ಕನ್ನಡ ಕವಿಗಳ ಮಾಹಿತಿ                                                                                                                                                                             ಮುಂದಿನಪುಟಕ್ಕೆ 

ಟಿ.ಪಿ.ಕೈಲಾಸಂ.
ಟಿ.ಪಿ.ಕೈಲಾಸಂ ಅವರು ೧೮೮೪ರ ಜುಲೈ ೨೯ ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ತ್ಯಾಗರಾಜ ಪರಮಶಿವ ಅಯ್ಯಂಗಾರ್, ಬೆಂಗಳೂರಿನಲ್ಲಿ ಮುನ್ಸಿಫರಾಗಿ ಜೀವನ ಆರಂಭಿಸಿ ಶ್ರೇಷ್ಠ ನ್ಯಾಯಾಧೀಶರಾಗಿ ನಿವೃತ್ತರಾದರು. ಕೈಲಾಸಂ ಅವರ ಬಾಲ್ಯದ ವಿದ್ಯಾಭ್ಯಾಸ ಬೆಂಗಳೂರು, ಮೈಸೂರು, ಹಾಸನದಲ್ಲಿ ಜರುಗಿತು. ಸರ್.ಪಿ.ಎಸ್.ಶಿವಸ್ವಾಮಿ ಅಯ್ಯರ್ ಅವರ ಹಿಂದೂ ಹೈಸ್ಕೂಲಿನಲ್ಲಿ ಇವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಭೂವಿಜ್ಞಾನದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ. ಪದವಿ ಪಡೆದ ನಂತರ ಎಂ.ಎ. ಎರಡು ವರ್ಷ ವ್ಯಾಸಂಗ ನಡೆಸಿದರು. ಅನಂತರ ಮೈಸೂರು ಸಕಾರದ ಮಾಸಿಕ ವಿದ್ಯಾರ್ಥಿವೇತನ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಶಾಸ್ತ್ರಾಧ್ಯಯನ ಮಾಡಿ ಮೊದಲ ದರ್ಜೆಯ ಪ್ರಶಸ್ತಿ ಗಳಿಸಿದರು. ಅಲ್ಲಿಯೇ ಜಿಯಾಲಜಿಕಲ್ ಸೊಸೈಟಿಗೆ ಬಂದು ನಿಬಂಧ ಬರೆದುಕೊಟ್ಟು ಅಲ್ಲಿಯೇ ಫೆಲೋ ಆದರು. ಆ ಫೆಲೋಷಿಪ್ ಪಡೆದ ಮೊದಲ ಭಾರತೀಯರು ಇವರು. ವಿಜ್ಞಾನ ಹಾಗೂ ಕ್ರೀಡಾಶಾಸ್ತ್ರದಲ್ಲಿ ಪಾಂಡಿತ್ಯ ಸಂಪಾದಿಸಿದ್ದರಲ್ಲದೆ ನಾಟಕಾಭಿನಯ ಶಾಸ್ತ್ರದಲ್ಲೂ ಪಾರಂಗತರಾಗಿದ್ದರು. ಮೈಸೂರಿನ ಭೂಗರ್ಭ ಶಾಲೆಯಲ್ಲಿ ಪ್ರೊಬೇಷನರಿ ನೌಕರಿ ಹಿಡಿದರು. ಕೋಲಾರ, ಹಾಸನ, ಶಿವಮೊಗ್ಗ, ಭದ್ರಾವತಿ, ಲಕ್ಕವಳ್ಳಿ, ತರೀಕೇರಿ, ಎಡೇಹಳ್ಳಿಗಳಲ್ಲಿ ಕಾರ್ಯನಿರ್ವಹಿಸಿದರು. ಕನ್ನಡದ ಆಡುಭಾಷೆಯನ್ನು ಬಳಸಿ ನಾಟಕ ರಚಿಸಿದವರಲ್ಲಿ ಕೈಲಾಸಂ ಅಗ್ರಗಣ್ಯರು. ಪಾಶ್ಚಿಮಾತ್ಯ ನಾಟಕಗಳ ನೂತನ ಆಯಾಮಗಳನ್ನು ಕನ್ನಡಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಟಕ ಪ್ರಪಂಚದಲ್ಲಿ ಹೊಸ ಹಾದಿ ಹಾಕಿಕೊಟ್ಟ ಹಿರಿತನ ಕೈಲಾಸಂ ಅವರದು. ೧೯೪೬ರಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಕೃತಿಗಳು
ಹೋಂರೂಲು, ಬಹಿಷ್ಕಾರ, ನಮ್ ಕಂಪ್ನಿ, ಟೊಳ್ಳುಗಟ್ಟಿ, ಪೋಲಿ ಕಿಟ್ಟಿ, ಸೂಳೆ, ತಾಳಿಕಟ್ಟೊ ಕೂಲಿನೇ, ಸತ್ತವನ ಸಂತಪ, ನಮ್ ಬ್ರಾಹ್ಮಣ್ಕೆ, ಅಮ್ಮಾವ್ರ ಗಂಡ, ಅನುಕೂಲಕ್ಕೊಬ್ಬಣ್ಣ, ಸೀಕರ್ಣಿ ಸಾವಿತ್ರಿ, ತಾವರಕೆರೆ, ವೈದ್ಯನ ವ್ಯಾಧಿ, ಗಂಡಸ್ಕತ್ರಿ, ನಮ್‌ಕ್ಳಬ್ಬು, ಬಂಡ್ವಾಳಿಲ್ಲದ ಬಡಾಯಿ, ದಿ ಫುಲ್ ಫಿಲ್‌ಮೆಂಟ್, ದಿಪರ್ಪಸ್ ಏಕಲವ್ಯ, ದಿಕರ್ಸ್ ದಿಬರ್ಡನ್ ಮುಂತಾದವು.
ಕೈಲಾಸಂ ಬದುಕು ಬರಹ ಹಾಗೂ ಕೈಲಾಸಂ ದರ್ಶನ ಇವರ ಅಭಿನಂದನಾ ಗ್ರಂಥಗಳು.

ಗೌರವ, ಪ್ರಶಸ್ತಿ- ಪುರಸ್ಕಾರಗಳು
೧೯೪೫ ರಲ್ಲಿ ಮದ್ರಾಸ್ (ಈಗಿನ ಚೆನ್ನೈ) ನಲ್ಲಿ ನಡೆದ ೨೯ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರಿಗೆ ವಹಿಸಿ ಗೌರವ ಸಲ್ಲಿಸಿತು.
 

ಕುವೆಂಪು
ಕುವೆಂಪು ಕಾವ್ಯನಾಮದಿಂದ ಖ್ಯಾತರಾದ ಕೆ. ವಿ.ಪುಟ್ಟಪ್ಪನವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರಿಕೊಡಿಗೆ (ತನ್ನ ತಾಯಿಯ ಮನೆ)ಯಲ್ಲಿ ೧೯೦೪ ಡಿಸೆಂಬರ್ ೨೯ ರಂದು ಜನಿಸಿದರು. ತಂದೆ ವೆಂಕಟಪ್ಪಗೌಡ, ತಾಯಿ ಸೀತಮ್ಮ. ತೀರ್ಥಹಳ್ಳಿಯಲ್ಲಿ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಪುಟ್ಟಪ್ಪನವರು ೧೯೧೮ರಲ್ಲಿ ಮೈಸೂರಿಗೆ ಬಂದು ವೆಸ್ಲಿಯನ್ ಹೈಸ್ಕೂಲಿಗೆ ಸೇರಿದರು. ಈ ಸಂದರ್ಭದಲ್ಲಿ ಒಳ್ಳೆಯ ದೊಡ್ಡ ಗ್ರಂಥಾಲಯಗಳು ಇವರ ಜ್ಞಾನಾರ್ಜನೆಗೆ ಸಹಾಯಕವಾದವು. ಇವರಿಗೆ ಇಲ್ಲಿಯ ವಾತಾವರಣ ವ್ಯಾಪಕವಾದರಿಂದ ಸಾಹಿತ್ಯಾಸಕ್ತಿ ಬೆಳೆಯುವಂತೆ ಮಾಡಿತು. ವರ್ಡ್ಸ್‌ವರ್ತ್ ಷೆಲ್ಲಿ, ಟಾಲ್‌ಸ್ಟಾಯ್, ಕೃತಿಗಳನ್ನು ಇವರು ಅಭ್ಯಸಿಸಿದರು ಮಿಲ್ಟನ್ ಕವಿಯ ಪ್ಯಾರಡೈಸ್ ಲಾಸ್ಟ್ ಕೃತಿಯು ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಂಕರಾಚಾಯ್ ಕೃತಿಗಳು ಇವರ ಮೇಲೆ ಪ್ರಭಾವವನ್ನು ಬೀರಿದವು. ಮಹಾತ್ಮ ಗಾಂಧೀಜಿಯವರು ಪ್ರಭಾವಕ್ಕೊಳಗಾಗಿ ಸ್ವದೇಶಿ ವಸ್ತ್ರಗಳನ್ನು ಧರಿಸತೊಡಗಿದರು. ೧೯೨೭ರಲ್ಲಿ ಬಿ.ಎ. ಪದವಿ ಹಾಗೂ ೧೯೨೯ರಲ್ಲಿ ಎಂ.ಎ. ಪದವಿಗಳನ್ನು ಪಡೆದುಕೊಂಡರು. ೧೯೨೮ರಲ್ಲಿ ಇವರು ಸೆಂಟ್ರಲ್ ಕಾಲೇಜಿನಲ್ಲಿ ಜರುಗಿದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷರಾದರು. ತಾವೂ ಓದಿದ ಮೈಸೂರು ಮಹಾರಾಜ ಕಾಲೇಜಿನಲ್ಲಿ ೧೯೨೯ ರಿಂದ ಕನ್ನಡ ಅಧ್ಯಾಪಕ ವೃತ್ತಿ ಆರಂಭಿಸಿದರು. ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಸಹಸ್ರಾರು ವಿದ್ಯಾರ್ಥಿಗಳ ಜ್ಞಾನದಾಹವನ್ನು ತಣಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ೧೯೫೫ ರಲ್ಲಿ ಇಲ್ಲಿಯೇ ಪ್ರಾಂಶುಪಾಲರಾದರು. ತದನಂತರ ೧೯೫೬ ರಿಂದ ೧೯೬೦ ರವರೆಗೆ ಮೈಸುರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕಾರ್ಯ ನಿರ್ವಹಿಸಿದರು.
ಕುವೆಂಪುರವರ ಸಾಹಿತ್ಯ ಕ್ಷೇತ್ರವು ವಿಶಾಲವಾದದ್ದು, ಕಾವ್ಯ ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಮಹಾಕಾವ್ಯ ಮೊದಲಾದ ಕ್ಷೇತ್ರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರು ಕುಲಪತಿಗಳಾಗಿದ್ದಾಗ ಹುಟ್ಟುಹಾಕಿದ ಮಾನಸ ಗಂಗೋತ್ರಿಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಕುವೆಂಪುರವರು ನಾಡುನುಡಿಗಳ ಅಭಿವೃದ್ಧಿಗಾಗಿ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಬಹುವಾಗಿ ಶ್ರಮಿಸಿದರು.
ಇವರು ೧೯೩೭ರಲ್ಲಿ ಹೇಮಾವತಮ್ಮ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರಿಗೆ ನಾಲ್ಕು ಜನ ಮಕ್ಕಳು. ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಇವರ ಮಗ, ಮತ್ತೊಬ್ಬರು ಕುಕಿಲೋದಯ ಚಂದ್ರ, ಇಂದುಕಲಾ, ತಾರಿಣಿ, ಇವರ ಇಬ್ಬರು ಹೆಣ್ಣು ಮಕ್ಕಳು.
ನೆನಪಿನ ದೋಣಿಯಲ್ಲಿ ಇವರ ಆತ್ಮಕಥನ, ಕುವೆಂಪು ಕುರಿತಂತೆ, ತೇಜಸ್ವಿಯವರು ಅಣ್ಣನ ನೆನಪು ಕೃತಿ ರಚಿಸಿದ್ದಾರೆ. ಮಗಳು ಕಂಡ ಕುವೆಂಪು ಮಗಳು ತಾರಿಣಿ ರಚಿಸಿರುವ ಕೃತಿ. ಇವರನ್ನು ಕುರಿತಂತೆ ಅನೇಕ ಕವಿಗಳು ಇವರ ಜೀವನವನ್ನು ಹಾಗೂ ಕೃತಿ ವಿಮರ್ಶೆಯನ್ನು ಮಾಡಿದ್ದಾರೆ. ಇವರು ೧೯೯೪ ನವೆಂಬರ್ ೯ ರಂದು ನಿಧನರಾದರು.

