಕೆಲವು ಕಾಲ ಚಿತ್ರೋದ್ಯಮದಲ್ಲಿ ದುಡಿದರು. ಜನವಾಣಿಯಲ್ಲಿ ಕೆಲವು ಕಾಲ ದುಡಿದರು. ಪ್ರಜಾವಾಣಿಯ ಮೊದಲ ಸಂಪಾದಕರಾಗಿ ೧೯೪೮ ರಲ್ಲಿ ಆಯ್ಕೆಯಾದರು. ಅನಂತರ ಜನ್ಮಭೂಮಿಯ ಸಂಪಾದಕರಾದರು. ಪತ್ರಿಕೋದ್ಯಮಕ್ಕೆ ಹಲವಾರು ರೀತಿಯಲ್ಲಿ ಸೇವೆ ಸಲ್ಲಿಸಿದರು. ಇವರಿಗೆ ಹಿಂದಿ ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವಬಿತ್ತು. ಪತ್ರಕೋದ್ಯಮದಿಂದ ಸಾಹಿತ್ಯರಂಗದತ್ತ ಹೊರಳಿತು. ನಾಟಕರಂಗದಲ್ಲೂ ಇವರದು ದೊಡ್ಡ ಹೆಸರು. ಕೆಲವು ಬಂಗಾಲಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಕಾದಂಬರಿಕಾರರಾಗಿಯೂ ಪ್ರಸಿದ್ಧರು. ಇವರ ಮಲ್ಲಮ್ಮನ ಪವಾಡ ಕಾದಂಬರಿಯು ಚಲನಚಿತ್ರವಾಗಿ ಜನಪ್ರಿಯಗೊಂಡಿದೆ. ಪ್ರಸಿದ್ಧ ಸಾಹಿತಿ, ನಾಡಕಕಾರ, ಕಾದಂಬರಿಕಾರ, ಪತ್ರಿಕೋದ್ಯಮಿಯಾಗಿ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ಇವರು ನೀಡಿದ ಕೊಡುಗೆ ಅಪಾರ. ಇವರು ೧೯೮೪ ಜೂನ್ ೨೫ ರಂದು ನಿಧನರಾದರು.

ಕೃತಿಗಳು :
ಷಾಜಹಾನ್, ರೂಪರೇಖಾ, ಯಜ್ಞಸೇನಿ, ಅಕ್ಕಮಹಾದೇವಿ, ಸತೀತುಲಸಿ, ಪ್ರಚಂಡ ಚಾಣಕ್ಯ, ಸಂಪೂಂ ರಾಮಾಯಣ, ಜಯದೇವ, ಕುರುಕ್ಷೇತ್ರ, ಚಗಲೆಯ ಬಲಿದಾನ, ಶ್ರೀದುರ್ಗಾವರ ಚಿರಕುಮಾರ ಸಭಾ, ಅಭಿಸಾರಿಕೆ, ಸುಧಾಮಯಿ, ಮಲ್ಲಮ್ಮನ ಪವಾಡ, ರತ್ನಾಹಾರ, ಚಾಲುಕ್ಯ ತೈಲಪ, ತೇಜಸ್ವಿನಿ, ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ, ನಾಗಬಂಧ, ಮುಗಿಯದ ಕವಸು, ಹೂವು ಹಾವು, ಕ್ರಾಂತಿಕಲ್ಯಾಣ, ನಾಟ್ಯಮೋಹಿನಿ, ಧೃವಸ್ವಾಮಿನಿ, ಮುಂತಾದವು.

ಗೌರವ, ಪ್ರಶಸ್ತಿ - ಪುರಸ್ಕಾರಗಳು :
೧೯೬೫ರಲ್ಲಿ ಕ್ರಾಂತಿ ಕಲ್ಯಾಣ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
೧೯೬೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ನಭಿಸಿದೆ.
೧೯೭೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
 

ಪಂಜೆ ಮಂಗೇಶರಾವ್
ಪಂಜೆ ಮಂಗೇಶರಾಯರು ೨೨ ಫೆಬ್ರುವರಿ ೧೮೭೪ರಲ್ಲಿ ಮಂಗಳೂರಿನ ಬಂಟ್ವಾಳದಲ್ಲಿ ಜನಿಸಿದರು. ಇವರು ಕವಿಶಿಷ್ಯ ಕಾವ್ಯನಾಮದಿಂದ ಚಿರಪರಿಚಿತರು. ತಂದೆ ರಾಮಪ್ಪಯ್ಯ, ತಾಯಿ ಸೀತಮ್ಮ, ಇವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ಪಂಜದವರಾಗಿದ್ದರು. ಅನಂತರ ಬಂಟ್ವಾಳದಲ್ಲಿ ನೆಲೆ ನಿಂತರು. ಆದರೂ ಅವರ ಮನೆತನಕ್ಕೆ ಊರ ಹೆಸರು ಪಂಜೆ ಅಂಟಿಕೊಂಡಿತ್ತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಂಟ್ವಾಳದಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿದರು. ೧೮೯೪ರಲ್ಲಿ ಗಿರಿಜಾಬಾಯಿ ಎಂಬುವವರನ್ನು ಮದುವೆಯಾದರು. ೧೮೯೬ರಲ್ಲಿ ಮಂಗಳೂರಿನ ಅಲೋಸಿಯಸ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ ದುಡಿದರು. ಸೈದಾಪೇಟೆಯ ಎಲ್.ಟಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ನಂತರ ರೆಂಜ್ ಡೆಪ್ಯೂಟಿ ಎಜುಕೇಷನಲ್ ಇನ್ಸಪೆಕ್ಟರ್ ಆದರು. ಕಾಸರಗೋಡು ಮತ್ತು ಕೊಡಗಿನಲ್ಲಿ ಶಾಲಾ ತನಿಖಾಧಿಕಾರಿಗಳಾಗಿ, ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಸ್ವಯಂ ನಿವೃತ್ತರಾಗಿ ಮಡಿಕೇರಿಯಿಂದ ಹಿಂದಿರುಗಿದ ಮೇಲೆ ಪಂಜೆಯವರು ೧೯೩೪ರವರೆಗೆ ಮಂಗಳೂರಿನಲ್ಲೇ ನೆಲೆಸಿದ್ದರು. ಆ ಹೊತ್ತಿಗಾಗಲೇ ಅವರ ಸಾಹಿತ್ಯ ಜನಪ್ರಿಯವಾಗಿತ್ತು. ಇದರ ಫಲವಾಗಿಯೇ ೧೯೩೪ರಲ್ಲಿ ರಾಯಚೂರಿನಲ್ಲಿ ಜರುಗಿದ ಇಪ್ಪತ್ತನೆಯ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಪಂಜೆಮಂಗೇಶರಾಯರು ೧೯೨೧ರಲ್ಲಿ ಮಂಗಳೂರಿನಲ್ಲಿ ಬಾಲ ಸಾಹಿತ್ಯ ಮಂಡಲವನ್ನು ಸ್ಥಾಪಿಸಿದರು. ಮಕ್ಕಳಿಗೆ ಉಪಯುಕ್ತವಾಗುವಂತಹ ಸಾಹಿತ್ಯವನ್ನು ಮಂಡಳಿಯ ಮುಖಾಂತರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಹೀಗೆ ಮಕ್ಕಳ ಸಾಹಿತ್ಯದಿಂದ ಹಿಡಿದು ಕಥೆ, ಕವನ, ನಾಟಕ, ವಿಮರ್ಶೆ, ಸಂಪಾದನೆ, ಭಾಷಾಂತರ, ಹಾಸ್ಯ ಮುಂತಾದವುಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಸೇವೆ ಸಲ್ಲಿಸಿದ ಕೀರ್ತಿ ಇವರದು. ೧೯೩೭ರ ಅಕ್ಟೋಬರ್ ೨೪ ರಂದು ತಮ್ಮ ೬೪ನೇ ವಯಸ್ಸಿನಲ್ಲಿ ಹೈದ್ರಾಬಾದಿನಲ್ಲಿ ನಿಧನ ಹೊಂದಿದರು.

ಕೃತಿಗಳು
ಕನ್ನಡದ ಮೊದಲನೆಯ ಪುಸ್ತಕ (೧೯೧೨), ಕನ್ನಡದ ಎರಡನೆಯ ಪುಸ್ತಕ (೧೯೧೯), ಅಜ್ಜಿ ಕಥೆಗಳು (೧೯೧೮), ಪಂಚಕಜ್ಜಾಯ, ಕೋಟೆ ಚೆನ್ನಯ, ದೊಂಬರ ಚೆನ್ನ, ಕಡೆಕಂಜಿ, ಸ್ಥಳನಾಮ, ನಾಗಣ್ಣನ ಕನ್ನಡಕ, ಐತಿಹಾಸಿಕ ಕಥಾವಳಿ, ಒಡ್ಡನ ಓಟ, ಕನ್ನಡದಲ್ಲಿ ಸುಧಾರಣೆಗಳು, ಗುಡುಗುಡು ಗುಮ್ಮಟ ದೇವರು, ಪ್ರಾಣಿಗಳು, ಪ್ರದೇಶಗಳು, ಕನ್ನಡ ಮೂಲ ವ್ಯಾಕರಣ, ಹೇನು ಸತ್ತು ಕಾಗೆ ಬಡವಾಯಿತು ಮುಂತಾದವರು.
 

ಎಂ. ಎಸ್. ಪುಟ್ಟಣ್ಣ :
ಎಂ.ಎಸ್. ಪುಟ್ಟಣ್ಣನವರು ೧೮೫೪ರಲ್ಲಿ ತಾಯಿಯ ತವರೂರು ಮೈಸೂರಿನಲ್ಲಿ ಜನಿಸಿದರು. ಎಂ.ಎಸ್. ಪುಟ್ಟಣ್ಣನವರ ನಿಜವಾದ ಹೆಸರು ಲಕ್ಷ್ಮೀನಾರಾಯಣಶಾಸ್ತ್ರಿ. ಹುಟ್ಟಿದ ಹತ್ತು ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದರು.ಮುದ್ದಾಗಿದ್ದ ಈ ಮಗುವನ್ನು ಎಲ್ಲರೂ ಪುಟ್ಟಣ್ಣ ಎನ್ನುತ್ತಲೇ ಕರೆದು ಇವರಿಗೆ ಅದೇ ಹೆಸರು ಗಟ್ಟಿಯಾಯಿತು., ಪುಟ್ಟಣ್ಣನವರ ವಿದ್ಯಾಭ್ಯಾಸ ಪ್ರಾರಂಭದಲ್ಲಿ ಖಾಸಗಿ ಮಠಗಳಲ್ಲಿ ನಡೆಯಿತು. ಅನಂತರ ಮಹಾರಾಜ ಕಾಲೇಜಿನಲ್ಲಿ ಎಫ್. ಎ. ಪರೀಕ್ಷೆಯಲ್ಲಿ ತೇರ್ಗಡಿಯಗಿ ಕೋಲಾರದ ಪ್ರೌಢಶಾಲೆಯಲ್ಲಿ ಸಹ ಉಪಾಧ್ಯಾಯರಾಗಿ ನೇಮಗೊಂಡರು.
ಪುಟ್ಟಣ್ಣನವರು ತಮ್ಮ ವೃತ್ತಿಯ ಜೊತೆಗೆ ಅಧ್ಯಯನಕ್ಕೂ ಒತ್ತುಕೊಟ್ಟು ೧೮೮೫ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದ ಬಿ.ಎ. ಪದವಿಯನ್ನು ಪಡೆದರು. ಶಾಲೆಯ ಮುಖ್ಯೋಪಾಧ್ಯಾಯರೊಡನೆ ಬಿನ್ನಾಭಿಪ್ರಾಯ ಮೂಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಕೆಲವು ಕಾಲ ಬೆಂಗಳೂರಿನ ಹೈಕೋರ್ಟಿನಲ್ಲಿ ಭಾಷಾಂತರಕಾರರಾಗಿ ದುಡಿದರು. ೧೮೧೯ ರಲ್ಲಿ ಚಿತ್ರದುರ್ಗದ ಅಮಲ್ದಾರ್‌ನ್ನಾಗಿ ನೇಮಿಸಲಾಯಿತು. ಅನಂತರ ನೆಲಮಂಗಲ, ಚಾಮರಾಜನಗರ, ಬಾಗೇಪಲ್ಲಿ, ಮುಳಬಾಗಿಲು, ಹೊಸದುರ್ಗಗಳಲ್ಲಿಯೂ ಅವರು ಅಮಲ್ದಾರರಾಗಿ ಕಾರ್ಯ ನಿರ್ವಹಿಸಿದರು.
ಪುಟ್ಟಣ್ಣನವರು ಸರ್ಕಾರಿ ನೌಕರಿಗೆ ಬೇಸತ್ತು ೧೯೦೮ರಲ್ಲಿ ತಮ್ಮ ವೃತ್ತಿಗೆ ರಾಜೀವಾಮೆ ನೀಡಿದರು. ಪುಟ್ಟಣ್ಣನವರ ಸಾಹಿತ್ಯ ಸೃಷ್ಟಿ ಅನುವಾದ ಮತ್ತು ಪಠ್ಯಗಳಿಂದ ಪ್ರಾರಂಭವಾಯಿತು. ಅವರ ಗದ್ಯ ಸಾಧನೆ ಹಲವು ಪ್ರಕಾರಗಳಲ್ಲಿ ಅಭಿವ್ಯಕ್ತಗೊಂಡಿದೆ. ಕಥೆ, ಕಾದಂಬರಿಗಳು, ಜೀವನ ಚರಿತ್ರೆಗಳು, ರೂಪಾಂತರ, ಭಾಷಾಂತಗಳು, ಸಂಶೋಧನೆ, ಪಠ್ಯರಚನೆ, ಪತ್ರಿಕೋದ್ಯಮ ಹಾಗೂ ಲೇಖನಗಳು ಈ ಮಾತೆಗೆ ಸಾಕ್ಷಿಯಾಗಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿವ ಸಂಸ್ಥಾಪಕರಲ್ಲೊಬ್ಬರು. ಇವರು ೧೯೩೦ ರಲ್ಲಿ ಏಪ್ರಿಲ್ ನಲ್ಲಿ ಮರಣ ಹೊಂದಿದರು

ಕೃತಿಗಳು :
ನೀತಿ ಚಿಂತಾಮಣಿ, ಕನ್ನಡದ ಪ್ರಥಮ ಜೀವನ ಚರಿತ್ರೆ, ಕುಣಿಗಲ್ ರಾಮಾಶಾಸ್ತ್ರಿಗಳ ಚರಿತ್ರೆ , ಮುಸುಗ ತೆಗೆಯೇ ಮಾಯಾಂಗನೆ, ಅವರಿಲ್ಲದೂಟ, ಕನ್ ಫ್ಯೂಶಿಯಸ್, ಮಹಮದ್ ಗವಾನನ ಚರಿತ್ರೆ, ಸರ್ ಸಾಲಾರ್ ಜಂಗನ ಚರಿತ್ರೆ, ಜಯಸಿಂಹರಾಜ ಚರಿತ್ರೆ, ಹೇಮಚಂದ್ರ ರಾಜ ವಿಲಾಸ, ಇಕ್ಕೇರಿ ಸಂಸ್ಥಾನದ ಚರಿತ್ರೆ, ಹಿಂದೂ ಚರಿತ್ರ ದರ್ಪಣ, ಪೇಟೆ ಮಾತೇವಜ್ಜಿ, ಸುಮತಿ, ಮದನಕುಮಾರ ಚರಿತ್ರೆ, ಷೇಕ್ಸಪಿಯರ್ ನ ಸಿಂಬೈಲ್ ನ ನಾಡಕವನ್ನು ಸಿಂಹರಾಜ ಚರಿತ್ರೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
 

ಎಸ್. ವಿ. ಪರಮೇಶ್ವರ ಭಟ್ಟ :
ಶೃಂಗೇರಿ ಸದಾಶಿವರಾಯ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ಇವರ ಪೂರ್ಣ ಹೆಸರು. ಇವರು ೧೯೦೪ ಫೆಬ್ರವರಿ ೮ರಂದು ಜನಿಸಿದರು. ತಂದೆ ಸದಾಶಿವರಾಯ; ತಾಯಿ ಲಕ್ಷ್ಮಮ್ಮ. ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಸಮೀಪದ ತೂದೂರುಕಟ್ಟೆ ಎಂಬಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದರು. ಅನಂತರ ಇವರು ಬೆಂಗಳೂರಿಗೆ ಬಂದು ಇಂಟರ್‌ಮೀಡಿಯೆಟ್ ಕಾಲೇಜು ವಿದ್ಯಾರ್ಥಿಯಾದರು. ಅಲ್ಲಿ ಇವರಿಗೆ ವಿ. ಸೀತಾರಾಯ್ಯನವರು. ಕೆ. ವೆಂಕಟರಾಮಪ್ಪನವರು ಗುರುಗಳಾಗಿ ದೊರೆತರು. ಅನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ (ಆನರ‍್ಸ್) ತರಗತಿಗೆ ಸೇರಿದರು. ಆಗ ಇವರಿಗೆ ಎಚ್. ಎಂ. ಶಂಕರನಾರಯಣರಾವ್, ಜಿ.ವೆಂಕಟಸುಬ್ಬಯ್ಯನಂಥವರು ಸ್ನೇಹಿತರು ದೊರೆತರು. ೧೯೩೮ರಲ್ಲಿ ಏಕೈಕ ವಿದ್ಯಾರ್ಥಿಯಾಗಿ ಕನ್ನಡ ಎಂ. ತರಗತಿಗೆ ಹಾಜರಾದರು.
೧೯೩೯ರಲ್ಲಿ ಮೈಸೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ೧೯೪೦ರಲ್ಲಿ ರಾಜಲಕ್ಷ್ಮಿಯವರನ್ನು ವಿವಾಹವಾದರು. ಇಂಟರ್ ಮೀಡಿಯೆಟ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಇವರಿಗೆ ತುಮಕೂರಿಗೆ ವರ್ಗವಾಯಿತು. ಕೆಲವು ಕಾಲ ಶಿವಮೊಗ್ಗದ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದರು. ೧೯೫೦ರಲ್ಲಿ ಮಡದಿಯ ಅನಾರೋಗ್ಯದ ಕಾರಣದಿಂದಾಗಿ ಮೈಸೂರಿಗೆ ಬಂದು ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾದರು. ಅನಂತರ ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ಅಧ್ಯಾಪಕರಾದರು. ಇವರಿರುವಲ್ಲಿ ಹಾಸ್ಯ, ಸರಸ, ಸಂಭಾಷಣೆ ತುಂಬಿರುತ್ತಿತ್ತು. ಅನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಮಂಗಳೂರಿನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು, ಕನ್ನಡ ವಿಭಾಗದ ಮುಕ್ಯಸ್ಥರೂ ಆದರು. ಸ್ನಾತಕೋತ್ತರ ಕೇಂದ್ರದ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದರು. ೧೯೭೪ರಲ್ಲಿ ನಿವೃತ್ತರಾದ ಬಳಿಕ ಯು.ಜಿ.ಸಿ. ಸಂಶೋಧನಾ ಪ್ರಾಧ್ಯಾಪಕರಾದರು. ಇವರು ೨೦೦೦ ಅಕ್ಟೋಬರ್ ೨೭ ರಂದು ನಿಧನರಾದರು.
ಕೃತಿಗಳು
ರಾಗಿಣಿ, ಗಗನಚುಕ್ಕಿ, ಭಾವಗೀತೆ, ಮಂಥನ, ಚಂದ್ರವೀಧಿ, ಸೀಳುನೋಟ, ಕುಮಾರ ಸಂಭವ, ಮೇಘದೂತ, ಋತು ಸಂಹಾರ, ಅಂಚೆಯ ಪೆಟ್ಟಿಗೆ ಇಂದ್ರಚಾಪ, ಸಂಜೆಯ ಮಲ್ಲಿಗೆ, ಚಂದ್ರವೀದ್ರಿ, ಸುರಗಿ ಸುರಹೊನ್ನೆ, ತುಂಬೆಹೂವು, ಮಳೆಬಿಲ್ಲು, ಉಪ್ಪು ಕಡಲು, ಚಾಮರ, ಉಂಬರ, ಕಣ್ಣುಮುಚ್ಚಾಲೆ, ಅರವತ್ತರ ಅರಳು ಇತ್ಯಾದಿ
ಗೌರವ, ಪ್ರಶಸ್ತಿ - ಪುರಸ್ಕಾರಗಳು
೧೯೭೦ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಚಿನ್ನದ ಹಬ್ಬದ ಸನ್ಮಾನ
೧೯೭೧ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಸನ್ಮಾನ, ಚಾವುಂಡರಾಯ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ
ಇವರಿಗೆ ಪೂರ್ಣಕುಂಭ ಎಂಬ ಸಂಭಾವನಾ ಗ್ರಂಥವನ್ನು ಅಭಿಮಾನ ಬಳಗ ಅರ್ಪಿಸಿದೆ.