ಕೃತಿಗಳು
ಬಿಗಿನರ‍್ಸ್ ಮ್ಯೂಸ್, ಶ್ರೀರಾಮಾಯಣ ದರ್ಶನಂ, ಚಿತ್ರಾಂಗದ, ಕೊಳಲು, ನವಿಲು, ಕಲಾಸುಂದರಿ, ಕನ್ನಡ ಡಿಂಡಿಮ, ಚಂದ್ರಮಂಚಕೆ ಬಾ ಚಕೋರಿ, ಸಮುದ್ರಲಂಘನ, ಜೇನಾಗುವಾ, ಅಗ್ನಿಹಂಸ, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಪಕ್ಷಿಕಾಶಿ, ಅಮಲನ ಕತೆ, ಪಾಂಚಜನ್ಯ, ಕೃತ್ತಿಕೆ ಕದರಡಕೆ, ಷೋಡಶಿ, ಅನುತ್ತರಾ, ಅನಿಕೇತನ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ನನ್ನ ದೇವರು ಮತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕತೆಗಳು, ಬಿರುಗಾಳಿ, ರಕ್ತಾಕ್ಷಿ, ಬೆರಳ್‌ಗೆ ಕೊರಳ್, ಹಾಳೂರು, ಕಥನಕವನಗಳು, ಕುಟೀಚಕ ಕಿಂಕಿಣಿ, ಪ್ರೇತಕ್ಯು. ಮಂತ್ರಾಕ್ಷತೆ,ಮೇಘಪುರ, ನರಿಗಳಿಗೇಕೆ ಕೋಡಿಲ್ಲ, ಜನಪ್ರಿಯ ವಾಲ್ಮಿಕಿ ರಾಮಾಯಣ, ಬೊಮ್ಮನಹಳ್ಳಿಯ ಕಿಂದರಿಜೋಗಿ, ಗುರುವಿನೊಡನೆ ದೇವರಡಿಗೆ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೫೫ರಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೭ರಲ್ಲಿ ಧಾರವಾಡದಲ್ಲಿ ಜರುಗಿದ ೩೯ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೫೮ರಲ್ಲಿ ಭಾರತ ಸರ್ಕಾರ ಪ್ರದ್ಮಭೂಷಣ ಹಾಗೂ ೧೯೯೧ ರಲ್ಲಿ ಪದ್ಮವಿಭೂಷಣ ಪ್ರಶಸ್ತಿ;
೧೯೬೮ ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ;
೧೯೯೨ ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ
೧೯೯೪ ರಲ್ಲಿ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಲಭಿಸಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವವನ್ನು ಹೊಂದಿದ್ದರು.

ಕೀರ್ತಿನಾಥ ಕುರ್ತಕೋಟಿ
ಕೀರ್ತಿನಾಥ ಕುರ್ತಕೋಟಿಯವರು ೧೯೨೮ರ ಅಕ್ಟೋಬರ್ ೧೩ ರಂದು ಗದಗದ ಹತ್ತಿರದ ಕುರ್ತಕೋಟಿಯಲ್ಲಿ ಜನಿಸಿದರು. ಕನಸಿಗ ಇವರ ಕಾವ್ಯನಾಮ ತಂದೆ ಡಿ.ಕೆ. ಕುರ್ತಕೋಟಿ, ತಾಯಿ ಪದ್ಮಾವತಿಬಾಯಿ ಇವರದು ವಿದ್ವತ್ ಪರಂಪರೆಯ ಕುಟುಂಬ. ಇವರು ಗದುಗಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದರು. ಧಾರವಾಡದ ಕೆ.ಇ. ಬೋರ್ಡ್ ಮತ್ತು ಕರ್ನಾಟಕ ಕಾಲೇಜ್‌ನಲ್ಲಿ ಬಿ.ಎ. ಪದವಿ ಮತ್ತು ಎಂ.ಎ. (ಇಂಗ್ಲಿಷ್) ಪದವಿ ಪಡೆದರು. ೧೯೫೦ ರಿಂದ ಮೂರು ವರ್ಷಗಳ ಕಾಲ ಗದಗಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ದುಡಿದರು. ೧೯೫೮ ರಿಂದ ಪುಣೆಯ ಪರಶುರಾಮ ಬಾವು ಕಾಲೇಜಿನಲ್ಲಿ ಅಧ್ಯಾಪಕರಾಗಿ, ಅನಂತರ ಗುಜರಾತ್‌ನ ಆನಂದದಲ್ಲಿ, ಸರದಾರ್ ವಲ್ಲಭಬಾಯಿ ಪಟೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಶೈಕ್ಷಣಿಕ ಸೇವೆ ಸಲ್ಲಿಸಿ ನಿವೃತ್ತರಾದರು. ಧಾರವಾಡದ ಸಾಹಿತ್ಯಿಕ ಪರಿಸರ ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ದ.ರಾ.ಬೇಂದ್ರೆ, ಗೋಕಾಕ, ಆನಂದಕಂದ, ರಂ.ಶ್ರೀ. ಮುಗುಳಿ ಮೊದಲಾದ ಗಣ್ಯರ ಸಹವಾಸ ದೊರೆತು ಸಾಹಿತ್ಯದ ಕಡೆ ಆಕರ್ಷಿತರಾದರು. ಇವರಿಗೆ ಕನ್ನಡ, ಇಂಗ್ಲಿಷ್, ಮರಾಠಿ, ಸಂಸ್ಕೃತ, ಗುಜರಾತಿ, ಹಿಂದಿ ಮೊದಲಾದ ಭಾರತೀಯ ಸಾಹಿತ್ಯದ ಆಳವಾದ ಅಧ್ಯಯನದಿಂದ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ಆಯಾಮ ನೀಡಿದರು. ಇವರು ಅಂಕಣ ಸಾಹಿತ್ಯದಲ್ಲೂ ಎತ್ತಿದ ಕೈ. ಇವರು ಪ್ರಜಾವಾಣಿಯಲ್ಲಿ ಸಮ್ಮುಖ ಅಂಕಣ ಲೇಖನಗಳು ವಿಶಿಷ್ಟವಾಗಿವೆ. ಕನ್ನಡ, ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಮುನ್ನರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರು ೨೦೦೩ ಆಗಸ್ಟ್ ೩೧ ರಂದು ಧಾರವಾಡದಲ್ಲಿ ನಿಧನರಾದರು.

ಕೃತಿಗಳು
ಆಮೆನಿ, ಚಂದ್ರಗುಪ್ತ, ಗಾನಕೇಳಿ, ಯಶೋಧರ ಚರಿತ್ರೆಯ ಕಾವ್ಯತಂತ್ರ, ಯುಗಧರ್ಮ ಹಾಗೂ ಸಾಹಿತ್ಯ ದರ್ಶನ, ಭೃಂಗದ ಬೆನ್ನೇರಿ, ನವ್ಯಕಾವ್ಯ ಪ್ರಯೋಗ, ಸಂಸ್ಕೃತಿ ಸ್ಪಂದನ, ಜನ್ನನ ಕಾವ್ಯತಂತ್ರ, ವಾಸುದೇವ ಪ್ರಶಸ್ತಿ, ಸ್ವಪ್ನದರ್ಶಿ, ವಿಮರ್ಶೆಯ ವಿನಯ ಕಾದಂಬರಿ, ವಿಮರ್ಶೆಯ ವಿನಯ ನಾಟಕ, ಉರಿಯ ನಾಲಗೆ, ದ.ರಾ.ಬೇಂದ್ರೆ, ಬಾರೋ ಸಾದನ ಕೇರಿಗೆ, ನೂರು ಮರ ನೂರು ಸ್ವರ, ಬಯಲು ಆಲಯ, ಪ್ರತ್ಯಬಿಜ್ಞಾನ, ಶ್ರಾವಣ ಪ್ರತಿಭೆ, ಕುಮಾರವ್ಯಾಸ, ಸಂಸ್ಕೃತಿ ಸ್ಪಂದನ, ಕನ್ನಡ ಸಾಹಿತ್ಯ ಸಂಗಾತಿ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೯೩ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
೧೯೯೫ ರಲ್ಲಿ ಉರಿಯ ನಾಲಿಗೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಸ್ವಪ್ನದರ್ಶಿ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಆಮನಿ ಕೃತಿಗೆ ರಾಜ್ಯ ಸರ್ಕಾರದ ಬಹುಮಾನ ಲಭಿಸಿದೆ. ಆಮನಿ ಮತ್ತು ಸ್ವಪ್ನದರ್ಶಿ ಕೃತಿಗಳಿಗೆ ಮುಂಬಯಿ ಸರ್ಕಾರದ ಬಹುಮಾನಗಳು ದೊರೆತಿವೆ.
ಕನ್ನಡದ ಕೀರ್ತಿ ಎಂಬ ಅಭಿನಂದನಾ ಗ್ರಂಥವನ್ನು ಅಭಿಮಾನಿಗಳು ಇವರಿಗೆ ಅರ್ಪಿಸಿದ್ದಾರೆ.
 

ಅ.ನ.ಕೃಷ್ಣರಾಯ
ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಇವರ ಪೂರ್ಣ ಹೆಸರು. ೧೯೦೮ ಮೇ ೯ ರಂದು ಕೋಲಾರದಲ್ಲಿ ಜನಿಸಿದರು. ತಂದೆ ನರಸಿಂಹರಾಯ, ತಾಯಿ ಅನ್ನಪೂರ್ಣಮ್ಮ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ ಬೆಂಗಳೂರಿಗೆ ಬಂದ ಅ.ನ.ಕೃರವರು ದೇಶಿಯ ವಿದ್ಯಾಶಾಲೆಗೆ ಸೇರಿದರು. ಇವರು ಶಾಲೆಯ ಓದಿಗೆ ಗಮನ ಕೊಡಲಿಲ್ಲವಾದ್ದರಿಂದ ಓದು ಅರ್ಧಕ್ಕೆ ನಿಂತಿತು. ೧೯೨೯ ರಲ್ಲಿ ಕಥಾಂಜಲಿ ಎಂಬ ಮಾಸಪತ್ರಿಕೆ ಆರಂಭಿಸಿದರು. ೧೯೩೫ರಲ್ಲಿ ಕೆಲವು ಕಾಲ ಬಾಂಬೆ ಕ್ರಾನಿಕಲ್ನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದರು. ಕೃಷ್ಣರಾಯರು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿಯ ಪ್ರವರ್ತಕರು. ಕನ್ನಡ ನಾಡಿನ ಏಕೀಕರಣಕ್ಕಾಗಿ ಏಕೀಕೃತ ನಾಡಿನ ಸರ್ವಾಂಗೀಣ ಪ್ರಗತಿಗಾಗಿ ಇವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಕನ್ನಡದ ಬಗ್ಗೆ ಅಪಸ್ವರ ಬಂದಾಗ ಅ.ನ.ಕೃರವರು ಗರ್ಜಿಸುತ್ತಿದ್ದರು. ಕೃಷ್ಣರಾಯರು ಪತ್ರಿಕೋದ್ಯಮ ಹಾಗೂ ಚಲನಚಿತ್ರೋದ್ಯಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕೆಲವು ಕನ್ನಡ ಚಲನಚಿತ್ರಗಳ ನಿರ್ಮಾಣಗಳೊಂದಿಗೆ ಇವರ ಸಂಪರ್ಕವಿತ್ತು. ಇವರು ಬಹುಮುಖ ಸಾಹಿತ್ಯಕಾರರು. ಆದರೂ ಇವರು ಕಾದಂಬರಿಕಾರರೆಂದೇ ಗುರುತಿಸಲ್ಪಟ್ಟಿದ್ದಾರೆ. ಸುಮಾರು ೨೦೦ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ. ಅವುಗಳಲ್ಲಿ ೧೧೨ ಕಾದಂಬರಿಗಳು. ಅದರಿಂದ ಇವರನ್ನು ಕಾದಂಬರಿ ಸಾರ್ವಭೌಮ ಎಂದೇ ಕರೆಯುತ್ತಾರೆ. ಇವರು ೧೯೭೧ರ ಜುಲೈ ೮ ರಂದು ನಿಧನರಾದರು.

ಕೃತಿಗಳು.
ಶನಿ ಸಂತಾನ, ನಗ್ನ ಸತ್ಯ, ಸಂಜೆಗತ್ತಲು, ಮದುವೆಯೋ ಮನೆಹಾಳೋ, ಜೀವನ ಯಾತ್ರೆ, ಗೃಹಲಕ್ಷ್ಮೀ, ಕನ್ನಡಮ್ಮನ ಗುಡಿಯಲ್ಲಿ, ಕನ್ನಡ ಕುಲ ರಸಿಕರು, ದೀಪರಾಧನೆ, ನಟ ಸಾರ್ವಭೌಮ, ತಾಯಿ ಮಕ್ಕಳು, ಅನುಗ್ರಹ, ಆರ್ಶಿರ್ವಾದ, ಹೆಂಗರುಳು, ಮುಯ್ಯಿಗೆ ಮುಯ್ಯಿ, ಉದಯರಾಗ, ಸಂಧ್ಯಾರಾಗ, ಧರ್ಮಪತ್ನಿ, ಮುಡಿ ಮಲ್ಲಿಗೆ, ಕಣ್ಣುಮುಚ್ಚಾಲೆ, ಪುನರಾವತಾರ, ಪಶ್ಚಾತಾಪ, ಕನ್ನಡದ ದಾರಿ, ಬರಹಗಾರನ ಬದುಕು, ಪಾಪಪುಣ್ಯ, ಮಿಂಚು, ಕಿಡಿ, ಅಖಂಡ ಕರ್ನಾಟಕ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಗಾಂಧಿ, ವಿವೇಕಾನಂದ, ಬಸವೇಶ್ವರ, ಕಬೀರ, ಕರ್ನಾಟಕ ಹಿತಚಿಂತನೆ, ಬಸವಣ್ಣನ ಅಮೃತವಾಣಿ, ಭಾರತದ ಕಥೆ, ಗಾರ್ಕಿಯ ಕತೆಗಳು, ರುಕ್ಮಿಣಿ, ಕಿತ್ತೂರು ಚೆನ್ನಮ್ಮ, ಕರ್ನಾಟಕದ ಕಲಾವಿದರು, ಕೈಲಾಸಂ, ನನ್ನನ್ನು ನಾನೇ ಕಂಡೆ, ಬೆಂಗಳೂರು ಕೆಂಪೇಗೌಡ, ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ, ಸಂಸ್ಕೃತಿಯ ವಿಶ್ವರೂಪ, ಸಂಗ್ರಾಮ ಧುರೀಣ, ಯಲಹಂಕ ಭೂಪಾಲ, ವಿಜಯವಿದ್ಯಾರಣ್ಯ, ಪುಣ್ಯಪ್ರಭಾಗ, ಆಹುತಿ, ಬಣ್ಣದ ಬೀಸಣಿಗೆ, ಮಂಗಳಸೂತ್ರ, ಕಣ್ಣೀರು, ತಾಯಿಯ ಕರುಳು, ಚಿತ್ರವಿಚಿತ್ರ, ಯಶೋದುಂದುಭಿ ಮುಂತಾಗಿ ೨೦೦ ಕ್ಕೂ ಹೆಚ್ಚು ಕೃತಿಗಳ ನಿರ್ಮಾತೃಗಳು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೦ ರಲ್ಲಿ ಮಣಿಪಾಲದಲ್ಲಿ ನಡೆದ ೪೨ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೭೦ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು;
೧೯೭೦ ರಲ್ಲಿ ಮೈಸೂರು ವಿ.ವಿ. ಇವರಿಗೆ ಗೌರವ ಡಿ.ಲಿಟ್ ನೀಡಿ ಗೌರವಿಸಿತು.
೧೯೭೦ ರಲ್ಲಿ ಗೋವಾ ಕನ್ನಡ ಸಂಘವು ಇವರಿಗೆ ರಸಚೇತನ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿತು.
 