ಪಾಟೀಲ್ ಪುಟ್ಟಪ್ಪ
ಪಾಟೀಲ್ ಪುಟ್ಟಪ್ಪನವರು ಹಾವೇರಿ ಜಿಲ್ಲೆಯ ಕುರುಬರಗೊಂಡ ಗ್ರಾಮದಲ್ಲಿ ೧೯೨೨ರ ಜನವರಿ ೧೪ರಂದು ಜನಿಸಿದರು. ತಂದೆ ಸಿದ್ದಲಿಂಗಪ್ಪ, ತಾಯಿ ಮಲ್ಲಮ್ಮ, ಇವರು ಪ್ರಾಥಮಿಕ ಶಿಕ್ಷಣವನ್ನು ಹಲಗೇರಿಯಲ್ಲೂ ಮುಂದಿನ ಶಿಕ್ಷಣವನ್ನು ಬ್ಯಾಡಗಿ , ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದರು. ೧೯೪೫ರಲಲಿ ಬೆಳಗಾವಿ ಕಾನೂನು ಕಾಲೇಜಿನಲ್ಲಿ ಎಲ್.ಎಲ್.ಬಿ. ಪದವಿ ಪಡೆದರು. ಕ್ಯಾಲಿಫೋರ್ನಿಯಾದಲ್ಲಿ ಎಂ.ಎಸ್.ಸಿ. ಪದವಿ ಮುಗಿಸಿದರು. ಬಾಲ್ಯದಲ್ಲಿಯೇ ಇವರು ರಾಷ್ಟ್ರೀಯ ಚಳುವಳಿಯತ್ತ ಆಕರ್ಷಿತರಾದರು. ೧೯೩೦ರಲ್ಲಿ ಹುಬ್ಬಳ್ಳಿಗೆ ನೆಹರು ಬಂದಾಗ ಅವರನ್ನು ಕಂಡು ಪ್ರಭಾವಿತರಾದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದಾಗ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದರು. ೧೯೪೬ರಲ್ಲಿ ವಿಶಾಲ ಕರ್ನಾಟಕ ವಾರಪತ್ರಿಕೆಗೆ ಸೇರಿಕೊಂಡರು ಅನಂತರ ಇದನ್ನು ದಿನಪತ್ರಿಕೆಯಾಗಿ ಮಾಡಿದರು. ಪತ್ರಿಕೋದ್ಯಮ ಅಧ್ಯಯನಕ್ಕಾಗಿ ೧೯೪೯ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ತೊಡಗಿಕೊಂಡು ಬಿ.ಎನ್. ದಾತಾರರ ನೇತೃತ್ವದಲ್ಲಿ ಮಂಗಳೂರು ಶ್ರೀನಿವಾಸರಾವ್, ವೆಂಕಟೇಶ್ ಮಾಗಡಿ, ರಾಮಚಂದ್ರರಾವ್ ಅವರೊಡಗೂಡಿ ಮೈಸೂರಿನಲ್ಲಿ ಸರದಾರ ಪಟೇಲರನ್ನು ಏಕೀಕರಣಕ್ಕಾಗಿ ಚಾಲನೆ ಒದಗಿಸಿದರು. ಪಪಂಚ ವಾರಪತ್ರಿಕೆ ಆರಂಭಿಸಿ ತಮ್ಮ ವೈವಿದ್ಯಮಯ ಬರಹಗಳಿಂದ ಓದುಗರನ್ನು ಸೆರೆಹಿಡಿದರು ೧೯೫೯ರಲ್ಲಿ ವಿಶ್ವವಾಣಿ ಎಂಬ ದಿನಪತ್ರಿಕೆ ಅರಂಭಿಸಿದರು. ೧೯೬೪ರಲ್ಲಿ ಸ್ತ್ರಿ ಎಂಬ ಮಾಸಿಕವನ್ನು ಪ್ರಕಟಿಸುತ್ತಿದ್ದರು. ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ೧೯೬೨-೭೧ರ ಅವಧಿಯಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾದ ಇವರು ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾದರು. ಇವರು ವ್ಯಾಪಕವಾಗಿ ವಿದೇಶ ಯಾತ್ರೆ ಮಾಡಿದ್ದಾರೆ. ಪಶ್ಚಿಮ ಜರ್ಮನಿ, ಬ್ರಿಟನ್, ರಷ್ಯಾಗಳಿಗೆ ಭೇಟಿ ನೀಡಿದ್ದಾರೆ. ಆರಂಭದಿಂದ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದ ಇವರು ಗೋಕಾಕ್ ವರದಿ ಜಾರಿಗೊಳಿಸಲು ರಾಜ್ಯವ್ಯಾಪಿ ಆಂದೋಲನ ನಡೆದಾಗ ಅದರ ನೇತೃತ್ವವಹಿಸಿದ್ದರು. ಕರ್ನಾಟಕ ಸರ್ಕಾರ ಕನ್ನಡ ಕಾವಲು ಮತ್ತು ಗಡಿ ಸಲಹಾ ಸಮಿತಿ ರಚಿಸಿ ಇವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಇಷ್ಟೇ ಅಲ್ಲದೆ ಇವರ ಸಾಹಿತ್ಯ ಸೇವೆಯು ವಿಪುಲವಾದುದು.

ಗೌರವ, ಪ್ರಶಸ್ತಿ- ಪುರಸ್ಕಾರಗಳು
೧೯೭೬ ರಲ್ಲಿ ರಾಜ್ಯ ಪ್ರಶಸ್ತಿ;
೧೯೯೦ ರಲ್ಲಿ ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ;
೧೯೯೩ರಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ
೧೯೯೪ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಟಿ.ಎಸ್. ರಾವ್ ಪ್ರಶಸ್ತಿ.
೧೯೯೬ ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪ್ರಶಸ್ತಿ;
೨೦೦೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ;
೨೦೦೩ ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅಖಿಲ ಭಾರತ ೭೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 

ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ೧೯೩೮ ಸೆಪ್ಟೆಂಬರ್ ೮ ರಂದು ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ಕೆ.ವಿ.ಪುಟ್ಟಪ್ಪ, ತಾಯಿ ಹೇಮಾವತಿ. ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ ಇವರ ಪೂರ್ಣ ಹೆಸರು. ಶಿವಮೊಗ್ಗ ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. (ಅನರ‍್ಸ) ಹಾಘೂ ಎಂ.ಎ. ಪದವಿಗಳನ್ನು ಪಡೆದರು. ೧೯೬೬ ನವೆಂಬರ್ ೨೭ ರಂದು ರಾಜೇಶ್ವರಿ ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತೇಜಸ್ವಿಯವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನೆಲೆಸಿದ್ದರು. ಇವರು ಕೃಷಿಯ ಜೊತೆಗೆ ಸಾಹಿತ್ಯ ಕೃಷಿಯನ್ನು ನಡೆಸಿಕೊಂಡು ಬಂದಿದ್ದರು.
ಕುವೆಂಪುರವರ ಕಲಾತ್ಮಕ ಗುಣವೊಂದನ್ನು ಹೊರತುಪಡಿಸಿ ಇನ್ನಾವುದರ ಪ್ರಭಾವಕ್ಕೊಳಗಾಗದೆ ತಮ್ಮ ಸ್ವಂತಿಕೆಯನ್ನು ಸ್ಥಾಪಿಸಿಕೊಂಡರು. ಕೃಷಿ, ಸಾಹಿತ್ಯದ ಜೊತೆಗೆ ಫೋಟೋಗ್ರಫಿ, ಹಕ್ಕಿಗಳ ಚಿತ್ರಗ್ರಹಣ ಇವರ ವಿಶೇಷತೆ. ಇವರ ಕೆಲವು ಕೃತಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ. ಅಬಚೂರಿನ ಪೋಸ್ಟಾಪೀಸು, ತಬರನ ಕತೆ, ಕುಬಿ ಮತ್ತು ಇಯಾಲ ಇವು ಪ್ರಶಸ್ತಿ ಪಡೆದ ಚಲನಚಿತ್ರಗಳಾಗಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ತಬರನ ಕತೆ ಚಿತ್ರಕ್ಕೆ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ದೊರೆತಿದೆ.
ವಿಶಿಷ್ಟ ಚಿಂತನೆ ಹಾಗೂ ಹಾಸ್ಯ ಪ್ರಜ್ಞೆಯ ಬರಹಗಳಿಂದ ಕನ್ನಡ ಸಾಹಿತ್ಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಚುರುಕಾದ ಕಥನ ಶೈಲಿ, ವೈಚಾರಿಕತೆ ಇವರ ಬರಹದ ಇನ್ನೊಂದು ಗುಣ. ವಿಜ್ಞಾನ ಸಾಹಿತ್ಯದ ಬಗ್ಗೆ ಕೆಲವು ಕೃತಿಗಳನ್ನು ರಚಿಸಿದ್ದಾರೆ.
ಇವರ ಛಾಯಚಿತ್ರ ಸಂಪುಟದ ಶುಭಾಶಯ ಪತ್ರಗಳನ್ನು ಕೂಡಾ ಪ್ರಕಟಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಸುಶ್ಮಿತಾ ಮತ್ತು ಈಶಾನ್ಯ ಇವರು ೨೦೦೭ರ ಏಪ್ರಿಲ್ ೫ ರಂದು ಮೂಡಿಗೆರೆಯಲ್ಲಿ ನಿಧನರಾದರು.