ಎ.ಆರ್.ಕೃಷ್ಣಶಾಸ್ತ್ರಿ
ಎ.ಆರ್.ಕೃಷ್ಣಶಾಸ್ತ್ರಿಯವರು ೧೮೯೦ರ ಫೆಬ್ರವರಿ ೧೨ ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಕರಣಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅದರಿಮದ ಕೃಷ್ಣಶಾಸ್ತ್ರಿಯವರಿಗೆ ಸಂಸ್ಕೃತ ಸಾಹಿತ್ಯ ಪ್ರವೇಶಕ್ಕೆ ಅನುಕೂಲವಾಯಿತು. ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್, ಕನ್ನಡ ಹಾಗೂ ಸಂಸ್ಕೃತ ಭಾಷೆಗಳನ್ನು ಐಚ್ಚಿಕ ವಿಷಯಗಳನ್ನಾಗಿ ಆಯ್ದುಕೊಂಡು ೧೯೧೩ರಲ್ಲಿ ಬಿ.ಎ. ಪದವಿ ಗಳಿಸಿದರು. ಇಲ್ಲಿ ಇವರಿಗೆ ವಿದ್ವಾಂಸರಾದ ಬಿ.ಎಂ. ಶ್ರೀಕಂಠಯ್ಯನವರು ಹಾಗೂ ಎಂ. ಹಿರಿಯಣ್ಣನವರು ಪ್ರಾಧ್ಯಾಪಕರಾಗಿದ್ದರು. ೧೯೧೫ ರಲ್ಲಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ಎಂ.ಎ. ಪದವಿ ಗಳಿಸಿದರು. ೧೯೧೬ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಟ್ಯೂಟರ್ ಆಗಿ ನೇಮಕವಾಗಿ ಅಧ್ಯಾಪಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಹಲವು ಕಾಲ ಓರಿಯಂಟಲ್ ಗ್ರಂಥಾಲಯದಲ್ಲಿ ಕೆಲಸ ಮಾಡಿ ಮತ್ತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ, ೧೯೩೯ ರಿಂದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯವರೆಗೆ ಸೇವೆ ಸಲ್ಲಿಸಿದರು. ಕನ್ನಡ ಬೋಧಕರಾಗಿ ಹೊಸ ಪೀಳಿಗೆ ಸೃಷ್ಟಿ ಮಾಡಿದರಲ್ಲದೆ ಕನ್ನಡದ ಅಭಿವೃದ್ಧಿಗಾಗಿ ಹಲವು ಸಂಘ ಸಂಸ್ಥೆಗಳ ಸದಸ್ಯರಾಗಿ ದುಡಿದರು. ೧೯೪೨ ರಿಂದ ೪೬ ರವರೆಗೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಗ್ರಂಥಮಾಲೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆಯ ಸಂಪಾದಕರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆಯ ಇಂಗ್ಲಿಷ್ ಕನ್ನಡ ನಿಘಂಟಿನ ರಚನಾ ಸಮಿತಿಯ ಸದಸ್ಯರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ, ಕನ್ನಡ ನಿಘಂಟಿನ ಪ್ರಥಮ ಸಂಪಾದಕರಾಗಿದ್ದರು. ಇವರು ಹೊಸಗನ್ನಡದ ಅಶ್ವಿನೀ ದೇವತೆಗಳಲ್ಲಿ ಒಬ್ಬರೆಂದು ಪ್ರಸಿದ್ದರು. ಸಂಸ್ಕೃತ, ಕನ್ನಡ, ಇಂಗ್ಲಿಷ್, ಬಂಗಾಲಿ ಬಾಷೆಗಳ ಪಾಂಡಿತ್ಯವನ್ನೊಂದಿದ್ದರು. ಇವರು ೧೯೬೮ ಫೆಬ್ರುವರಿ ೧ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು.

ಕೃತಿಗಳು.
ಹರಿಶ್ಚಂದ್ರ ಕಾವ್ಯ ಸಂಗ್ರಹ, ನಾಗ ಮಹಾಶಯ, ಸಂಸ್ಕೃತ ನಾಟಕ, ಸರ್ವಜ್ಞ ಕವಿ, ಭಾಷಣಗಳು ಮತ್ತು ಲೇಖನಗಳು, ಶ್ರೀಪತಿಯ ಕತೆಗಳು, ಕವಿ ಜಿಹ್ವಾಬಂಧನ, ನಿರ್ಮಲ ಭಾರತೀ, ಬಂಕಿಮಚಂದ್ರ, ನಿಬಂಧಮಾಲಾ,ಲ ನಯಸೇನನ ಧರ್ಮಾಮೃತ, ಸ್ವಾಮಿ ಶಿಷ್ಯ ಸಂವಾದ, ಶ್ರೀ ರಾಮಕೃಷ್ಣ ಪರಮಹಂಸರ ಜೀವನಚರಿತ್ರೆ, ಕನ್ನಡ ಕೈಪಿಡಿ ಭಾಗ ೧ ರ ಕಾವ್ಯ ಲಕ್ಷಣ, ವಚನ ಭಾರತ, ಕಥಾಮೃತ, ಭಾಸಕವಿ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೧ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೫೬ ರಲ್ಲಿ ಅಭಿವಂದನೆ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿ ಗೌರವಿಸಿತು.
೧೯೬೦ ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಿ.ಲಿಟ್ ನೀಡಿ ಗೌರವಿಸಿತು.
೧೯೬೧ ರಲ್ಲಿ ಬಂಕಿಮಚಂದ್ರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು.
 

ಕಡೆಂಗೊಡ್ಲು ಶಂಕರಭಟ್ಟ
ಕಡೆಂಗೊಡ್ಲು ಶಂಕರಭಟ್ಟರು ೧೯೦೪ರ ಆಗಸ್ಟ್ ೯ ರಂದು ಮಂಗಳೂರಿನ ಪೆರುವಾಯಿಯಲ್ಲಿ ಜನಿಸಿದರು. ತಂದೆ ಈಶ್ವರಭಟ್ಟ ತಾಯಿ ಗೌರಮ್ಮ, ಪೆರುವಾಯಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮಂಗಲೂರಿನ ಕೆನರಾ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅಸಹಕಾರ ಚಳುವಳಿಯ ಪ್ರಭಾವಕ್ಕೊಳಗಾದರು. ಮಧ್ಯದಲ್ಲಿ ವ್ಯಾಸಂಗ ಕೈಬಿಟ್ಟರು. ಮಂಗಳೂರಿನ ತಿಲಕ ವಿದ್ಯಾಲಯದಲ್ಲಿ ಕೆಲಕಾಲ ಉಪಧ್ಯಾಯರಾಗಿದ್ದರು. ಇದೇ ಸಂದರ್ಭದಲ್ಲಿ ಖಾಸಗಿಯಾಗಿ ವ್ಯಾಸಂಗ ಮಾಡಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು. ೧೯೨೭ ರಿಂದ ೧೯೬೪ ರವರೆಗೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜಿನ ಕನ್ನಡ ಅಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು ನವಯುಗ ಪತ್ರಿಕೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು. ೧೯೨೮-೧೯೫೩ರ ಅವಧಿಯಲ್ಲಿ ಮಂಗಳೂರಿನ ರಾಷ್ಟ್ರಬಂದು ಪತ್ರಿಕೆಯ ಸಂಪಾದಕರಾಗಿದ್ದರು. ಹಲವು ಕಾಲ ರಾಷ್ಟ್ರಮತ ಪತ್ರಿಕೆಯ ಸಂಪಾದಕರಾಗಿ ದುಡಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶಂಕರಭಟ್ಟರ ಸೇವೆ ಗಮನಾರ್ಹವಾದದ್ದು. ಶಂಕರಭಟ್ಟರಿಗೆ ಕನ್ನಡ ಇಂಗ್ಲಿಷ್ ಸಂಸ್ಕೃತ ಭಾಷೆಗಳ ಮೇಲೂ ಒಳ್ಳೆಯ ಹಿಡಿತವಿತ್ತು. ಇವರು ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದರು. ೧೯೨೭ರ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆ ಪಂಚಕಜ್ಜಾಯ ತರುವಲ್ಲಿ ಅಪಾರ ಪರಿಶ್ರಮವಹಿಸಿದ್ದರು. ಇವರು ೧೯೬೮ರ ಮೇ ೧೭ ರಂದು ನಿಧನರಾದರು.

ಕೃತಿಗಳು
ನಲ್ಮೆ, ಹೊನ್ನಿಯ ಮದುವೆ, ಹಣ್ಣು ಕಾಯಿ, ಘೋಷಯಾತ್ರೆ, ಮುರಾಲಿನಾದ, ದೇವತಾ ಮನುಷ್ಯ, ಲೋಕದ ಕಣ್ಣು, ಧೂಮಕೇತು, ಕಾಣಿಕೆ, ಗಾಂಧಿ ಸಂದೇಶ, ಗುರುದಕ್ಷಿಣೆ, ಹಿಡಿಂಬೆ, ಯಜ್ಞಕುಂಡ, ಮಹಾಯಾಗ, ಉಷಾ, ದುಡಿಯುವ ಮಕ್ಕಳು, ನಮ್ಮ ಕತೆಗಳು, ಸ್ವರಾಜ್ಯ ಯುದ್ಧ, ಗಾಜಿನ ಬಳೆ ಮತ್ತು ಇತರ ಕಥೆಗಳು, ವಾಙ್ಮಯ ತಪಸ್ಸು, ವಸ್ತ್ರಾಪಹರಣ, ಪತ್ರ ಪುಷ್ಪ, ಹಿಂದಿನ ಕಥೆಗಳು, ವಿರಾಮ ಮುಂತಾದವು.


ಗೌರವ, ಪ್ರಶಸ್ತಿ-ಪುರಸ್ಕಾರಗಳು
ಮಡಿಕೇರಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
೧೯೬೫ರಲ್ಲಿ ಕಾರವಾರದಲ್ಲಿ ನಡೆದ ೪೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
 