ಕೃತಿಗಳು
ಪ್ಲೈಯಿಂಗ್ ಸಾಸರ‍್ಸ್ ಭಾಗ-೧ ಮತ್ತು ೨ ವಿಸ್ಮಯ ಭಾಗ ೧,೨,೩ ಪರಿಸರದ ಕತೆ, ಸಹಜ ಕೃಷಿ, ಮಿಸ್ಸಿಂಗ್ ಲಿಂಕ್, ನಿಗೂಢ ಮನುಷ್ಯರು, ಬೃಹನ್ನಳೆ, ಯಮಳ ಪ್ರಶ್ನೆ, ನಡೆಯುವ ಕಡ್ಡಿ, ಹಾರುವ ಎಲೆ, ಅಣ್ಣನ ನೆನಪು, ಮಿಂಚುಳ್ಳಿ, ಕನ್ನಡ ನಾಡಿನ ಹಕ್ಕಿಗಳು ಭಾಗ-೧ ಹೆಜ್ಜೆ ಮೂಡದ ಹಾದಿ, ಹಕ್ಕಿ ಪುಕ್ಕ, ಕಾಡಿನ ಕತೆಗಳು, ೧,೨,೩,೪ ರುದ್ರ ಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಕರ್ವಾಲೊ, ಕಿರಗೂರಿನ ಗಯ್ಯಾಳಿಗಳು, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ಮಿಲೆನಿಯಂ (ಭಾಗ ೧ ರಿಂದ ೧೬), ಮಾಯಾಲೋಕ, ಪ್ಯಾಪಿಲಾನ್ ಭಾಗ ೧ ಮತ್ತು ೨ ಅಬಚೂರಿನ ಪೋಸ್ಟಫೀಸು, ಪಾಕ ಕ್ರಾಂತಿ ಮತ್ತು ಇತರ ಕತೆಗಳು, ಹುಲಿಯೂರಿನ ಸರಹದ್ದು, ವ್ಯಕ್ತಿ ವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ, ಸೋಮುವಿನ ಸ್ವಗತ ಲಹರಿ ಮತ್ತು ಇತರ ಕವನಗಳು ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೮೫ರಲ್ಲಿ ಚಿದಂಬರ ರಹಸ್ಯ ಕೃತಿಗೆ ವರ್ಷದ ಶ್ರೇಷ್ಠ ಕೃತಿ ಪ್ರಶಸ್ತಿ ಲಭಿಸಿದೆ.
೧೯೮೭ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೮ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
೧೯೮೯ ರಲ್ಲಿ ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ
೧೯೯೩ ರಾಜ್ಯ ಪರಿಸರ ಪ್ರಶಸ್ತಿ
೨೦೦೧ ಪಂಪ ಪ್ರಶಸ್ತಿ ದೊರೆತಿವೆ.

ಪಂಚಾಕ್ಷರಿ ಹಿರೇಮಠ
ಪಂಚಾಕ್ಷ ಹಿರೇಮಠರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದಲ್ಲಿ ೧೯೩೩ ಜನವರಿ ೬ರಂದು ಜನಿಸಿದರು. ಸ್ವಾತಂತ್ರ್ಯ ಯೋಧರಾಗಿ, ದೇಶಭಕ್ತರಾಗಿ ಸುಸಂಸ್ಕೃತ ನಡೆನುಡಿಗಳಿಂದ ಅಂತರಾಷ್ಟ್ರೀಯ ಖ್ಯಾತಿ ಪಡೆದ ಸಾಹಿತಿ, ಸಮಾಜ ವಿಜ್ಞಾನಿ, ತಂದೆ ಮಲಕಯ್ಯ, ತಾಯಿ ಬಸಮ್ಮ. ಬಾಲ್ಯದಲ್ಲಿ ತಾಯಿ ಹೇಳಿದ ಜಾನಪದ ಗೀತೆ, ಕತೆಗಳು ಇವರ ಮೇಲೆ ಪ್ರಭಾವ ಬೀರಿ ಸಾಹಿತ್ಯ ಪ್ರೇರಣೆ ಮೂಡಿಸಿತು. ಜೊತೆಗೆ ಸಾದುಸಂತರ, ಶರಣರ ಪ್ರಭಾವ ಇವರ ಮೇಲಾಯಿತು. ಹುಟ್ಟೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಶಿಕ್ಷಣಕ್ಕಾಗಿ ಕೊಪ್ಪಳಕ್ಕೆ ಬಂದಾಗ ಸ್ವಾತಂತ್ರ್ಯ ಚಳುವಳಿಯ ಕಾವು ಇವರನ್ನು ಬಿಸಿಯಾಗಿಸಿತು. ಹೈದರಾಬಾದ್ ನಿಜಾಮರು ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೆ ಇದ್ದಾಗ ರಜಾಕರ ಹಾವಳಿಯನ್ನು ಹತ್ತಿಕ್ಕಿ ದಿಟ್ಟತನದಿಂದ ಹೋರಾಡಿ ಕೊಪ್ಪಳ ಕೋಟೆಯ ಮೇಲೆ ಭಾರತದ ಧ್ವಜನವನ್ನು ಹಾರಿಸಿದವರು. ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಮೂವತ್ತೊಂದು ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದರು. ಕನ್ನಡ ಹಿಂದಿ, ಉರ್ದು ಹಾಗೂ ಇನ್ನಿತರ ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಇವರು ಬೇರೆ ಬೇರೆ ಭಾಷೆಯ ಕೃತಿಗಳನ್ನು ಅನುವಾದಿಸಿದರು. ಕಥೆ, ಕವನ, ಕಾದಂಬರಿ, ನಾಟಕ ಜೀವನ ಚರಿತ್ರೆ, ಸಂಪಾದನೆ, ಭಾಷಾಂತರ, ವಿಮರ್ಶೆಗಳಲ್ಲಿ ಸಾಹಿತ್ಯ, ಕೃತಿ ರಚಿಸಿ ಕನ್ನಡ ಸಾಹಿತ್ಯ ದೇವಿಗೆ ಅರ್ಪಿಸಿದ್ದಾರೆ.

ಕೃತಿಗಳು;
ಕವನ ಸಂಕಲನಗಳು: ಚೈತಾಕ್ಷಿ, ಬಯಲ ಬಾನಿನಲ್ಲಿ, ಗಾಳಿಗಂಧ, ಆಶೆ ತುಂಬಿದ ಉಸಿರುಗಳು, ಮಿತ್ರ ದೇಶದ ಕವಿತೆಗಳು, ಇಂದ್ರ ಧನಸ್ಸು ಬೆಳಕಿನ ಹೆಪ್ಪು ಹಾಕುವ ತವಕ.
ಕತೆಗಳು; ಕಾಶ್ಮೀರದ ಹೂ, ಗುಲಾಬಿ ಹೂ, ಎನ್ನಾಲೇಖ
ಕಾದಂಬರಿಗಳು: ಮಾಘ ಚೆಲ್ಲಿದ ಬೆಳಕು, ನಾರಿ, ಕತ್ತಲೆಯೊಂದಿಗೆ,
ಕವಿ ಕಾವ್ಯ ದರ್ಶನ, ಕವಿ ಕಾವ್ಯ ಕಲ್ಪನೆ, ಕವಿ ಕಾವ್ಯ ಚಿಂತನೆ, ಕಚಿ ರವೀಂದ್ರರು, ಹದಿನಾರು, ಪ್ರಬಂಧಗಳು, ಮಧುರವೀ ಬದುಕು, ಚೆಲುವಿನ ಅಲೆಗಳು ಇಂತಹ ಪ್ರಬಂಧ ಹಾಗೂ ವಿಮರ್ಶೆಗಳನ್ನು ವಿಜಯ ಮಹಾಂತೇಶ, ಶಿವಯೋಗಿ ಇಂತಹ ಜೀವಚರಿತ್ರೆ, ಮುಕ್ತಿ ಕ್ಷೇತ್ರ ಉಳವಿ ಐತಿಹಾಸಿಕ ಕೃತಿ, ಭಾರತ ದರ್ಶನ ಪ್ರವಾಸ ಕೃತಿ, ಚಾಕಲೇಟ್ ಮತ್ತು ಇತರ ಕತೆಗಳು, ನೀತಿ ಕತೆಗಳು, ದರೋಡೆಕಾರನ ಮಗ ಮುಂತಾದ ಮಕ್ಕಳ ಸಾಹಿತ್ಯ, ಗವಿ ದೀಪ್ತಿ, ಶಿವಲಿಂಗ ದೀಪ್ತಿಯಂತಹ ಸಂಪಾದನೆ, ಹತ್ತು ಹಿಂದಿ ಲಘು ನಾಟಕಗಳು, ಪಾಂಚಾಲಿ ಶಪಥ (ನಾಟಕ) ಒಳಗೊಂಡಂತೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಭಿಮಾನಿಗಳು ವಾತ್ಸಲ್ಯ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದ್ದಾರೆ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಇವರ ಭಾಷಾ ಪ್ರೌಢಿಮೆ, ಉತ್ತಮ ವ್ಯಕ್ತಿತ್ವ ಹಾಗೂ ಸಾಹಿತ್ಯ ಕೃಷಿಗೆ ಹಲವಾರು ಪ್ರಶಸ್ತಿ - ಪುರಸ್ಕಾರಗಳು ದೊರೆತಿವೆ.
೧೯೮೫ ರಲ್ಲಿ ಅಮೇರಿಕದ ಅರಿಜೋನಾ ವಿಶ್ವವಿದ್ಯಾಲಯದಿಮದ ಡಿ.ಲಿಟ್ ಪದವಿ ಗೌರವ;
೧೯೮೮ರಲಲಿ ಮಿತ್ರ ದೇಶದ ಕತೆಗಳು ಅನುವಾದಿತ ಕವನ ಸಂಕಲನಕ್ಕೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕರಂಡಿಕರ ಸಾಹಿತ್ಯ ಪ್ರಶಸ್ತಿ, ಮೂರು ಸಾವಿರ ಮಠ ಸಾಹಿತ್ಯ ಪ್ರಶಸ್ತಿಗಳನ್ನು ನೀಡಿ ಇವರನ್ನು ಗೌರವಿಸಲಾಗಿದೆ.
 