ಎಂ. ಗೋಪಾಲಕೃಷ್ಣ ಅಡಿಗ
ಎಂ. ಗೋಪಾಲಕೃಷ್ಣ ಅಡಿಗರು ೧೯೧೮ ಫೆಬ್ರವರಿ ೧೮ ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಗೇರಿಯಲ್ಲಿ ಜನಿಸಿದರು. ಇವರು ನವ್ಯ ಸಾಹಿತ್ಯದ ಶ್ರೇಷ್ಠ ಕವಿ ಹಾಗೂ ವಿಮರ್ಶಕ. ಬೈಂದರೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವಾಯಿತು. ೧೯೪೨ರಲ್ಲಿ ಮೈಸೂರಿನಲ್ಲಿ ಬಿ.ಎ. ಆನರ‍್ಸ್ ಮುಗಿಸಿ ಅದೇ ವರ್ಷ ಚಿತ್ರದುರ್ಗದ ಪ್ರೌಢಶಲೆಯೊಂದರಲ್ಲಿ ಕೆಲಸಕ್ಕೆ ಸೇರಿದರು. ದಾವಾಣಗೆರೆ, ಬೆಂಗಳೂರು, ತುಮಕೂರು ಪ್ರೌಢಶಾಲೆಗಳಲ್ಲಿ ಕೆಲವು ಕಾಲ ಶಿಕ್ಷಕರಾಗಿ ದುಡಿದರು. ಮುಂದೆ ಪ್ರೌಢಶಾಲಾ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ, ಬೆಂಗಳೂರಿನ ಅಠರಾ ಕಛೇರಿಯೊಂದರಲ್ಲಿ ನಾಲ್ಕು ತಿಂಗಳುಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿದರು. ೧೯೪೭ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅದೇ ವರ್ಷ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಯಾದರೂ ೧೯೫೨ರಲ್ಲಿ ಈ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಸೆಂಟ್ ಫೆಲೋಮಿನಾ ಕಾಲೇಜಿನಲ್ಲಿ, ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಮತ್ತು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ೧೯೭೧ ರಲ್ಲಿ ಜನಸಂಘದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋಲು ಅನುಭವಿಸಿದರು. ೧೯೪೭ರಲ್ಲಿ ಅಮೇರಿಕಾದ ವಿಶ್ವವಿದ್ಯಾನಿಲಯಗಳಿಗೆ ವಿಶೇಷ ಉಪನ್ಯಾಸ ನೀಡಲು ಭೇಟಿ ನೀಡಿದ್ದರು. ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿಯೂ ದುಡಿದರು. ಸಾಕ್ಷಿ ಎಂಬ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಕೆಲಕಾಲ ದುಡಿದರು. ೧೯೭೫ರಲ್ಲಿ ಸಿಮ್ಲಾದ ಇಂಡಿಯನ್ ಇನ್‌ಸ್ಟಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ನ ರಿಸರ್ಚ್ ಫೆಲೋ ಆಗಿದ್ದರು.
ಅಡಿಗರ ಕಾವ್ಯ ಪ್ರಜ್ಞೆ ಸದಾ ಅಂತರ್ಮುಖಿಯಾಗಿದ್ದು ಇದಕ್ಕೆ ಕಾರಣ. ಇವರ ಸುತ್ತಮುತ್ತಲ ಪರಿಸರ, ಮನೆಯಲ್ಲಿ ಹಿರಿಯ ಸಂಸ್ಕೃತ ಪಂಡಿತರು. ದ.ರಾ. ಬೇಂದ್ರೆ ಮತ್ತು ಕಡೆಂಗೊಡ್ಲು ಶಂಕರಭಟ್ಟರ ದಿವ್ಯ ಪ್ರಭಾವದಿಂದ ಕಾವ್ಯ ರಚನೆಗೆ ತೊಡಗಿದರು. ಆ ಹೊತ್ತಿಗೆ ಬೇಂದ್ರೇ, ಕುವೆಂಪು, ಪು.ತಿ.ನ ಮೊದಲಾದವರ ರಮ್ಯ ಮಾರ್ಗದಲ್ಲಿ ಹೆಜ್ಜೆ ಇಟ್ಟ ಅಡಿಗರು ಹೊಸ ಆಯಾಮದಲ್ಲಿ ಕಾವ್ಯವನ್ನು ಬರೆಯಲು ಪ್ರಾರಂಭಿಸಿದರು. ನವ್ಯ ಕಾವ್ಯದಲ್ಲಿ ಅಡಿಗರು ಹೊಸ ಛಂದೋರೂಪಗಳನ್ನು, ಹೊಸ ಭಾಷೆಯನ್ನು ಉಪಯೋಗಿಸಿದರು. ಕಾವ್ಯದಲ್ಲಿ ವಾಸ್ತವವಾದವನ್ನು ತಂದ ಅಡಿಗರು ವಿಮರ್ಶೆಯಲ್ಲೂ ಕೃತಿನಿಷ್ಠ ವಿಶೇಷತೆಯನ್ನು ತಂದರು.
ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಲೇಖನಗಳನ್ನು ಬರೆದಿದ್ದಾರೆ. ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ ಆಧುನಿಕ ಮಹಾಕಾವ್ಯವೊಂದನ್ನು ಓದಿದ ಅನುಭವವಾಗುತದೆ. ಇವರು ೧೯೯೨ ನವೆಂಬರ್ ೧೪ ರಂದು ಬೆಂಗಳೂರಿನಲ್ಲಿ ನಿಧನರಾದರು.

ಕೃತಿಗಳು
ಕನ್ನಡದ ಅಬಿಮಾನ, ಚಿವಾರಪಥ, ಮಣ್ಣಿನ ವಾಸನೆ, ನಮ್ಮ ಶಿಕ್ಷಣ ಕ್ಷೇತ್ರ, ಆಕಾಶದೀಪ, ಅನಾಥೆ, ಪಂಡೆಮದ್ದಳೆ, ವರ್ಧಮಾನ, ನೆನಪಿನ ಗಣಿಯಿಂದ ಎಂಬುದು ಇವರ ಆತ್ಮಕಥನ.
ಮಹರ್ಷಿ ಅರವಿಂದ ಘೋಷ್, ಉಪನಿಷದ್ರಹಸ್ಯ, ಕಣ್ಮರೆಯಾದ ಕನ್ನಡ ಕನ್ನಡ ನಾಡಿನ ಜೀವಾಳ, ಕರ್ನಾಟಕದ ವೀರಕ್ಷತ್ರಿಯರು, ಕರ್ಣನ ಮೂರು ಚಿತ್ರಗಳು, ಋಗ್ವೇದಸಾರ, ಮಾನವಧರ್ಮದ ಅಕೃತಿ, ಶ್ರೀಮದ್ ಭಗವದ್ಗೀತೆ, ಇಂಡಿಯಾ, ಸೋಬಾನೆ ಚಿಕ್ಕಮ್ಮನ ಪದಗಳು, ಹೆಳವರ ಮತ್ತು ಅವನ ಕಾವ್ಯಗಳು, ಕರ್ನಾಟಕ ಜಾನಪದ ಕತೆಗಳು

ಗೌರವ ಪ್ರಶಸ್ತಿ-ಪುರಸ್ಕಾರಗಳು
೧೯೭೩ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೪ ರಲ್ಲಿ ವರ್ಧಮಾನ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ;
ಸಮಗ್ರಗದ್ಯ ಕೃತಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ
ಕುಮಾರನ ಆಶಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿ ಲಭಿಸಿವೆ.
೧೯೭೯ ರಲ್ಲಿ ಧರ್ಮಸ್ಥಳದಲ್ಲಿ ಜರುಗಿದ ೫೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
೧೯೯೩ ರಲ್ಲಿ ಇವರ ಸುವರ್ಣ ಪುತ್ಥಳಿ ಕೃತಿಗೆ ಮರಣೊತ್ತರವಾಗಿ ಪ್ರತಿಷ್ಠಿತ ಪಂಪ ಪ್ರಶಸ್ತಿ ನೀಡಲಾಗಿದೆ.

ಡಿ.ವಿ.ಗುಂಡಪ್ಪ
ಡಿ.ವಿ.ಗುಂಡಪ್ಪನವರ ಪೂರ್ಣ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ತಂದೆ ವೆಂಕಟರಮಣಯ್ಯ. ತಾಯಿ ಅಲಮೇಲಮ್ಮ ೧೮೮೭ ಮಾಚ್ ೧೭ ರಂದು ಕೋಲಾರ ಜಿಲ್ಲೆಯ ಮುಳುಬಾಗಿನಲ್ಲಿ ಜನಿಸಿದರು. ಮುಳಬಾಗಿಲು, ಕೋಲಾರ ಹಾಗೂ ಮೈಸೂರುಗಳಲ್ಲಿ ಮೆಟ್ರಿಕ್ಯುಲೇಷನ್‌ವರೆಗೆ ಅಭ್ಯಾಸ ಮಾಡಿದರು. ಕಾಲೇಜು ಶಿಕ್ಷಣವನ್ನು ಪೂರೈಸಲಾಗದ ಇವರು ಜೀವನವನ್ನು ನಿರ್ವಹಿಸಲು ಕೆಲಸಕ್ಕೆ ಸೇರಿಕೊಂಡರು. ಶಿಕ್ಷಕನಾಗಿ ವೃತ್ತಿ ಜೀವನ ಆರಂಭಿಸಿ ನಂತರ ಬೇರೆ ಬೇರೆ ಕೆಲಸ ನಿರ್ವಹಿಸಿ ಸಾಹಿತ್ಯದಲ್ಲಿಯ ಆಸಕ್ತಿಯಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ಜೀವನ ನಡೆಸಿದರು. ೧೯೦೫ರಲ್ಲಿ ಬೆಂಗಳೂರಿಗೆ ಬಂದು ಸೂರ್ಯೋದಯ ಪ್ರಕಾಶಿಕಾ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಕನ್ನಡ ಸಾಹಿತ್ಯ ಪರಿಷತ್ತು ಹೊರಡಿಸುತ್ತಿದ್ದ ಪರಿಷತ್ಪತ್ರಿಕೆಯ ಸಂಪಾದಕರಲ್ಲಿ ಇವರು ಒಬ್ಬರಾಗಿದ್ದರು. ೧೯೦೭ ರಲ್ಲಿ ಸ್ವತಂತ್ರವಾಗಿ ಭಾರತಿ ಎಂಬ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಅಲ್ಲದೆ ಮೈಸೂರು ಟೈಮ್ಸ್ ಮತ್ತು ಕರ್ನಾಟಕ ಇವರು ಪ್ರಕಟಿಸಿದ ಪತ್ರಿಕೆಗಳು. ಹೀಗೆ ಪತ್ರಕರ್ತರಾಗಿ ಗಳಿಸಿದ ಅಪಾರ ಅನುಭವ ಇದರಿಂದ ಜನಮೆಚ್ಚುಗೆ ಪಡೆದರು. ೧೯೨೬ ರಿಂದ ೧೯೪೦ ರವರೆಗೆ ಮೈಸೂರು ಶಾಸನ ಪರಿಷತ್ತಿನ ಸದಸ್ಯರಾಗಿದ್ದರು. ೧೯೩೪ ರಿಂದ ೧೯೩೭ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು. ೧೯೪೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಿದರು. ಮೈಸೂರು ವಿಶ್ವವಿದ್ಯಾಲಯ ಸೆನೆಟ್ ಹಾಗೂ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು.
ವೈವಿಧ್ಯಮಯ ಬದುಕು, ಚಿಂತನೆ, ಶ್ರದ್ದೇ, ಅನುಭವಗಳ ಮೂಲಕ ಹಲವಾರು ಮೌಲಿಕ ಕೃತಿಗಳನ್ನು ಇವರು ರಚಿಸಿದ್ದಾರೆ. ಇವರು ಪತ್ರಿಕೋದ್ಯಮಿಗಳು, ಸಾಹಿತಿಗಳು ಆಗಿ ಸಾರ್ವಜನಿಕ ಸೇವೆ ಸಲ್ಲಿಸಿದ್ದಾರೆ. ಪ್ರಸಿದ್ಧ ಸಾಹಿತಿ ಬಿ.ಜಿ.ಎಲ್.ಸ್ವಾಮಿ ಇವರ ಮಗ. ಡಿವಿಜಿಯವರು ೧೯೭೨ರ ಅಕ್ಟೋಬರ್ ೭ ರಂದು ಬೆಂಗಳೂರಿನಲ್ಲಿ ನಿಧನರಾದರು.


ಕೃತಿಗಳು;
ವಸಂತ ಕುಸುಮಾಂಜಲಿ, ನಿವೇದನ, ಉಮರನ ಒಸಗೆ, ಶ್ರೀರಾಮ ಪರೀಕ್ಷಣಂ, ಅಂತಃಪುರ ಗೀತೆ, ಗೀತ ಶಾಕುಮತಲ, ಶೃಂಗಾರ ಮಂಗಳಂ, ಶ್ರೀಕೃಷ್ಣ ಪರೀಕ್ಷಣಂ, ಮಂಕುತಿಮ್ಮನ ಕಗ್ಗ, ದಿವಾನ್ ರಂಗಾಚಾರ್ಲು, ಗೋಪಾಲಕೃಷ್ಣ ಗೋಖಲೆ, ವಿದ್ಯಾರನ್ಯ ವಿಜಯ, ತಿಲೋತ್ತಮೆ, ಮ್ಯಾಕ್‌ಬೆತ್, ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಬಾಳಿಗೊಮದು ನಂಬಿಕೆ, ಸಂಸ್ಕೃತಿ, ರಾಜ್ಯಶಾಸ್ತ್ರ, ರಾಜ್ಯಾಂಗ ತತ್ವಗಳು, ಶ್ರೀಮದ್ಭಗವದ್ಗೀತಾ ತಾತ್ಪಾರ್ಯ ಅಥವಾ ಜೀವನ ಧರ್ಮಯೋಗ, ವಿದ್ಯಾರಣ್ಯರು ಮತ್ತು ಅವರ ಸಮಕಾಲೀನರು, ಪುರುಷಸೂಕ್ತ, ಈಶೋಪನಿಷತ್ತು, ದೇವರು, ಕಾವ್ಯ ಸ್ವಾರಸ್ಯ, ಮರುಳ ಮುನಿಯನ ಕಗ್ಗ, ಜ್ಞಾಪಕ ಚಿತ್ರಶಾಲೆ (ಸಂಪುಟಗಳಲ್ಲಿ) ಇಂದ್ರವಜ್ರ, ಬೆಕ್ಕೋಜಿ, ವಿಚಿತ್ರವಾದ ವಾ ಪಾತ್ರೆ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೨೮ ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ಅಖಿಲ ಕರ್ನಾಟಕ ವೃತ್ತ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು.
೧೯೬೦ ರಲ್ಲಿ ಬೆಂಗಳೂರಿನಲ್ಲಿ ನಡೆದ ಮೈಸೂರು ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೬೧ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿತು.
೧೯೭೬ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದಿದೆ.
 

ವಿ.ಕೃ ಗೋಕಾಕ್
ವಿ.ಕೃಗೋಕಾಕ್ ಇವರ ಪೂರ್ಣ ಹೆಸರು ವಿನಾಯಕ ಕೃಷ್ಣ ಗೋಕಾಕ್. ಇವರು ೧೯೦೯ರ ಆಗಸ್ಟ್ ೯ ರಂದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ತಂದೆ ಕೃಷ್ಣರಾಯ ಗೋಕಾಕ್ ತಾಯಿ ಸುಂದರಬಾಯಿ. ಪ್ರಾಥಮಿಕ ಶಿಕ್ಷಣ ಸವಣೂರಿನಲ್ಲಿ ಆಯಿತು. ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ೧೯೨೯ರಲ್ಲಿ ಬಿ.ಎ. ಪದವಿ ಪಡೆದು ೧೯೩೧ರಲ್ಲಿ ಎಂ.ಎ. ಪದವಿ ಪಡೆದರು. ತದನಂತರ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನೇಮಕಗೊಂಡರು.
ವಿನಾಯಕ ಕಾವ್ಯನಾಮದಿಂದ ಖ್ಯಾತರಾಗಿದ್ದ, ಕನ್ನಡ ಸಾಂಕ್ಕೃತಿಕ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟಕ್ಕೇರಿಸಿದ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿ. ಆಧುನಿಕ ಕನ್ನಡ ಕಾವ್ಯಕ್ಕೆ ಬುನಾದಿ ಹಾಕಿದವರು. ಬೇಂದ್ರೆ ಮುಂದಾಳತ್ವದ ಗೆಳೆಯರ ಗುಂಪು ಸಾಹಿತ್ಯ ಸಫಲತೆಯ ದ್ಯೋತಕವೆಂದು ಪರಿಗಣಿಸಲ್ಪಟ್ಟರು. ಧಾರವಾಡದಲ್ಲಿ ಓದುವಾಗ ಬೇಂದ್ರ, ರಂ.ಶ್ರೀ ಮುಗುಳಿ ಇಂತಹವರ ಸಹವಾಸದಲ್ಲಿ, ಕನ್ನಡ ಸಾಹಿತ್ಯದತ್ತ ಇವರ ಮನಸ್ಸು ಹರಿಯಿತು. ಗೋಕಾಕರು ತುಂಬು ಜೀವನದ ಬಹುಕಾಲ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ವಿ.ಕೃಗೋಕಾಕರು ಅಧ್ಯಾಪಕ ವೃತ್ತಿಗೆ ಪ್ರವೇಶಿಸಿದ್ದು ೧೯೩೧ನೇ ಇಸವಿಯಲ್ಲಿ. ೧೯೩೬ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಆಕ್ಸ್‌ಫರ್ಡ್‌ಗೆ ಹೋಗಿ ಬಂದರು. ೧೯೪೦ರಲ್ಲಿ ಸಾಂಗ್ಲಿ ವಿಲ್ಲಿಂಗ್ಡನ್ ಕಾಲೇಜಿನ ಮುಖ್ಯಸ್ಥರಾದರು. ೧೯೪೫ ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ೧೯೪೬ರಲ್ಲಿ ವೀಸ ನಗರದ ಕಲೆ ಮತ್ತು ವಿಜ್ಞಾನ ಕಾಲೇಜಿನ ಮುಖ್ಯಸ್ಥರಾದರು. ೧೯೪೯ರಲ್ಲಿ ಕೊಲ್ಲಾಪುರದ ರಾಜಾರಾಂ ಕಾಲೇಜಿನಲ್ಲಿ ಮುಖ್ಯಸ್ಥರಾದರು. ೧೯೫೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ೧೯೫೯ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಸಂಸ್ಥೆಯ ನಿರ್ದೇಶಕರಾದರು. ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದರು. ತದನಂತರ ೧೯೭೦ರಲ್ಲಿ ಸಿಮ್ಲಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿ ಕೆಲಕಾಲವಿದ್ದರು.
೧೯೭೭ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷರಾದರು. ೧೯೭೮ರಲ್ಲಿ ದೆಹಲಿಯ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷರೂ, ೧೯೮೨ರಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆದರು. ಕರ್ನಾಟಕ ಸರ್ಕಾರದ ಕೋರಿಕೆಯಂತೆ ಭಾಷಾ ಸಮಿತಿಯ ಅಧ್ಯಕ್ಷರಾಗಿ ಒಂದು ವರದಿ ಸಲ್ಲಿಸಿದರು. ಅದೇ ಗೋಕಾಕ್ ವರದಿ ಎಂದೇ ಪ್ರಸಿದ್ದವಾಯಿತು. ಇದೇ ಮುಂದೆ ಪ್ರಸಿದ್ದವಾಗಿ ಗೋಕಾಕ್ ಚಳುವಳಿ ಎಂಬ ಕನ್ನಡ ಚಳುವಳಿಗೆ ನಾಂದಿಯಾಯಿತು. ವಿ.ಕೃ ಗೋಕಾಕರು ೧೯೯೨ರಲ್ಲಿ ಏಪ್ರಿಲ್ ೨೮ ರಂದು ನಿಧನರಾದರು.
ಗೌರವ ಪ್ರಶಸ್ತಿ-ಪುರಸ್ಕಾರಗಳು.
ಕರ್ನಾಟಕ ಸರ್ಕಾರವು ಇವರ ಸಾಹಿತ್ಯ ಸೇವೆಗೆ ಅನೇಕ ಗೌರವಾನ್ವಿತ ಪುರಸ್ಕಾರಗಳನ್ನು ನೀಡಿದೆ.
೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
೧೯೬೦ ರಲ್ಲಿ ಇವರ ದ್ಯಾವಾ ಪೃಥಿವಿ ಕವನ ಸಂಕಲನಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಕೆ.
೧೯೯೦ ರಲ್ಲಿ ಇವರ ಭಾರತ ಸಿಂಧು ರಶ್ಮಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.
೧೯೬೧ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ
೧೯೬೭ರಲ್ಲಿ ಯೂನಿವರ್ಸಿಟಿ ಆಫ್ ಪಿಸಿಫಿಕ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಲಭಿಸಿದೆ.
೧೯೬೯ರಲ್ಲಿ ವಿನಾಯಕ ವಾಙ್ಮಯ ಪ್ರಶಸ್ತಿ ಗ್ರಂಥ ಸಮರ್ಪಣೆ ಇತ್ಯಾದಿ ಗೌರವಗಳು ಇವರಿಎ ಸಂದಿವೆ.
 

ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಡ್ ೧೯೩೮ರ ಮೇ ೧೯ರಂದು ಕೋಟಾ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕೃಷ್ಣ ಕಾರ್ನಾಡ್, ತಾಯಿ ಕೃಷ್ಣಬಾಯಿ. ಇವರು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಶಿರಸಿಯ ಮಾರಿಕಾಂಬ ಹೈಸ್ಕೂಲಿನಲ್ಲಿ ಮುಗಿಸಿದರು. ಕರ್ನಾಟಕ ಕಾಲೇಜಿನಲ್ಲಿ ಗಣಿತ ಮತ್ತು ಸಂಕಲನ ಶಾಸ್ತ್ರದಲ್ಲಿ ೧೯೫೮ರಲ್ಲಿ ಬಿ.ಎ. ಪದವಿ ಗಳಿಸಿದರು. ೧೯೬೩ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಗಳಿಸಿದರು. ಮುಂಬಯಿಯಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದಾಗ ರೋಡ್ಸ್ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಇಂಗ್ಲೆಂಡಿನ ಆಕ್ಸಪರ್ಡ್ ಯೂನಿಯನ್ನಿನ ಅಧ್ಯಕ್ಷರು ಆಗಿದ್ದರು. ಭಾರತಕ್ಕೆ ಹಿಂತಿರುಗಿದ ಮೇಲೆ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ಸಂಸ್ಥೆಯ ಮದರಾಸು ಶಾಖೆಯ ಉಪವ್ಯವಸ್ಥಾಪಕರಾದರು. ಮುಂದೆ ಅದರ ವ್ಯವಸ್ಥಾಪಕರಾದರು. ೧೯೭೪ರಲ್ಲಿ ಪೂನಾದ ಫಿಲಂ ಇನ್‌ಸ್ಟಿಟ್ಯೂಟಿನಲ್ಲಿ ನಿರ್ದೇಶಕರಾಗಿದ್ದರು. ಗಿರೀಶ್ ಕಾರ್ನಾಡ್ ಚಲನಚಿತ್ರ ನಿರ್ದೇಶಕರಾಗಿಯೂ ಪ್ರಸಿದ್ಧಿ ಪಡೆದವರು. ವಂಶವೃಕ್ಷ, ಕಾನೂನು ಹೆಗ್ಗಡತಿ, ಕಾಡು ಇವರು ನಿರ್ದೇಶಿಸಿದ ಕನ್ನಡ ಚಿತ್ರಗಳು. ಇವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಬರೆದಿರುವ ನಾಟಕಗಳು ವಿದೇಶಗಳಲ್ಲೂ ಪ್ರದರ್ಶಿಸಲ್ಪಟ್ಟಿವೆ ಹಾಗೂ ಇವು ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ. ಇವರು ನಿರ್ದೇಶಿಸಿರುವ ಬಹುತೇಕ ಚಿತ್ರಗಳು ಪ್ರಶಸ್ತಿ ಪುರಸ್ಕೃತ ಚಿತ್ರಗಳಾಗಿವೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ ಇವುಗಳ ನಡುವೆ ಗಿರೀಶ್ ಕಾರ್ನಾಡರು ನಿಕಟ ಬಾಂಧವ್ಯವನ್ನು ಹೊಂದಿದ್ದರು. ಇವರು ಸ್ವಲ್ಪಕಾಲ ಪೂನಾದ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ನಿರ್ದೇಶಕರಾಗಿದ್ದರು. ಇವರು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು
ಯಯಾತಿ, ತುಘಲಕ್, ಹಯವದನ, ಹಿಟ್ಟಿನ ಹುಂಜ, ಅಗ್ನಿ ಮತ್ತು ಮಳೆ, ಟಿಪ್ಪೂ ಸುಲ್ತಾನ ಕಂಡ ಕನಸು, ತಲೆದಂಡ, ನಾಗಮಂಡಲ, ಒಡಕಲು ಬಿಂಬ, ಮದುವೆಯ ಆಲ್ಬಂ. ಇತ್ತೀಚೆಗೆ ಸಮಗ್ರ ನಾಟಕಗಳು ಹೊರಬಂದಿವೆ.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೭೦ರಲ್ಲಿ ಮೈಸೂರು ರಾಜ್ಯ ಪ್ರಶಸ್ತಿ;
೧೯೭೧ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ;
೧೯೭೪ರಲ್ಲಿ ಪದ್ಮಶ್ರೀ ಪ್ರಶಸ್ತಿ
೧೯೭೬ರಲ್ಲಿ ಭಾರತೀಯ ನಾಟ್ಯ ಸಂಘದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ;
೧೯೯೨ ರಲ್ಲಿ ಪದ್ಮಭೂಷಣ ಪ್ರಶಸ್ತಿ;
೧೯೯೪ರಲ್ಲಿ ತಲೆದಂಡ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;
೧೯೯೮ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಗೀತಾ ನಾಗಭೂಷಣ
ಗೀತ ನಾಗಭೂಷಣರವರು ೧೯೪೨ ರ ಮಾರ್ಚ್ ೨೫ ರಂದು ಗುಲ್ಬರ್ಗಾ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಜನಿಸಿದರು. ತಂದೆ ಶಾಂತಪ್ಪ, ತಾಯಿ ಶರಣಮ್ಮ, ಬಿ.ಎಡ್ ಹಾಗೂ ಕನ್ನಡ ಎಂ.ಎ. ಪದವಿ ಪಡೆದು ಅಧ್ಯಾಪಕಿಯಾಗಿ, ಕಾಲೇಜಿನಲ್ಲಿ ಪ್ರಾರ್ಚಾಯರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಇವರು ಸುಮಾರು ೩೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಸ್ತ್ರೀ ಸಂವೇದನೆಯೊಂದಿಗೆ ಆ ಮಣ್ಣಿನ ವಾಸನೆ ಬೆಸೆದುಕೊಂಡಿದೆ. ಶತಮಾನಗಳಿಂದ ಒಳಗೆ ಮಡುಗಟ್ಟಿದ ಕೆಳವರ್ಗದ ನೋವಿನ ಅಭಿವ್ಯಕ್ತಿಗೆ ಲೇಖನಿಯನ್ನು ಮಾಧ್ಯಮವನ್ನಾಗಿ ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಇವರು ಯಶಸ್ವಿಯಾಗಿದ್ದಾರೆ.
ಗೀತಾ ನಾಗಭೂಷಣರವರ ಅನೇಕ ಕಥೆಗಳು ಮತ್ತು ನಾಟಕಗಳು ಗುಲ್ಬರ್ಗಾ, ಧಾರವಾಡ, ಮೈಸೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ. ಇವರು ಡಾ|| ಶಿವರಾಮ ಕಾರಂತ ಪ್ರಶಸ್ತಿ ಆಯ್ಕೆ ಸಮಿತಿ, ಕನ್ನಡ ಪುಸ್ತಕ ಪ್ರಾಧಿಕಾರ, ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸ್ಥಾನಕ್ಕೆ ಬಂದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಯೂ ಇವರದಾಗಿದೆ.
ಕೃತಿಗಳು
ತಾವರೆಯ ಹೂ, ಚಂದನದ ಚಿಗುರು, ಸಪ್ರವರ್ಣದ ಸ್ವಪ್ನ, ಪ್ರೀತಿಸಿದ್ದು ನಿನ್ನನ್ನೇ, ನಿನ್ನ ತೋಳುಗಳಲ್ಲಿ, ನನ್ನ ನಿನ್ನ ನಡುವೆ, ಅಸರೆಗಳು, ಅಭಿಮಾನ, ಹಸಿಮಾಂಸ ಮತ್ತು ಹದ್ದುಗಳೂ, ಮಾಪುರ ತಾಯಿಯ ಮಕ್ಕಳು, ಅಘಾತ, ಚಿಕ್ಕಿಯ ಹರೆಯದ ದಿನಗಳು, ನೀಲಗಂಗಾ, ದುಮ್ಮಸ್ಸು, ದಂಗೆ, ಬದುಕು, ಜ್ವಲಂತ, ಅವ್ವ ಮತ್ತು ಇತರ ಕತೆಗಳು, ಖೇಮಣ್ಣ ಮೊದಲಾದವರು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೯೫ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ;
೧೯೯೮ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ;
೨೦೦೨ರಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ;
ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ;
೨೦೦೮ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಗೌರವ;
೨೦೦೪ ರಲ್ಲಿ ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;
ಗೊರೂರು ಸಾಹಿತ್ಯ ಪ್ರಶಸ್ತಿ, ಸರ್.ಎಂ.ವಿ. ಪ್ರಶಸ್ತಿ ಮುಂತಾದವು ಇವರಿಗೆ ಸಂದಿವೆ.
 