ಜೆ.ಎಫ್.ಫ್ಲೀಟ್
ಜಾನ್ ಫೆಯ್ತ್ ಘುಲ್ ಪ್ಲೀಟ್ ಇವರ ಪೂರ್ಣ ಹೆಸರು. ಇಂಗ್ಲೆಂಡಿನ ಚೆಸ್ಟಿಕ್‌ನಲ್ಲಿ ಜನಿಸಿದರು. ಜಾನ್ ಜಾರ್ಜ್‌ಪ್ಲೀಟ್ ಮತ್ತು ಎಸ್ತರ್ ಫೆಯ್ತಫುಲ್ ಇವರ ತಂದೆ ತಾಯಿಗಳು. ಲಂಡನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಇವರು ಸಂಸ್ಕೃತವನ್ನು ಐಚ್ಛಿಕ ಭಾಷೆಯನ್ನಾಗಿ ಅಭ್ಯಾಸ ಮಾಡಿದರು. ೧೮೬೫ರಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್‌ಗೆ ನೇಮಕಗೊಂಡು ಮುಂಬಯಿ ಸರ್ಕಾರದ ರೆವಿನ್ಯೂ ಇಲಾಖೆಯಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಹುದ್ದೆಯನ್ನು ನಿರ್ವಹಿಸಲು ಮೊಟ್ಟಮೊದಲ ೧೮೬೭ರಲ್ಲಿ ಭಾರತಕ್ಕೆ ಬಂದರು. ಕೊಲ್ಲಾಪುರ, ಸೊಲ್ಲಾಪುರ, ಬೆಳಗಾವಿ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡಿದರು. ಅಸಿಸ್ಟೆಂಟ್ ಕಲೆಕ್ಟರ್, ವಿದ್ಯಾಧಿಕಾರಿ, ಅಸಿಸ್ಟೆಂಟ್ ಪೊಲಿಟಿಕಲ್ ಏಜೆಂಟ್, ಶಾಸನ ಶಾಸ್ತ್ರಜ್ಞ ಜೂನಿಯರ್ ಕಲೆಕ್ಟರ್, ಸೀನಿಯರ್ ಕಲೆಕ್ಟರ್, ಕಸ್ಟಮ್ಸ್ ಕಮಿಷನರ್ ಮುಂತಾದ ಹುದ್ದೆಗಳನ್ನು ನಿರ್ವಹಿಸಿ ೧೮೯೭ರಲ್ಲಿ ನಿವೃತ್ತರಾದರು. ಜೆ.ಎಫ್. ಪ್ಲೀಟ್ ಇವರು ಸಮರ್ಥ ಆಡಳಿತಾಧಿಕಾರಿಯಾಗಿದ್ದಂತೆಯೇ ಶ್ರೇಷ್ಠ ಸಂಶೋಧಕರೂ ಆಗಿದ್ದರು. ಭಾರತಕ್ಕೆ ಬಂದೊಡನೆ ಇವರು ಮುಂಬಯಿ ಪ್ರಾಂತ್ಯದ ಶಾಸನಗಳ ಸಂಶೋಧನೆಗೆ ತೊಡಗಿದರು. ಪ್ರಾರಂಭದಲ್ಲಿ ಇವರ ಲೇಖನಗಳು ರಾಯಲ್ ಏಷ್ಯಾಟಿಕ್ ಸೊಸೈಟಿಯ ಮುಂಬಯಿ ಶಾಖೆಯ ಪತ್ರಿಕೆಯಲ್ಲಿ ಪ್ರಕಟವಾದವು. ಅಂಟಿಕ್ಷೆರಿ ಪತ್ರಿಕೆ ಪ್ರಾರಂಭವಾದಾಗ ಏಳು ವರ್ಷಗಳ ಕಾಲ ಇದರ ಸಂಪಾದಕರಾಗಿದ್ದರು.
ಭಾರತೀಯ ಶಾಸನಶಾಸ್ತ್ರ ಪಿತಾಮಹಾ ಎಂದು ಇವರನ್ನು ಕರೆಯಬಹುದು. ಶಾಸನ ಕ್ಷೇತ್ರದಲ್ಲಿ ಪ್ಲೀಟ್ ಹೆಸರು ದೊಡ್ಡದು. ಶಾಸನಶಾಸ್ತ್ರವಲ್ಲದೆ ಭೂಗೋಳ, ಖಗೋಳ, ಇತಿಹಾಸ, ಭಾಷಾಶಾಸ್ತ್ರ, ಲಿಪಿಶಾಸ್ತ್ರ ಮುಂತಾದವುಗಳಲ್ಲಿ ಇವರು ಪರಿಣತರಾಗಿದ್ದರು. ಸಂಸ್ಕೃತ - ಕನ್ನಡ ಸಾಹಿತ್ಯದಲ್ಲಿ ಇವರಿಗೆ ಅಪಾರ ಒಲವಿತ್ತು. ಪ್ಲೀಟ್‌ರವರ ಸಂಸ್ಕೃತ, ಪಾಳಿ ಮತ್ತು ಹಳಗನ್ನಡ ಶಾಸನಗಳು ಎಂಬ ಕೃತಿ ೧೮೭೮ ರಲ್ಲಿ ಪ್ರಕಟವಾಯಿತು. ೧೮೯೮ರಲ್ಲಿ ಮುಂಬಯಿ ಪ್ರಾಂತ್ಯದ ಕನ್ನಡ ಜಿಲ್ಲೆಗಳ ರಾಜವಂಶಗಳು ಎಮಬ ಮತ್ತೊಂದು ಅಮೂಲ್ಯ ಕೃತಿ ಪ್ರಕಟವಾಯಿತು. ಬಿ.ಎಲ್. ರೈಸರಂತೆ ಕನ್ನಡಿಗರಿಗೆ ಮಹೋಪಕಾರ ಮಾಡಿದ್ದಾರೆ. ಪ್ಲೀಟರ್ ಕಾರ್ಯಕ್ಷೇತ್ರ ಉತ್ತರ ಕರ್ನಾಟಕವಾಗಿತ್ತು. ಹಲವು ಕನ್ನಡ ಲಾವಣಿಗಳನ್ನು ಇಂಗ್ಲಿಷ್ ಅನುವಾದ ಸಹಿತ ಪ್ರಕಟಿಸಿ ಕನ್ನಡ ಜನಪದ ಸಾಹಿತ್ಯ ಸಂಗ್ರಹಕ್ಕೆ ಆದ್ಯರಾದ ಕೀರ್ತಿಯೂ ಪ್ಲೀಟ್‌ರಿಗೆ ಸಲ್ಲಬೇಕು. ಕನ್ನಡ ಭಾಷೆ, ಸಾಹಿತ್ಯಗಳ ಬಗ್ಗೆ ಇವರಿಗೆ ಬಹಳ ಅಭಿಮಾನವಿತ್ತು. ಭರತ ಖಂಡಕ್ಕೂ ಕನ್ನಡ ನಾಡಿಗೂ ವಿಶೇಷವಾದ ಸೇವೆ ಸಲ್ಲಿಸಿದ ಪಾಶ್ಚಾತ್ಯ ವಿದ್ವಾಂಸರಲೊಬ್ಬರು.
 

ಬಸವರಾಜ ಕಟ್ಟೀಮನಿ
ಪ್ರಗತಿಶೀಲ ಕಾದಂಬರಿಕಾರ ಬಸವರಾಜ ಕಟ್ಟೀಮನಿ ೧೯೧೯ ಅಕ್ಟೋಬರ್ ೫ರಂದು ಬೆಳಗಾವಿ ಜಿಲ್ಲೆಯ ಮಲಾಮರಡಿಯಲ್ಲಿ ಜನಿಸಿದರು. ತಂದೆ ಅಪ್ಪಣ್ಣ, ತಾಯಿ ಬ ಾಳವ್ವ. ತಂದೆ ಸಶಸ್ತ್ರ ಪಡೆಯಲ್ಲಿ ಸಿಪಾಯಿಯಾಗಿದ್ದರು. ಇವರ ಪ್ರಾಥಮಿಕ ಶಿಕ್ಷಣ ಕಿತ್ತೂರಿನಲ್ಲಿ ಜರುಗಿತು. ಮುಂದೆ ಗೋಕಾಕ್, ಬೆಳಗಾವಿಯಲ್ಲಿ ವಿದ್ಯಾಭ್ಯಾಸ ಜರುಗಿತು. ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಕಟ್ಟಿಮನಿಯವರಿಗೆ ಪ್ರಾರಂಭದಿಂದಲೂ ಆಸಕ್ತಿಯಿದ್ದು ಜೀವನೋಪಾಯಕ್ಕಾಗಿ ಅದೇ ಉದ್ಯೋಗವನ್ನು ಆಶ್ರಯಿಸಿದರು. ಸಂಯುಕ್ತ ಕರ್ನಾಟಕ, ತರುಣ ಕರ್ನಾಟಕ, ಸಮಾಜ ಲೋಕಮತ, ಕರ್ನಾಟಕ ಬಂದು, ಸ್ವತಂತ್ರ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ೧೯೪೨ರಲ್ಲಿ ಚಲೆಜಾವ್ ಚಳುವಳಿಯಲ್ಲಿ ಕಟ್ಟೀಮನಿಯವರು ಧುಮುಕಿದರು. ಇದರಿಂದ ಬಂಧನಕ್ಕೊಳಗಾದರು. ಸೆರೆಮನೆಯಿಂದ ಹೊರಬಂದು ಉಷಾ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಸ್ವತಂತ್ರ ಪತ್ರಿಕೆಯನ್ನು ಕೆಲಕಾಲ ನಡೆಸಿದರು. ಇವರು ಸುಮಾರು ಅರವತ್ತು ಕೃತಿಗಳನ್ನು ರಚಿಸಿದ್ದಾರೆ. ಬಸವರಜ ಕಟ್ಟೀಮನಿಯವರು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇವರು ಸೋವಿಯತ್ ದೇಶಕ್ಕೂ ಭೇಟಿ ನೀಡಿದ್ದರು. ಇವರು ೧೯೮೯ರ ಅಕ್ಟೋಬರ್ ೨೩ ರಂದು ನಿಧನರಾದರು.