ಗೊರೂರು ರಾಮಸ್ವಾಮಿ ಅಯ್ಯಂಗಾರ್
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ೧೯೦೪ ಜುಲೈ ೪ ರಂದು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗೊರೂರಿನಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಲೋಯರ್ ಸೆಕೆಂಡರಿ ಶಿಕ್ಷಣವನ್ನು ಮುಗಿಸಿ ಪ್ರೌಢಶಾಲೆಯಲ್ಲಿ ಅಭ್ಯಸುತ್ತಿರಬೇಕಾದರೆ ಗಾಂಧೀಜಿಯವರ ಅಸಹಕಾರ ಚಳುವಳಿಯ ಕಡೆಗೆ ಆಕರ್ಷಿತರಾಗಿ ಇಂಗ್ಲಿಷ್ ವಿದ್ಯೆಗೆ ಶರಣು ಹೊಡೆದು ಗಾಂಧೀಜಿಯವರೊಂದಿಗೆ ಗುಜರಾತಿಗೆ ಹೋಗಿ ಅಲ್ಲಿ ಗುಜರಾತ್ ವಿದ್ಯಾಪೀಠದ ವಿದ್ಯಾರ್ಥಿಯಾದರು. ಆ ವೇಳೆಗೆ ಗಾಂಧಿಜೀಯವರೊಂದಿಗೆ ನಿಕಟ ಸಂಪರ್ಕಹೊಂದಿದ್ದರು. ಮದರಾಸಿನ ಲೋಕಮಿತ್ರ ಎಂಬ ಕನ್ನಡ ಪತ್ರಿಕೆಯ ಉಪ ಸಂಪಾದಕರಾಗಿ ದುಡಿದರು. ತದನಂತರ ಆಂಧ್ರ ಪತ್ರಿಕೆ ಹಾಘೂ ಭಾರತಿ ಪತ್ರಿಕೆಗಳಿಗೆ ಕನ್ನಡ ಸಮಾಚಾರ ಲೇಖಕರಾಗಿ ಕೆಲವು ಸಮಯ ಸೇವೆ ಸಲ್ಲಿಸಿದರು. ಗುಜರಾತಿನಿಂದ ಕರ್ನಾಟಕಕ್ಕೆ ಬಂದು ಕೆಂಗೇರಿಯ ಗುರುಕುಲಾಶ್ರಮವನ್ನು ಸೇರಿ ಹರಿಜನೋದ್ದಾರಕ್ಕಾಗಿ ಬಹುವಾಗಿ ಶ್ರಮಿಸಿದರು. ೧೯೪೨ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಜರುಗಿದ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದರು. ಸ್ವಾತಂತ್ರ್ಯನಂತರ ಪ್ರಜಾ ಸರ್ಕಾರ ಸ್ಥಾಪನೆಗಾಗಿ ಮೈಸೂರಿನಲ್ಲಿ ನಡೆದ ಚಳುವಳಿಯಲ್ಲೂ ಇವರು ಭಾಗವಹಿಸಿದ್ದರು. ಗೊರೂರರು ೧೨ ವರ್ಷಗಳ ಕಾಲ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಇವರ ಅವಧಿಯಲ್ಲಿ ಕರ್ನಾಟಕ ಏಕೀಕರಣಕ್ಕಾಗಿ ಬೆಂಬಲವನ್ನು ನೀಡಿದರು. ತಮ್ಮ ಹಳ್ಳಿಯಲ್ಲಿದ್ದುಕೊಂಡೆ ಕನ್ನಡದ ಸರ್ವತೋಮುಖ ಏಳಿಗೆಗೆ ಶ್ರಮಿಸಿದರು. ಅರ್ಧ ಶತಮಾನದಷ್ಟು ಕಾಲ ಕನ್ನಡ ಸಾಹಿತ್ಯ ಸೇವೆ ನಡೆಸಿದರು. ಇವರು ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸಭೆಯ ಸದಸ್ಯರಾಗಿದ್ದರು. ಇವರು ೧೯೯೧ ಸೆಪ್ಟೆಂಬರ್ ೨೮ ರಂದು ನಿಧನರಾದರು.
ಕೃತಿಗಳು.
ಗೊರೂರರು ೪೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭೂತಯ್ಯನ ಮಗ ಅಯ್ಯು ಹಾಗೂ ಹೇಮಾವತಿ ಚಲನಚಿತ್ರಗಳು ಇವರ ಕಥೆ ಕಾದಂಬರಿಗಳನ್ನು ಒಳಗೊಂಡಿವೆ. ಸಾಹಿತ್ಯ ರಶ್ಮಿ, ಭಾರತದ ಸ್ವಾತಂತ್ರ್ಯ ಮುಂತಾದವು.
ಗೌರವ, ಪ್ರಶಸ್ತಿ - ಪುರಸ್ಕಾರಗಳು
೧೯೬೭ರಲ್ಲಿ ತರೀಕೆರೆಯಲ್ಲಿ ಜರುಗಿದ ಮೊದಲನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಅಧ್ಯಕ್ಷತೆ;ಪ
೧೯೬೯ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ;
೧೯೭೧ರಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೭೩ರಲ್ಲಿ ಅಭಿಮಾನಿಗಳಿಂದ ಗೊರೂರು ಗೌರವ ಗ್ರಂಥ ಅರ್ಪಣೆ;
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್ ಗೌರವ;
೧೯೮೦ರಲ್ಲಿ ಇವರ ಅಮೆರಿಕಾದಲ್ಲಿ ಗೊರೂರು ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;
೧೯೮೨ರಲ್ಲಿ ಶಿರಸಿಯಲ್ಲಿ ಜರುಗಿದ ೫೫ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರಿಗೆ ವಹಿಸಿ ಗೌರವಿಸಿತು.

ಗಳಗನಾಥ
ಗಳಗನಾಥರ ಪೂರ್ಣ ಹೆಸರು ವೆಂಕಟೇಶ ತಿರಕೋ ಕುಲಕರ್ಣಿ ಗಳನಾಥ. ಗಳಗನಾಥರು ಈಗಿನ ಹಾವೇರಿ ಜಿಲ್ಲೆಯ ಗಳಗನಾಥ ಎಂಬಲ್ಲಿ ೧೮೬೯ರ ಜನವರಿ ೫ ರಂದು ಜನಿಸಿದರು. ಇವರ ತಂದೆ ಊರಿನ ಕುಲಕರ್ಣಿಯಾಗಿದ್ದರು. ಗಳಗನಾಥರಿಗೆ ಬಾಲ್ಯದಲ್ಲೇ ಸಂಸ್ಕೃತ ಅಧ್ಯಯನ ಮಾಡುವ ಅವಕಾಶ ದೊರೆಯಿತು. ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಾನದ ಹತ್ತಿರ ರಮಣೀಯ ಸ್ಥಳದಲ್ಲಿರುವ ಗಳಗನಾಥ ಗಳಗೇಶ್ವರ ದೇವಾಲಯ ಇವರ ಪ್ರಥಮ ಪಾಠಶಾಲೆಯಾಯಿತಲ್ಲದೆ ಅಲ್ಲಿ ಇವರಿಗೆ ಅಕ್ಕರೆಯ ಗುರುಕುಲ ಶಿಕ್ಷಣ ದೊರೆತು ಪ್ರಾಥಮಿಕ ಶಾಲೆಯ ಅಭ್ಯಾಸ ನಡೆಯಿತು. ಹಾವನೂರಿನಲ್ಲಿ ಮುಲ್ಕಿ ಪರೀಕ್ಷೆ ಮುಗಿಸಿದರು. ಅನಂತರ ಶಿಕ್ಷಕನಾಗಬೇಕೆಂಬ ಹಂಬಲದಿಂದ ಇವರು ಧಾರವಾಡ ಟ್ರೈನಿಂಗ್ ಕಾಲೇಜಿಗೆ ಸೇರಿ ಮೇಲ್ತರಗತಿಯಲ್ಲಿ ತೇರ್ಗಡೆ ಹೊಂದಿ ಮೂರು ವರ್ಷದ ಶಿಕ್ಷಕ ತರಬೇತಿ ಪಡೆದು ೧೮೮೯ರಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿ ಉತ್ತಮ ಶಿಕ್ಷಕರೆಂದು ಹೆಸರು ಗಳಿಸಿದರು. ನರೇಂದ್ರ, ಶಿರುಗುಪ್ಪ, ಅಗಡಿ, ಹಾವೇರಿಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಅಗಡಿಗೆ ಆನಂದವನ ಆಶ್ರಮದಲ್ಲಿದ್ದುಕೊಂಡು ಸದ್ಬೋಧ ಚಂದ್ರಿಕೆ ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ಹಾವೇರಿಗೆ ಬಂದ ಮೇಲೆ ಸದ್ಗುರು ಪತ್ರಿಕೆ ನಡೆಸಿದರು.
ಹೊಸಗನ್ನಡ ಸಾರಸ್ಪತ ಪ್ರಪಂಚದ ಕೆಲವೇ ಚಿರಸ್ಮರಣೀಯ ವ್ಯಕ್ತಿಗಳಲ್ಲಿ ಗಳಗನಾಥರಿಗೆ ಅಗ್ರಸ್ಥನವಿದೆ. ಕನ್ನಡದಲ್ಲಿ ಓದಲು ಯೋಗ್ಯವಾದುದನ್ನು ಸೃಷ್ಟಿಸಿ ತಮ್ಮ ಕೃತಿಗಳ ಮೂಲಕ ಅಪಾರ ಕನ್ನಡ ವಾಚಕ ವೃಂದವನ್ನು ಗಳಗನಾಥರು ನಿರ್ಮಿಸಿದರು. ಸ್ವತಂತ್ರ ಕೃತಿಗಳ ಜೊತೆಗೆ ಮರಾಠಿ ಕಾದಂಬರಿಗಳನ್ನು ಕನ್ನಡಕ್ಕೆ ರೂಪಾಂತರಿಸಿದರು. ಅವರ ಬರಹ ಹೊಸಗನ್ನಡ ಲೇಖರಿಗೆ ಮಾದರಿಯಾಗಿದೆ.
ಗಳಗನಾಥರ ಸಾಹಿತ್ಯ ಕೃಷಿಯಲ್ಲಿ ಮಾನವೀಯತೆ ಹೋರಾಟ, ರಾಷ್ಟ್ರೀಯತೆಯಲ್ಲಿ ಪರ್ಯಾವಸಾನವಗಿ, ಸಮಕಾಲೀನ ರಾಜಕೀಯ ಆಂದೋಲನಗಳ ಪ್ರಭಾವವಿಲ್ಲದಿದ್ದರೂ ಸನಾತನ ಧರ್ಮದ ಪುನರುಜ್ಜೀವನದ ಬಯಕೆ ಇದೆ. ಗಳಗನಾಥರು ಸಂಸ್ಕೃತ ಭಾಷೆಯ ಹಾಗೂ ಸಾಹಿತ್ಯದಲ್ಲಿ ಅಭಿಮಾನವುಳ್ಳವರಾಗಿದ್ದರೂ ಆ ಭಾಷೆಯ ಶಬ್ದಗಳ ಪ್ರಯೋಗಗಳಿಗೆ ಮರುಳಾಗದೆ ಔಚಿತ್ಯವಾಗಿ ಬಳಸಿ ಅದಕ್ಕೆ ತಿರುಳ್ಗನ್ನಡ ಶಬ್ದಗಳು, ಗಾದೆ ಮಾತುಗಳೂ, ಪಡೆನುಡಿಗಳನ್ನು ಬೆರೆಸಿ ಸುಮಧುರ ಶೈಲಿಯೊಂದನ್ನು ಸೃಷ್ಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹೀಗೆ ಕನ್ನಡ ಸಾಹಿತ್ಯ ಸಾರಸತ್ವ ಲೋಕಕ್ಕೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದವರಲ್ಲಿ ಗಳಗನಾಥರು ಪ್ರಮುಖರು.
ಹೀಗೆ ಪುಸ್ತಕ ಪ್ರಕಟಣೆ, ಪತ್ರಿಕೋದ್ಯಮದಲ್ಲಿ ಅವರು ಕಳೆದ ಅವಧಿ ಸುಮಾರು ೩೦ ವರ್ಷಗಳು. ಸಾಹಿತ್ಯ ದೃಷ್ಟಿಯಿಂದ ಈ ಅವಧಿ ಗಳಗನಾಥರ ಜೀವನದಲ್ಲಿ ತುಂಬ ಯಶಸ್ವಿಯಾದುದು. ಗ್ರಂಥ ಪ್ರಕಟಣೆಯ ಸಾಲದ ಹೊರೆಯಿಂದ ಪಾರಾಗಲೂ ತಮ್ಮ ಇಳಿ ವಯಸ್ಸಿನಲ್ಲಿ ಗ್ರಂಥ ಪ್ರತಿಗಳನ್ನು ಹೊತ್ತು ಮಾರಾಟಕ್ಕೆಂದು ಊರೂರು ಸುತ್ತಬೇಕಾಯಿತು. ಹಾಗೆ ಬೆಂಗಳೂರಿಗೆ ಭೇಟಿ ನೀಡಿದಾಗ ೧೯೪೨ರ ಏಪ್ರಿಲ್ ೨೨ ರಂದು ಕ್ಯಾನ್ಸರ್ ರೋಗದಿಂದ ಬೆಂಗಳೂರಿನಲ್ಲಿ ನಿಧನರಾದರು. ಹೊಸ ಗದ್ಯದ ಆದ್ಯ ಪ್ರವರ್ತಕರೂ ಕನ್ನಡ ಗದ್ಯಕ್ಕೆ ಗಟ್ಟಿಮುಟ್ಟಾದ ಅಡಿಪಾಯ ಹಾಕಿ ಗದ್ಯ ಸೌಧವನ್ನು ನಿರ್ಮಿಸಿದ ಶ್ರೇಯಸ್ಸು ಮುಖ್ಯವಾಗಿ ಗಳಗನಾಥರಿಗೆ ಸಲ್ಲಬೇಕು.
ಕೃತಿಗಳು
ಪ್ರಬುದ್ಧ ಪದ್ಮನಯನೆ, ಕಮಲ ಕಮಾರಿ, ರಾಣಿ ಮೃಣಾಲಿನಿ, ಕ್ಷಾತ್ರತೇಜ, ಧರ್ಮರಹಸ್ಯ, ತಿಲೊತ್ತಮೆ ಅಥವಾ ಸರಸಪ್ರೇಮ, ಕನ್ನಡಿಗರ ಕರ್ಮಕಥೆ, ಶಿವ ಪ್ರಭುವಿನ ಪುಣ್ಯ, ಕುರುಕ್ಷೇತ್ರ, ಮಾಧವ ಕರುಣಾ ವಿಲಾಸ, ಗೃಹ ಕಲಹ, ರಾಣಾ ರಾಜಸಿಂಹ ಮೊದಲಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೮೯೮ರಲ್ಲಿ ಪ್ರಕಟವಾದ ಪ್ರಬುದ್ಧ ಪದ್ಮನಯನೆ ಕೃತಿಗೆ ಕರ್ನಾಟಕ ವಿದ್ಯಾವಧ್ಕ ಬಹುಮಾನ ಪಡೆದರು.

ಗೋವಿಂದ ಪೈ
ಎಂ.ಗೋವಿಂದ ಪೈ ಅವರು ೧೮೮೩ರ ಮಾರ್ಚ್ ೨೩ರಂದು ಮಂಗಳೂರಿನಲ್ಲಿ ಜನಿಸಿದರು. ಇವರ ಆರಂಭದ ವ್ಯಾಸಂಗ ಮಂಗಳೂರಿನಲ್ಲಿ ನಡೆಯಿತು. ಪಂಜೆಮಂಗೇಶರಾಯರು ಇವರ ವಿದ್ಯಾಗುರುಗಳಲ್ಲೊಬ್ಬರು. ಮದರಾಸಿನಲ್ಲಿ ವ್ಯಾಸಂಗ ಮಾಡಿ ಬಿ.ಎ. ಪರೀಕ್ಷೆಯಲ್ಲಿ ಇಂಗ್ಲೀಷಿನಲ್ಲಿ ಪ್ರಥಮ ಸ್ಥಾನ ಪಡೆದರು. ಸಂಸ್ಕೃತ, ಪಾಳಿ, ಪ್ರಾಕೃತ, ಮರಾಠಿ, ಕೊಂಕಣಿ, ತಮಿಳು, ಕನ್ನಡ ಮಲೆಯಾಳಂ, ತುಳು, ಬಂಗಾಳಿ, ಜರ್ಮನ್, ಗ್ರೀಕ್, ಲ್ಯಾಟಿನ್ ಮುಂತಾದ ಹಲವು ಭಾಷೆಗಳನ್ನು ಅಭ್ಯಾಸ ಮಾಡಿದರು.
ತಂದೆ ನಿಧನರಾದ ನಂತರ ಸಂಸಾರದ ಹೊರೆ ಬಿದ್ದು ಊರಿನಲ್ಲಿಯೇ ನಿಂತರು. ಇವರ ದಾಂಪತ್ಯ ಜೀವನವು ಸಹ ಸುಖಮಯವಾಗಿರಲಿಲ್ಲ. ದಾಂಪತ್ಯ ಜೀವನದ ಹರೆಯದಲ್ಲಿಯೇ ಪತ್ನಿಯನ್ನು ಕಳೆದುಕೊಂಡರು. ಮತ್ತೆ ಮದುವೆ ಮಕ್ಕಳಿಲ್ಲವೆಂದು ವ್ಯಥೆಪಡದೇ ತಮ್ಮನ ಮಕ್ಕಳಲ್ಲಿಯೇ ಅಕ್ಕರೆ ತೋರಿಸುತ್ತಾ ಅವರನ್ನು ಬೆಳೆಸಿದರು.
ಗೋವಿಂದ ಪೈಗಳ ಸಾಹಿತ್ಯ ಸೇವೆ ಆರಂಭವಾದದ್ದು ೧೯೦೦ರಲ್ಲಿ ೧೯೦೨ ರಿಂದ ೧೯೧೧ ರೊಳಗೆ ಅವರು ಅನೇಕ ಪ್ರಾಸ ಬದ್ದವೂ, ಪ್ರಾಸ ರಹಿತವೂ ಆದ ಅನೇಕ ಕವನಗಳನ್ನು ಬರೆದರು. ಸ್ವದೇಶಾಭಿಮಾನಿ ಪತ್ರಿಕೆಯಲ್ಲಿ ಅವು ಪ್ರಕಟವಾದವು. ರವೀಂದ್ರನಾಥ ಟ್ಯಾಗೂರ್ ಮತ್ತು ಇಕ್ಬಾಲರ ಕವಿತೆಗಳನ್ನು ಪ್ರಾಸ ರಹಿತವಾಗಿ ಪದ್ಯ ರೂಪದಲ್ಲಿ ಅನುವಾದಿಸಿದರು. ಅವರ ಈ ಸಾಹಸ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿತು. ಅನಂತರ ಕಾವ್ಯದ ಸಾನೆಟ್ ಕವನ ರೂಪಕ್ಕೆ ಚತುರ್ದಶಪದಿ ಎಂಬ ಹೆಸರು ಕೊಟ್ಟು ಅಂತಹ ಕವನಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ತಮ್ಮ ಪತ್ನಿ ತೀರಿಕೊಂಡಾಗ ಆಕೆಯ ನೆನಪಿಗಾಗಿ ಗೊಮ್ಮಟ ಜೀನಸ್ತುತಿ ಎಂಬ ಪ್ರಗಾಥವನ್ನು ರಚಿಸಿದರು.
ಸಂಶೋಧನೆ, ಪ್ರಬಂಧ, ಕವಿತೆ ಮತ್ತು ನಾಟಕ ಈ ಮಾರ್ಗಗಳಲ್ಲಿ ಇವರ ಸಾಹಿತ್ಯ ವಾಹಿನಿ ಪ್ರವಹಿಸಿದೆ. ಗೋವಿಂದ ಪೈಯವರ ಕಾವ್ಯ ಸೃಷ್ಟಿಯನ್ನು ನೋಡಿದಾಗ ಪ್ರಧಾನವಾಗಿ, ಸ್ನೇಹ-ಸೌಹಾರ್ದ, ದೇಶಭಕ್ತಿ, ಜೀವನ ವಿವೇಕ, ಮಾನವೀಯತೆ, ಪರಿಸರ ಪ್ರೇಮಗಳ ಪ್ರೇರಣೆಯನ್ನು ಗುರುತಿಸಬಹುದಾಗಿದೆ. ಕನ್ನಡ ಭಾಷೆ, ಸಾಹಿತ್ಯ ಕುರಿತಂತೆ ಅವರು ಮಾಡಿರುವ ಕೃಷಿ ಬೆರಗುಗೊಳಿಸುವಂತಹುದ್ದಾಗಿದೆ.
ಸುಮಾರು ೬೨ ವರ್ಷಗಳ ಕಾಲ ಸತತವಾಗಿ ಸಾಹಿತ್ಯ ಸಂಶೋಧನೆಯಲ್ಲಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಬರೆದ ಸಾಹಿತ್ಯ ಸ್ವಲ್ಪವೇ ಆದರೂ ಅವರ ಬರವಣಿಗೆ ಪ್ರೌಢ ಮಟ್ಟದ್ದಾಗಿದೆ. ಅಸಂದಿಗ್ಧ ಭಾಷೆ, ಅಚ್ಚಗನ್ನಡ ಪದ ಪ್ರಯೋಗ, ಹೊಸ ಪದಸೃಷ್ಟಿ, ಭಾಷೆಯಲ್ಲಿನ ಪ್ರಾದೇಶಿಕತೆ. ಇವುಗಳಿಂದಾಗಿ ಇವರ ಸಾಹಿತ್ಯ ಗಮನಾರ್ಹವಾದುದಾಗಿದೆ. ಕನ್ನಡ ನಾಡು-ನುಡಿಗಳ ಏಳಿಗೆಗೆ ಏಕೀಕರಣಕ್ಕೆ ಕೆಲಸ ಮಾಡಿದ ಗೋವಿಂದ ಪೈ ತುಂಬು ಬಾಳನ್ನು ಬಾಳಿ ೧೯೬೩ ಸೆಪ್ಟೆಂಬರ್ ೬ ರಂದು ನಿಧನರಾದರು. ಇವರ ನೆನಪನ್ನು ಚಿರಸ್ಮರಣೀಯವನ್ನಾಗಿಸಲು ಉಡುಪಿಯ ಎಂ.ಜಿ.ಎಂ. ಕಾಲೇಜು ಅದರ ಅಂಗಸಂಸ್ಥೆಯನ್ನಾಗಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.

ಕೃತಿಗಳು
ಕೃಷ್ಣಚರಿತೆ, ಗಿಳಿವಿಂಡು, ಹೆಬ್ಬೆರಳು, ಚಿತ್ರಭಾನು, ನಂದಾದೀಪ, ಗೊಮ್ಮಟ ಜಿನಸ್ತುತಿ, ಗೊಲ್ಗೊಥಾ ವೈಶಾಖಿ, ಶ್ರೀಕೃಷ್ಣ ಚರಿತೆ, ಮೂರು ಉಪನ್ಯಾಸಗಳು, ಚೆಂಗಲವೆ, ಪ್ರಬುದ್ಧ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಗೋವಿಂದ ಪೈ ವಾಜ್ಮಯ ದರ್ಶನ.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೯ರಲ್ಲಿ ಮದರಾಸು ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಗೌರವ;
೧೯೫೧ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
 

ಚೆನ್ನವೀರ ಕಣವಿ.
ಚನ್ನವೀರ ಕಣವಿಯವರು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ೧೯೨೮ ಜೂನ್ ೨೮ ರಂದು ಜನಿಸಿದರು. ತಂದೆ ಸಕ್ಕರೆಪ್ಪ, ತಾಯಿ ಪಾರ್ವತವ್ವ. ಇವರ ಪ್ರಾಥಮಿಕ ಶಿಕ್ಷಣ ಶಿರುಂಡ, ಗರಗಗಳಲ್ಲಿ ನಡೆಯಿತು. ಮುಂದಿನ ವಿದ್ಯಾಭ್ಯಾಸವನ್ನು ಧಾರವಾಡ ಮತ್ತು ಗದಗಳಲ್ಲಿ ನಡೆಸಿದರು. ೧೯೫೦ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ; ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದುಕೊಂಡರು. ನಂತರ ೧೯೫೨ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ವಿಸ್ತರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ ನೇಮಕಗೊಂಡರು. ಇವರ ಶಿಸ್ತುಬದ್ದತೆ ಕಾರ್ಯಕ್ಷಮತೆಯಿಂದಾಗಿ ದೊರಕಿದ ಉದ್ಯೋಗದಿಂದ ನಿರ್ದೇಶಕರಾಗಿ ೧೯೫೬ರಲ್ಲಿ ಅದೇ ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ತಮ್ಮ ಸೇವಾವಧಿಯಲ್ಲಿ ಪ್ರಸಾರಾಂಗವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಿ ಬೆಳೆಸಿದರು.
ಕಣವಿಯವರು ಕಾವ್ಯ ವಿಮರ್ಶೆ ಈ ಎರಡೂ ಕ್ಷೇತ್ರಗಳಲ್ಲಿ ವ್ಯವಸಾಯ ಮಾಡಿದವರು. ಇವರ ಕಾವ್ಯದಲ್ಲಿ ಜಾನಪದ, ನಿಸರ್ಗ ಗ್ರಾಮ್ಯ ಬದುಕಿನ ಜೀವಸೆಲೆ ಅವರ ಕಾವ್ಯದಲ್ಲಿ ಚೇತೋಹಾರಿಯಗಿ ಅಭಿವ್ಯಕ್ತಗೊಂಡಿದೆ. ಶೋಷಿತರ ಬದುಕಿನ ಪ್ರತಿ, ವಿಶ್ವಾಸಗಳೇ ಅವರ ಕಾವ್ಯದ ಪ್ರೇರಣೆಗಳು. ಅವರಿಗೆ ಆ ಕಾಲದ ಪತ್ರಿಕೆಗಳಾದ ಜಯಂತಿ, ಜಯಕರ್ನಾಟಕ, ಜೀವನದಂತಹ ಒಳ್ಳೆಯ ಪತ್ರಿಕೆಗಳ ಬೆಂಬಲವಿತ್ತು. ಕುರ್ತುಕೋಟಿ, ಶಂಕರ ಮೋಕಾಶಿ ಪುಣೇಕರವರಂತಹ ಅಪ್ತಗೆಳೆಯರ ವಿಮರ್ಶೆ ಇತ್ತು. ಗೆಳೆಯರೆ ಕಟ್ಟಿಕೊಂಡ ಕಾವ್ಯಾನುಭವ ಮಂಟಪ ಅವರ ಬೌದ್ಧಿಕ ನೆರವಿಗೆ ಬಂತು. ಇವರು ಸುಮಾರು ೧೫ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಕಣವಿಯವರು ಈಗ ಧಾರವಾಡದಲ್ಲಿ ನೆಲೆಸಿದ್ದಾರೆ.
ಕೃತಿಗಳು
ಕಾವ್ಯಾಕ್ಷಿ, ಭಾವಜೀವಿ, ಮಧುಚಂದ್ರ ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ದೀಪದಾರಿ, ನೆಲಮುಗಿಲು, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕ ಮೋಹ, ಜೀನಿಯಾ, ಶಿಶಿರದಲ್ಲಿ ಬಂದ ಸ್ನೇಹಿತ, ಹಕ್ಕಿ ಪುಚ್ಚ, ಚಿರಂತನದಾಹ, ಸಾಹಿತ್ಯ ಚಿಂತನ, ಕಾವ್ಯಾನು ಸಂದಾನ, ಸಮಾಹಿತ, ಸಮತೋಲನ, ಸಾಮೂಹಿಕ, ನವಿಲೂರಮನೆಯಿಂದ, ನವ್ಯಧ್ವನಿ, ನೈವೇದ್ಯ, ಜೀವನ ಸಿದ್ದಿ, ಸಿದ್ದವಿನಾಯಕ, ನಮ್ಮೆಲ್ಲರ ನೆಹರೂ, ಬಾಬಾ ಪರೀದ್ ಮುಂತಾದವು.
ಗೌರವ, ಪ್ರಶಸ್ತಿ- ಪುರಸ್ಕಾರಗಳು
ದೀಪದಾರಿ ಮತ್ತು ನೆಲಮುಗಿಲು ಕೃತಿಗಳಿಗೆ ರಾಜ್ಯ ಸರ್ಕಾರದಿಂದ ಬಹುಮಾನ;
ಆಕಾಶಬುಟ್ಟಿ ಕೃತಿಗೆ ಮುಂಬಯಿ ರಾಜ್ಯ ಪ್ರಶಸ್ತಿ
೧೯೮೧ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ;
೧೯೮೯ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ;
೧೯೯೬-೯೮ರವರೆಗೆ ಭಾರತ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮಿರಿಟಸ್ ಫೆಲೋಷಿಪ್,
೧೯೯೬ ರಲ್ಲಿ ಹಾಸನದಲ್ಲಿ ಜರುಗಿದ ೬೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ;
೧೯೯೯ ರಲ್ಲಿ ಪಂಪ ಪ್ರಶಸ್ತಿ
ಚೆಂಬೆಳಕು ಇವರ ಅಭಿನಂದನಾ ಗ್ರಂಥ ಪ್ರಕಟವಾಗಿದೆ.
 