ಕೃತಿಗಳು
ಜ್ವಾಲಮುಖಿಯ ಮೇಲೆ, ನಾನೂ ಪೋಲಿಸನಾಗಿದ್ದೆ, ಬಂಗಾರದ ಜಿಂಕೆಯ ಹಿಂದೆ, ಬೆಂಗಳೂರಿಗೊಂದು ಟಿಕೀಟು, ಮೋಹದ ಬಲೆಯಲ್ಲಿ, ಜರತಾರಿ ಜಗದ್ಗುರು, ಬೀದಿಯಲ್ಲಿ ಬಿದ್ದವಳು, ಗಿರಿಯ ನವಿಲು, ಖಾನವಳಿ ಲೀಲಾ, ಜಲತರಂಗ, ಜನಿವಾರ ಮತ್ತು ಶಿವದಾರಾ, ಬಲೆಯ ಬೀಸಿದರು, ನೀನನ್ನ ಮುಟ್ಟಬೇಡ, ಸಾಕ್ಷಾತ್ಕಾರ, ನರಗುಂದ ಬಂಡಾಯ, ಸಂಗೋಳ್ಳಿ ರಾಯನಾಯಕ, ಬೆಳಗಿನ ಗಾಳಿ, ನಾನು ಕಂಡ ರಷ್ಯಾ, ಕುಂದರ ನಾಡಿನ ಕಂದ, ಮಾಜೀ ಮಂತ್ರಿ, ಸಮರ ಭೂಮಿ, ಪೌರುಷ ಪರೀಕ್ಷೆ, ಮಣ್ಣು ಮತ್ತು ಹೆಣ್ಣು, ಸೇನಾಪತಿ ಚೆನ್ನಪ್ಪ, ಮಾಡಿ ಮಾಡಿದವರು, ಸ್ವಾತಂತ್ರ್ಯದ ಕಡೆಗೆ, ಗೋವಾದೇವಿ, ದ್ರೋಹಿ, ಕತ್ತರಿ ಪ್ರಯೋಗ, ಹರಿಜನಾಯಣ, ಸುಂಟರಗಾಳಿ, ಹುಲಿಯಣ್ಣನ ಮಗಳು ಮುಂತಾದವು.
ಕಾದಂಬರಿಕಾರನ ಕಥೆ ಎಂಬುದು ಇವರ ಆತ್ಮಕಥೆ. ಕಟ್ಟಿಮನಿ ಎಂಬುದು ಇವರ ಅಭಿನಂದನಾ ಗ್ರಂಥ

ಗೌರವ, ಪ್ರಶಸ್ತಿ- ಪುರಸ್ಕಾರಗಳು
೧೯೬೮ರಲ್ಲಿ ಜ್ವಾಲಮುಖಿಯ ಮೇಲೆ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಲಭಿಸಿದೆ.
೧೯೮೦ರಲ್ಲಿ ಬೆಳಗಾವಿಯಲ್ಲಿ ಜರುಗಿದ ೫೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 

ಬೆಂಜಮಿನ್ ಲೂಯಿ ರೈಸ್ :
ಬೆಂಜಮಿನ್ ಲೂಯಿ ರೈಸರು ೧೮೩೭ರ ಜುಲೈ ೧೭ ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಬೆಂಜಮಿನ್ ಹೋಲ್ಟ್ ರೈಸ್ ಒಬ್ಬ ನಿಷ್ಠಾವಂತ ಆಂಗ್ಲ ಕ್ರೈಸ್ತ ಪಾದ್ರಿ. ಭಾರತದಲ್ಲಿ ಜನಿಸಿದ ಇವರು ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡಿ ೧೮೬೦ ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಐದು ವರ್ಷ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಮೈಸೂರು ಮತ್ತು ಕೊಡಗುಗಳಲ್ಲಿ ಶಾಲಾ ಇನ್ಸ್ ಪೆಕ್ಟರ್ ಆಗಿದ್ದರು. ೧೮೬೮ ರಲ್ಲಿ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾಧಿಕಾರಿಯಾಗಿಯೂ ದುಡಿದರು. ೧೮೮೩ ರಲ್ಲಿ ಮೈಸೂರು ಸರ್ಕಾರದ ವಿದ್ಯಾಶಾಲೆಯ ಪ್ರಥಮ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು.
ಕನ್ನಡದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದ ರೈಸ್ ವಿದ್ಯಾಭ್ಯಾಸ ಇಲಾಖೆಯಲ್ಲಿದ್ದ ಸಂಸ್ಥಾದಲ್ಲಿದ್ದ ಸ್ಥಳ ಪುರಾಣ, ಶಾಸನ, ಚಾರಿತ್ರಿಕ ವಿಷಯಗಳು, ಪುರಾತನ ಗ್ರಂಥಗಳನ್ನು ಸಂಗ್ರಹಿಸುತ್ತ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಶಾಸನ ವಿಷಯಗಳನ್ನು ಆಗಾಗ ಪ್ರಕಡಿಸುತ್ತಿದ್ದರು. ಮೈಸೂರು ಸರ್ಕಾರ ೧೮೮೪ರಲ್ಲಿ ಪ್ರಾಚ್ಯವಸ್ತು ಶಾಖೆಯನ್ನಾರಂಭಿಸಿದಾಗ ಇವರು ತಮ್ಮ ಹುದ್ದೆಯ ಜೊತೆಗೆ ಈ ಶಾಖೆಯ ಅಧಿಕಾರವನ್ನು ವಹಿಸಿಕೊಂಡರು.ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರೈಸರು ೧೯೦೬ರ ವರೆಗೆ ಈ ದೇಶದ ಪುರಾತನ ಅಧ್ಯಯನ ರಂಗದಲ್ಲಿ ಆವಿಶ್ರಾಂತರಾಗಿ ದುಡಿದು ತಮ್ಮ ೭೦ನೇ ವಯಸ್ಸಿಗೆ ನಿವೃತ್ತರಾಗಿ ತಾಯ್ನಾಡಿಗೆ ಮರಳಿ ಹ್ಯಾರೋ ಪಟ್ಟಣದಲ್ಲಿ ನೆಲೆಸಿದರು. ಅನಂತರ ೧೯೨೭ ಜುಲೈ ತಿಂಗಳಲ್ಲಿ ತಮ್ಮ ೯೦ನೇಯ ವಯಸ್ಸಿನಲ್ಲಿ ನಿಧನರಾದರು.

ಬೆನಗಲ್ ರಾಮರಾವ್‌ರವರು ೧೮೭೬ರ ಏಪ್ರಲ್ ೩ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಜನಿಸಿದರು. ತಂದೆ ಮಂಜುನಾಥಯ್ಯ, ಸುಪ್ರಸಿದ್ಧ ವಕೀಲರು; ತಾಯಿ ರಾಮಾಯಾಯಿ. ಸಂಗೀತ, ಸಾಹಿತ್ಯ, ಯಕ್ಷಗಾನ ಇವು ಮಂಜುನಾಥಯ್ಯನವರ ಪ್ರವೃತ್ತಿಗಳು. ಹೀಗೆ ಸುಸಂಸ್ಕೃತ ಕುಟುಂಬದಿಂದ ಬಂದ ಇವರಿಗೆ ಇವು ಒಗ್ಗೂಡಿ ಬಂದಿದ್ದವು.೧೯೦೨ರಲ್ಲಿ ಮುಂಬಯಿ ಸರ್ಕಾರದ ಭಾಷಾಂತರ ಶಾಖೆಯಲ್ಲಿ ಭಾಷಾಂತರಕಾರರಾಗಿ ಸುಮಾರು ೮ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ೧೯೦೮ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ ಪಡೆದುಕೊಂಡರು. ೧೯೧೦ರಲ್ಲಿ ಶಾಖೆಯ ಮುಖ್ಯಸ್ಥರಾದರು. ನಿವೃತ್ತಿಯಗುವವರೆಗೂ ಅದೇ ವೃತ್ತಿಯಲ್ಲಿ ಮುಂದುವರೆದರು.
ಕನ್ನಡ ತೆಲುಗು, ಸಂಸ್ಕೃತ, ಬಂಗಾಲಿ, ಮರಾಠಿ ಭಾಷೆಗಳ ಪರಿಚಯ ಪಡೆದಿದ್ದ ರಾಮರಾಯರು ಆ ಭಾಷೆಗಳಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ರಾಮರಾಯರು ೧೯೪೩ ಮೇ ೮ರಂದು ನಿಧವರಾದರು.
ಗೌರವ, ಪ್ರಶಸ್ತಿ - ಪುರಸ್ಕಾರಗಳು
ರಲ್ಲಿ ಬೆಳಗಾವಿಯಲ್ಲಿ ನಡೆದ ೧೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಬೆನಗಲ್ ರಾಮರಾವ್ :
ಬೆನಗಲ್ ರಾಮರಾವ್‌ರವರು ೧೮೭೬ರ ಏಪ್ರಲ್ ೩ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಜನಿಸಿದರು. ತಂದೆ ಮಂಜುನಾಥಯ್ಯ, ಸುಪ್ರಸಿದ್ಧ ವಕೀಲರು; ತಾಯಿ ರಾಮಾಯಾಯಿ. ಸಂಗೀತ, ಸಾಹಿತ್ಯ, ಯಕ್ಷಗಾನ ಇವು ಮಂಜುನಾಥಯ್ಯನವರ ಪ್ರವೃತ್ತಿಗಳು. ಹೀಗೆ ಸುಸಂಸ್ಕೃತ ಕುಟುಂಬದಿಂದ ಬಂದ ಇವರಿಗೆ ಇವು ಒಗ್ಗೂಡಿ ಬಂದಿದ್ದವು. ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಹುಟ್ಟೂರಾದ ಮಂಗಳೂರಿನಲ್ಲಿ ಮುಗಿಸಿದ ಅನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಾಲೇಜಿಗೆ ಪ್ರವೇಶ ಪಡೆದು ೧೮೯೭ರಲ್ಲಿ ಬಿ.ಎ. ಪದವಿ ಗಳಿಸಿದರು. ಇವರು ಅಭ್ಯಾಸ ಮಾಡಿದ ಪ್ರಮುಖ ವಿಷಯಗಳಲ್ಲಿ ಕನ್ನಡ ಭಾಷಾಶಾಸ್ತ್ರವೂ ಒಂದು. ೧೯೦೦ ರಲ್ಲಿ ರಾಚರಾಯರು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡಿದುಕೊಂಡರು. ರಾಮರಾಯರು ಕನ್ನಡದ ಜೊತೆಗೆ ತೆಲುಗುವನ್ನು ಅಭ್ಯಸಿಸಿದರು. ೧೯೦೮ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿ ಪಡೆದುಕೊಂಡರು. ೧೯೧೦ರಲ್ಲಿ ಶಾಖೆಯ ಮುಖ್ಯಸ್ಥರಾದರು. ನಿವೃತ್ತಿಯಗುವವರೆಗೂ ಅದೇ ವೃತ್ತಿಯಲ್ಲಿ ಮುಂದುವರೆದರು.
ಕನ್ನಡ ತೆಲುಗು, ಸಂಸ್ಕೃತ, ಬಂಗಾಲಿ, ಮರಾಠಿ ಭಾಷೆಗಳ ಪರಿಚಯ ಪಡೆದಿದ್ದ ರಾಮರಾಯರು ಆ ಭಾಷೆಗಳಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಪತ್ರಿಕೋದ್ಯಮದಲ್ಲಿ ರಾಮರಾಯರಿಗೆ ಆಸಕ್ತಿ ಇತ್ತು. ಧಾರವಾದಿಂದ ಪ್ರಕಟವಾಗುತ್ತಿದ್ದ ವಾಗ್ಭೂಷಣ ಪತ್ರಿಕೆಯ ಸಹ ಸಂಪಾದಕರಾಗಿಯೂ ಕೆಲಕಾಲ ದುಡಿದರು. ರಾಮರಾಯರು ೧೯೪೩ ಮೇ ೮ರಂದು ನಿಧವರಾದರು.
ಕೃತಿಗಳು :
ಕರ್ನಾಟಕ ಕಂದಮಾಲೆ, ಕಲಹಪ್ರುಯ, ಕರ್ನಾಟಕ ಘೋಷಯಾತ್ರೆ, ಸತ್ಯರಾಜನ ಪೂರ್ವ ದೇಶದ ಯಾತ್ರೆಗಳು, ಕೃಷ್ಣಕುಮಾರಿ, ಸುಭದ್ರವಿಜಯ, ಇರಾವತಿ ಚಿಕ್ಕ ಕತೆಗಳು, ಪುರಾಣ ನಾಚಚೂಡಾಮಣಿ (ಸಂಪಾದಕರಾಗಿ) ತಂಜಾಬೂರು ಮನೆತನ ಕೈಫಿಯತ್ತು, ಜಯದೇವನ ವಿಜಯ, ತರುಬಾಲಾ, ಸುಭದ್ರಾಹರಣ ಇತ್ಯಾದಿ.

ಗೌರವ, ಪ್ರಶಸ್ತಿ - ಪುರಸ್ಕಾರಗಳು
ರಲ್ಲಿ ಬೆಳಗಾವಿಯಲ್ಲಿ ನಡೆದ ೧೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 

ಬೆಟಗೇರಿ ಕೃಷ್ಣಶರ್ಮ
ಬೆಟಗೇರಿ ಕೃಷ್ಣಶರ್ಮರವರು ೧೯೦೦ ಏಪ್ರಿಲ್ ೧೬ ರಂದು ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಜನಿಸಿದರು. ಆನಂದಕಂದ ಇವರ ಕಾವ್ಯನಾಮ ತಮ್ಮ ಹನ್ನರಡನೇ ಮಯಸ್ಸಿಗೆ ತಂದೆಯನ್ನು ಕಳೆದುಕೊಂಡು ಸಂಸಾರದ ಹೊರೆಯನ್ನು ಹೊರಲೇಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಅಲ್ಪ ಸ್ವಲ್ಪ ಓದು ಕಲಿತ ಕೃಷ್ಣಶರ್ಮರು ಮನೆಯಲ್ಲಿದ್ದರು. ೧೯೧೯ರಲ್ಲಿ ಧಾರವಾಡದಲ್ಲಿ ಜರುಗಿದ ಕರ್ನಾಟಕ ಏಕೀಕರಣ ಸಮ್ಮೇಳನ ಜರುಗಿದಾಗ ಕಾವ್ಯಾನಂದರ ನೇತೃತ್ವದಲ್ಲಿ ಸ್ವಯಂ ಸೇವಕರಾಗಿ ದುಡಿದರು. ಆಗ ಇವರಿಗೆ ಕೆರೂರು ವಾಸುದೇವಾಚಾರ್ಯ, ಹುಯಿಲಗೊಳ ನಾರಾಯಣರಾವ್ ಅವರಂತಹ ಸಂಪರ್ಕ ಅಲ್ಲದೇ ಕನ್ನಡಾಭಿಮಾನವೂ ಬೆಳೆಯಿತು.
ಬೆಟಗೇರಿಯವರು ಶಿಕ್ಷಕ ವೃತ್ತಿಗಿಂತ ಲೇಖಕ ಸಂಪಾದಕ ವೃತ್ತಿಯನ್ನೇ ಬಹುವಾಗಿ ಮೆಚ್ಚಿದರು. ಬೆಟಗೇರಿಯವರು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ಕೆಲಸ ಮಾಡಿದರು. ಅನಂತರ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿಯೂ ಕೆಲಕಾಲ ದುಡಿದರು. ಬೆಳಗಾವಿಯಲ್ಲಿ ಮರಾಠಿ ವಾತಾವರಣ ಇದ್ದ ಕಾರಣ ಅಲ್ಲಿಯ ಜನರಲ್ಲಿ ಕನ್ನಡ ಪ್ರಜ್ಞೆ ಮೂಡಿಸಲು ಬಹುವಾಗಿ ಶ್ರಮಿಸಿದರು. ಆ ಸಂದರ್ಭದಲ್ಲಿಯೇ ಎನಿತು ಇನಿದು ಈ ಕನ್ನಡ ನುಡಿಯು ಎಂಬ ಸುಂದರ ಗೀತೆಯನ್ನು ರಚಿಸಿದರು. ೧೯೩೮ರಲ್ಲಿ ಜಯಂತಿ ಪತ್ರಿಕೆಯನ್ನು ಆರಂಭಿಸಿ ಸುಮಾರು ೨೫ ವರ್ಷಗಳ ಕಾಲ ನಡೆಸಿದರು. ಸ್ವಧರ್ಮ, ಜಯ ಕರ್ನಾಟಕ ಈ ಪತ್ರಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ಇವರು ೧೯೮೨ರಲ್ಲಿ ನಿಧನರದರು.

ಕೃತಿಗಳು
ರಾಜಯೋಗಿ, ಅಶಾಂತಿ ಪರ್ವ, ಮಲ್ಲಿಕಾರ್ಜುನ, ಮುದ್ದಣ ಮಾತು, ಕಾರ ಹುಣ್ಣಿಮೆ, ವಿರಹಿಣಿ, ಒಡನಾಡಿ, ಸಂಸಾರ ಚಿತ್ರಗಳು, ಕಳ್ಳರ ಗುರು, ಸಂಸ್ಕೃತಿ ಪರಂಪರೆ, ಕರ್ನಾಟಕ ಜನಜೀವನ ಇವು ಇವರ ಕೃತಿಗಳು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೩೭ರಲ್ಲಿ ಜಮಖಂಡಿಯಲ್ಲಿ ನಡೆದ ೨೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯ ಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.
೧೯೭೧ರಲ್ಲಿ ನಾಗಮಂಗಲದಲ್ಲಿ ನಡೆದ ಜಾನಪದ ಸಮ್ಮೇಳನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
೧೯೭೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
 

ಸಂ.ಶಿ. ಭೂಸನೂರಮಠ
ಸಂ.ಶಿ.ಭೂಸನೂರಮಠ ಇವರು ೧೯೧೦ರಲ್ಲಿ ಅವಿಭಜಿತ ಧಾರವಾಡ ಜಿಲ್ಲೆ (ಇಂದಿನ ಗದಗ ಜಿಲ್ಲೆ)ಯ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ ಇವರ ಪೂರ್ಣ ಹೆಸರು. ಇವರು ನಿಡಗುಂದಿ, ಗದಗ ಮತ್ತು ಹುಬ್ಬಳ್ಳಿಗಳಲ್ಲಿ ವ್ಯಾಸಂಗಮಾಡಿ ೧೯೩೧ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೩೫ರಲ್ಲಿ ಬಿ.ಎ. (ಅನರ‍್ಸ್) ಪದವಿಯನ್ನು ಗಳಿಸಿದರು. ೧೯೩೭ರಲ್ಲಿ ಮುಮಬಯಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಎಂ.ಎ. (ಕನ್ನಡ) ಪದವಿ ಪಡೆದುಕೊಂಡರು.
ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭವಾಯಿತು. ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. ಯು.ಜಿ.ಸಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕಲಾ ವಿಭಾಗದ ಡೀನ್ ಆಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಸಂಪಾದಕರ ಸಮಿತಿಯ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದರು. ಇವರು ೧೯೯೧ರ ನವೆಂಬರ್ ೬ ರಂದು ನಿಧನರಾದರು.

ಕೃತಿಗಳು
ಭಕ್ತಿ ಸುಧಾಸಾರ, ಸಿದ್ಧ ನಂಜೇಶನ ಗುರುರಾಜ ಚಾರಿತ್ರ್ಯ, ಮೋಳಿಗೆ ಮಾರಯ್ಯನ ವಚನಗಳು, ರಾಣಿ ಮಹಾದೇವಿಯವರ ವಚನಗಳು, ಗೌರಂಕನ ಮೋಲಿಗೆಯ್ಯನ ಪುರಾಣ, ಅದೃಶ್ಯ ಕವಿಯ ಪ್ರೌಢರಾಯನ ಕಾವ್ಯ, ಸಿದ್ದ ವೀರಣೊಡೆಯರ ಶೂನ್ಯ ಸಂಪಾದನೆ, ಮಹಾಲಿಂಗದೇವರ ಏಕೋತ್ತರ ಶತಸ್ಥಲ, ಕಲ್ಲಮಠದ ಪ್ರಭುದೇವರ ಲಿಂಗಲೀಲಾ ವಿಲಾಸ ಚಾರಿತ್ರ್ಯ, ಶೂನ್ಯ ಸಂಪಾದನೆಯ ಪರಾಮರ್ಶೆ, ಕಲ್ಯಾಣದಿಂದ ಕಾಶ್ಮೀರಕ್ಕೆ ಇವು ಇವರ ಕೃತಿಗಳು.

ಗೌರವ, ಪ್ರಶಸ್ತಿ&ಪುರಸ್ಕಾರಗಳು
೧೯೬೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೧ ರಲ್ಲಿ ಶೂನ್ಯ ಸಂಪಾದನೆಯ ಪರಾಮರ್ಶೆ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.
೧೯೯೦ ರಲ್ಲಿ ಪಂಪ ಪ್ರಶಸ್ತಿ ಲಭಿಸಿದೆ.
 

ಎಸ್.ಎಲ್. ಭೈರಪ್ಪ
ಎಸ್.ಎಲ್.ಭೈರಪ್ಪನವರು ೧೯೩೪ರ ಜುಲೈ ೨೬ ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಜನಿಸಿದರು. ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ ಇವರು ಪ್ರಾಥಮಿಕ ಅಭ್ಯಾಸವನ್ನು ಸಂತೇಶಿವರ ಹಾಗೂ ಹತ್ತಿರದ ಗ್ರಾಮಗಳಲ್ಲಿ ಪೂರೈಸಿದರು. ಮೈಸೂರಿಗೆ ಬಂದು ಶಾರದಾ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ನಂತರ ಮಹಾರಾಜ ಕಾಲೇಜಿನಿಂದ ೧೯೫೭ರಲ್ಲಿ ಬಿ.ಎ. (ಅನರ‍್ಸ್) ಪದವಿ ಗಳಿಸಿದರು. ೧೯೫೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ‍್ಯಾಂಕ್ ಗಳಿಸಿ ಎರಡು ಸುವರ್ಣ ಪದಕಗಳೊಂದಿಗೆ ಪಡೆದುಕೊಂಡರು. ಬರೋಡಾದ ಸಯ್ಯಾಜಿರಾವ್ ಮಹಾರಾಜ್ ವಿಶ್ವವಿದ್ಯಾಲಯದಿಂದ ಸತ್ಯ ಮತ್ತು ಸೌಂದರ್ಯ ಎಂಬ ಇಂಗ್ಲಿಷ್ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿಕೊಂಡರು. ಅನಂತರ ೧೯೫೮ ರಿಂದ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಶಾಸ್ತ್ರದ ಅಧ್ಯಾಪಕರಾಗಿದ್ದರು. ನಂತರ ೧೯೬೦ರಿಂದ ೧೯೬೬ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ೧೯೬೭ ರಿಂದ ೧೯೭೧ರವರೆಗೆ ದೆಹಲಿ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಇವರ ಕಾದಂಬರಿಗಳಲ್ಲಿ ವಂಶವೃಕ್ಷ, ಮತದಾನ, ತಬ್ಬಲಿಯು ನೀನಾದೆ ಮಗನೆ ಕನ್ನಡ ಚಲನಚಿತ್ರಗಳಾಗಿ ಪ್ರಶಸ್ತಿಗಳಿಸಿವೆ.

ಕೃತಿಗಳು
ಧರ್ಮಶ್ರೀ, ಧೂರ ಸರಿದರು, ಮತದಾನ, ವಂಶವೃಕ್ಷ, ಜಲಪಾತ, ನಾಯಿ ನೆರಳು, ಗ್ರಹಣ, ಸಾರ್ಥ, ಸಾಕ್ಷಿ, ತಬ್ಬಲಿಯು ನೀನಾದೆ ಮಗನೆ, ಗೃಹಭಂಗ, ಅಂಚು, ನಿರಾಕರಣ, ದಾಟು, ಅನ್ವೇಷಣೆ, ಪರ್ವ, ತಂತು, ಸಾಹಿತ್ಯ, ಮತ್ತು ಪ್ರತೀಕ ಕಥೆ ಮತ್ತು ಕಥಾವಸ್ತು, ಸತ್ಯ ಮತ್ತು ಸೌಂದರ್ಯ, ನೆಲೆ, ನಾನೇಕೆ ಬರೆಯುತ್ತೇನೆ. ಭಿತ್ತಿ, ಮಂದ್ರ, ಅವರಣ ಇವು ಇವರ

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಇವರಿಗೆ ಅಭಿನವ ಕಾಳಿದಾಸ ಎಂಬ ಬಿರುದು ಇತ್ತು.

ಮುದ್ದಣ
ಮುದ್ದಣರ ಮೂಲ ಹೆಸರು ನಂದಳಿಕೆ ಲಕ್ಷ್ಮೀನಾರಾಯಣಯ್ಯ. ಮುದ್ದಣ ಎಂಬುದು ಇವರ ಕಾವ್ಯನಾಮ. ಮುದ್ದಣನವರು ೧೮೭೦ರ ಜನವರಿ ೨೪ರಂದು ಕಾರ್ಕಳ ತಾಲ್ಲೂಕಿನ ನಂದಳಿಕೆ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಪಾಟಾಳಿ ತಿಮ್ಮಯ್ಯ, ತಾಯಿ ಮಹಾಲಕ್ಷ್ಮಮ್ಮ. ಪ್ರಾಥಮಿಕ ಶಿಕ್ಷಣವನ್ನು ನಂದಳಿಕೆಯಲ್ಲಿಯೇ ಪಡೆದರು. ಅನಂತರ ಟ್ರೈನಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಕಡು ಬಡತನದಿಂದಾಗಿ ಆಂಗ್ಲ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಅನಂತರ ವ್ಯಾಯಮ ಶಿಕ್ಷಣದ ತರಬೇತಿ ಪಡೆಯಲು ಮದರಾಸಿಗೆ ತೆರಳಿದರು. ವ್ಯಾಯಾಮ ಶಿಕ್ಷಣ ಪಡೆದು ೧೮೮೯ರ ಜೂನ್ ೧೫ ರಂದು ಉಡುಪಿಯ ಹೈಸ್ಕೂಲಿನಲ್ಲಿ ಅಂಗಸಾಧನೆಯ ಶಿಕ್ಷಕನಾಗಿ ನೇಮಕಗೊಂಡರು. ೧೮೯೨ರ ಮಾರ್ಚ್ ೨೬ ರಂದು ಉಡುಪಿಯಿಂದ ಕುಂದಾಪುರಕ್ಕೆ ವರ್ಗವಾಯಿತು. ೧೮೯೯ರಲ್ಲಿ ಕಮಲಾಬಾಯಿ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮುಂದೆ ಮುದ್ದಣನವರಿಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲೊಂದರಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ ದೊರೆಯಿತು. ಇವರಿಗೆ ಸಾಹಿತ್ಯದಲ್ಲಿ ಒಲವು ಬೆಳೆಯಲು ಮಳಲಿ ಸುಬ್ಬರಾಯರು ಕಾರಣರಾದರು. ಇವರಿಗೆ ಯಕ್ಷಗಾನದಲ್ಲೂ ಅಭಿರುಚಿಯಿತ್ತು. ಮುದ್ದಣನ ಪ್ರತಿಭೆಯು ರಾಮಾಶ್ವಮೇಧ ಗ್ರಂಥದಲ್ಲಿ ಸಂಪೂರ್ಣವಾಗಿ ಉಪಯುಕ್ತವಾಗಿದೆ. ರಾಮಾಶ್ವಮೇಧ ಕೃತಿಯಲ್ಲಿ ಮುದ್ದಣನು ಕನ್ನಡ ಸಾಹಿತ್ಯ ಗದ್ಯ ಪದ್ಯಗಳ ಬಗೆ ಸಹ ವಿವರಿಸಿದ್ದಾನೆ. ನವಿರಾದ ಹಾಸ್ಯ ಮತ್ತು ಉತ್ತಮ ನಿರೂಪಣೆ ಮುದ್ದಣನ ವಿಶೇಷತೆಗಳು. ಚಿಕ್ಕ ವಯಸ್ಸಿಗೆ ಕ್ಷಯ ರೋಗಕ್ಕೆ ತುತ್ತಾಗಿ, ಕಾಯಿಲೆ ಉಲ್ಬಣಗೊಂಡು ೧೯೦೧ ಫೆಬ್ರವರಿ ೧೫ ರಂದು ನಿಧನರಾದರು. ಚಿಕ್ಕ ವಯಸ್ಸಿನಲ್ಲೇ ನಿಧನರಾದ ಇವರನ್ನು ಇವರ ಕೃತಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಅಮರರನ್ನಾಗಿಸಿವೆ.

ಕೃತಿಗಳು:
ಅದ್ಭುತ ರಾಮಾಯಣಂ, ರತ್ನಾವತೀ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಕುಮಾರ ವಿಜಯ, ಕಾವ್ಯಮಂಜರಿ, ಶ್ರೀ ರಾಮಾಶ್ವಮೇಧಂ.
 

ದುರ್ಗಸಿಂಹ
ದುರ್ಗಸಿಂಹ ಗದಗ್ ಜಿಲ್ಲೆಯ ರೋಣ ತಾಲ್ಲೂಕಿನ ಸದರಿ ಗ್ರಾಮದವರು. ಸಕಲ ವಿದ್ಯಾಪಾರಂಗತನಾದ ದುರ್ಗಮಯ್ಯನೆಂಬ ಬ್ರಾಹ್ಮಣನ ಮೊಮ್ಮಗ, ಈಶ್ವರಾರ್ಯ ಈತನ ತಂದೆ. ತಾಯಿ ರೇಮಕಟ್ಟಿ. ಈತ ಬ್ರಾಹ್ಮಣ ಕವಿ, ಕುಲ ಗೌತಮಗೋತ್ರ, ದುರ್ಗಸಿಂಹನು ಚಾಲುಕ್ಯ ರಾಜ್ಯ ಜಗದೇಕಮಲ್ಲನ ಆಸ್ಥಾನದಲ್ಲಿ ಸಂಧಿ ವಿಗ್ರಹಿಯಾಗಿ ಕಾರ್ಯ ನಿರ್ವಹಿಸುತ್ತಿದ್ದನು. ಈತನ ಕೃತಿ ಪಂಚತಂತ್ರ. ವಸುಭಾಗಭಟ್ಟನ ಪಂಚತಂತ್ರವನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ದುರ್ಗಸಿಂಹನ ಪಂಚತಂತ್ರ ಚಂಪೂ ರೂಪದಲ್ಲಿದೆ. ಪಂಚತಂತ್ರವು ಐದು ಅಧಿಕಾರಾಗಗಳಿಂದ ಕೂಡಿದ್ದು ಇಲ್ಲಿ ಒಂದೊಂದು ತನ್ನದೇ ಆದ ನೀತಿ ಬೋಧನೆಗಳನ್ನು ಹೊಂದಿದೆ. ಇದರಲ್ಲಿ ಮೊಲವು ಸಿಂಹವನ್ನು ಕೊಂದ ಕಥೆ, ಶಿವಭೂತಿಯ ಕಥೆ ಮೊದಲಾದವು ವಿಶಿಷ್ಟವಾಗಿವೆ.
 

   ಮುಂದಿನಪುಟಕ್ಕೆ