ಚಿದಾನಂದಮೂರ್ತಿ ಎಂ.
ಎಂ. ಚಿದಾನಂದಮೂರ್ತಿಯವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ೧೯೩೧ ಮೇ ೧೦ ರಂದು ಜನಿಸಿದರು. ತಂದೆ ಕೊಟ್ಟೂರಯ್ಯ, ತಾಯಿ ಪಾರ್ವತಮ್ಮ. ಇವರು ಆರಂಭಿಕ ಅಭ್ಯಾಸವು ಹಿರೇಕೋಗಲೂರು, ಸಂತೆಬೆನ್ನೂರುಗಳಲ್ಲಿ ನಡೆಯಿತು. ಇವರ ಇಂಟರ್ ಮಿಡಿಯೇಟ್ ಶಿಕ್ಷಣವು ದಾವಣಗೆರೆಯಲ್ಲಿ ಜರುಗಿತು. ಬಿ.ಎ. (ಅನರ್ಸ್) ಮತ್ತು ಕನ್ನಡ ಎಂ.ಎ. ಪದವಿ ಮತ್ತು ಪಿ.ಎಚ್.ಡಿ. ಅಧ್ಯಯನಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಜರುಗಿದವು ಬಿ.ಎ. ಮತ್ತು ಎಂ.ಎ. ಪದವಿಗಳಲ್ಲಿ ಮೊದಲನೆ ರ‍್ಯಾಂಕ್ ಗಳಿಸಿದರು. ಪ್ರಾರಂಭದಲ್ಲಿ ಇವರು ಪದವಿ ಕಾಲೇಜುಗಳಲ್ಲಿ ಆದ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ೧೯೫೭ರಲ್ಲಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. ಮಾನಸ ಗಂಗೋತ್ರಿಯ ಸ್ನಾತಕೋತ್ರರ ಕನ್ನಡ ವಿಭಾಗದಲ್ಲಿ ೧೯೬೦ ರಲ್ಲಿ ಅಧ್ಯಾಪಕರಾದರು. ೧೯೬೮ರಲ್ಲಿ ರೀಡರ್ ಆದರು ತದನಂತರ ಬೆಂಗಳೂರು ವಿಶ್ವವಿದ್ಯಾಲಯದ ಸೇವೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೯೦ ಅಕ್ಟೋಬರ್ ೧೦ ರಂದು ನಿವೃತ್ತರಾದರು. ೧೯೭೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸಮಾಡಿದ್ದಾರೆ. ಇದಲ್ಲದೆ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ೧೯೬೭-೯೮ರಲ್ಲಿ ಕನ್ನಡ ಸಂದರ್ಶಕ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಅಧ್ಯಯನದ ಸಲುವಾಗಿ ಕರ್ನಾಟಕ ವಿವಿಧ ಪ್ರಾಂತ್ಯಗಳನ್ನು ಅಧ್ಯಯನದ ಸಲುವಾಗಿ ಕರ್ನಾಟಕ ವಿವಿಧ ಪ್ರಾಂತ್ಯಗಳನ್ನು ಅಧ್ಯಯನದ ಸಲುವಾಗಿ ದೇಶವಿದೇಶಗಳನ್ನು ಸುತ್ತಿದ್ದಾರೆ. ಬ್ಲರ್ಕಿಯಲ್ಲಿ ಜರುಗಿದ ಅಮೇರಿಕನ್ ಓರಿಯಂಟಲ್ ಸೊಸೈಟಿಯ ವಾರ್ಷಿಕಾಧಿವೇಶನದಲ್ಲಿ ಫಿಲಿಡೆಲ್ಪಿಯಾದಲ್ಲಿ ನಡೆದ ಏಷಿಯನ್ ಸೆಮಿನಾರ್, ಸ್ಯಾನ್ ಪೋರ್ಡ್ ವಿಶ್ವವಿದ್ಯಾನಿಲಯದ ಐತಿಹಾಸಿಕ ಭಾಷಾವಿಜ್ಞಾನ ಈ ಮೊದಲಾಧ ಸಮ್ಮೇಳನಗಳ್ಲಿ ಇವರು ತಮ್ಮ ಪ್ರಬಂಧ ಮಂಡಿಸಿದ್ದಾರೆ.
ಗೋಕಾಕ ಚಳುವಳಿಯಲ್ಲಿ ಮಂಚೂಣಿಯಲ್ಲಿ ಇದ್ದವರಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕೃತಿಗಳು
ಭಾಷಾ ವಿಜ್ಞಾನದ ಮೂಲತತ್ವಗಳು, ವಾಗರ್ಥ, ಛಂದೋತರಂತ, ಸಂಶೋಧನೆ, ವಚನ ಸಾಹಿತ್ಯ, ಲಿಂಗಾಯತ ಧರ್ಮ, ಲಿಂಗಾಯತ ಅಧ್ಯಯನಗಳು,ಬಸವಣ್ಣ ಕರ್ನಾಟಕ ಭಾರತ, ಶೂನ್ಯ ಸಂಪಾದನೆಯನ್ನು ಕುರಿತು, ಸೂರ್ಯಗ್ರಹಣ, ಗ್ರಾಮೀಣ ಸ್ಥಾವರ ಜಂಗಮ, ನೇಪಾಳ ಕರ್ನಾಟಕ ಸಾಂಸ್ಕೃತಿಕ ಸಂಬಂಧ, ಬಸವಣ್ಣನವರು, ಅಪಾರ್ಥ ಅಕ್ರಮಗಳಿಗೆ ಒಳಗಾಗಿರುವ ಹಿಂದೂ ಧರ್ಮ ಮೊದಲಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೪ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ;
ಸಂಶೋಧನ ತರಂಗ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ;
ಭಾಷಾ ವಿಜ್ಞಾನದ ಮೂಲ ತತ್ವಗಳು ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ;
೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ;
೧೯೮೫ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೨ ರಲಲಿ ಬಸವ ಸಮಿತಿಯ ಸಾಹಿತ್ಯ ಶ್ರೀ ಪ್ರಶಸ್ತಿ;

ಚದುರಂಗ
ಚದುರಂಗರವರು ೧೯೧೬ ರ ಜನವರಿ ೧ ರಂದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ತಂದೆ ಮುದ್ದುರಾಜೇ ಅರಸು, ತಾಯಿ ಮರುದೇವಿ ಅಮ್ಮಣ್ಣಿ. ಇವರ ನಿಜನಾಮ ಎಂ. ಸುಬ್ರಹ್ಮಣ್ಯ ರಾಜೇ ಅರಸು. ಕನ್ನಡ ಸಾಹಿತ್ಯ ಲೋಕದಲ್ಲಿ ಚದುರಂಗ ಎಂಬ ಕಾವ್ಯನಾಮದಿಂದ ಚಿರಪರಿಚಿತರು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್‌ಮಿಡಿಯೇಟ್ ಕಾಲೆಜು ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ. ಬಿ.ಎ. ಪದವಿ ಪಡೆದುಕೊಂಡರು. ಇವರ ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಆದರೂ ಶಿಕ್ಷಣವನ್ನು ಪೂರ್ಣಗೊಳಿಸಲಾಗಲಿಲ್ಲ. ಸ್ವಾತಂತ್ರಯ ಚಳುವಳಿ, ಗಾಂಧಿವಾದ, ಮತ್ತು ವಿಚಾರಧಾರೆಗಳು ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ಕಥೆ, ನಾಟಕ, ಕಾದಂಬರಿ, ಅನುವಾದ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ೨೫ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದರೆ. ಚದುರಂಗರು ಚಲನಚಿತ್ರ ಕ್ಷೇತ್ರಲದ್ಲಿಯೂ ಪರಿಚಿತರು. ಪುಣೆಯಲ್ಲಿ ಸಿನಿಮಾ ತಂತ್ರದ ಬಗ್ಗೆ ಅಧ್ಯಯನವನ್ನು ಮಾಡಿದ್ದರು. ಇಂಗ್ಲಿಷಿನ ಮಾಯಾಚಿತ್ರದ ಸಹ ನಿರ್ದೇಶಕರಾಗಿ ಇವರು ದುಡಿದರು. ೧೯೯೮ ಅಕ್ಟೋಬರ್ ೧೯ ರಂದು ನಿಧನರಾದರು.

ಕೃತಿಗಳು
ಹೆಜ್ಜಾಲ, ವೈಶಾಖ, ಸರ್ವಮಂಗಳ, ಉಯ್ಯಾಲೆ, ಶವದಮನೆ, ಮೀನಿನ ಹೆಜ್ಜೆ, ಸ್ವಪ್ನಸುಂದರಿ, ಇಲಿಬೋನು, ಇಣುಕುನೋಟ, ಬಂಗಾರದ ಗೆಜ್ಜೆ, ಕೃಷ್ಣದೇವರಾಯ, ಕುಮಾರರಾಮ, ಬಿಂಬ, ನನ್ನರಸಿಕ, ಅಲೆಗಳು, ಕ್ವಾಟೆ, ಮೃಗಯಾ, ಬಣ್ಣದ ಬೊಂಬೆ ಮೊದಲಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೯೩ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿದೆ.
೧೯೭೮ ಮತ್ತು ೧೯೯೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ.ಎ
೧೯೮೨ರಲ್ಲಿ ವೈಶಾಖ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
ಇವರೇ ನಿರ್ಮಿಸಿದ ಸರ್ವಮಂಗಳಾ ಚಲನಚಿತ್ರ ರಾಜ್ಯ ಪ್ರಶಸ್ತಿ ಬಂದಿದೆ.
ಉಯ್ಯಾಲೆ ಚಿತ್ರದ ಕತೆ ಮತ್ತು ಸಂಭಾಷಣೆಗಾಗಿ ಪ್ರಶಸ್ತಿ ಲಭಿಸಿವೆ.
೧೯೯೪ ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 

ಚಂದ್ರಶೇಖರ್ ಪಾಟೀಲ್
ಚಂದ್ರಶೇಖರ ಪಾಟೀಲರು ಚಂಪಾ ಎಂದೇ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ಇವರು ಧಾರವಾಡ ಜಿಲ್ಲೆಯ ಹತ್ತೀಮತ್ತೂರು ಎಂಬಲ್ಲಿ ಜನಿಸಿದರು. ಹಾವೇರಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾಲಯಗಳಲ್ಲಿ ಎಂ.ಎ. ಪದವಿಗಳನ್ನು ಪಡೆದುಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಚಂದ್ರಶೇಖರ್ ಪಾಟೀಲರು ಕನ್ನಡ ದಲಿತ ಬಂಡಾಯ ಸಾಹಿತ್ಯಗಳ ಪ್ರಮುಖ ಕವಿಗಳು, ಕನ್ನಡ ದಲಿತ ಬಂಡಾಯ ಸಾಹಿತ್ಯ ಮಾತ್ರವಲ್ಲ, ಇಡೀ ಕನ್ನಡ ಸಾಹಿತ್ಯ ಕಂಡ ಅದ್ವೀತಿಯ ವೈಚಾರಿಕ ಪ್ರತಿಭೆ, ಇವರು ಸಂಕ್ರಮಣವೆಂಬ ಪತ್ರಿಕೆಯೊಂದರ ಸ್ಫಾಪಕ ಸಂಪಾದಕರು ಹೌದು. ಇಂದಿಗೂ ನಡೆಸುತ್ತಾ ಬಂದಿದ್ದಾರೆ. ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಕಾರ್ಯದರ್ಶಿಯಾಗಿಯೂ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರೊ. ಚಂದ್ರಶೇಖರ ಪಾಟೀಲ ಒಬ್ಬ ದಿಟ್ಟ ಹೋರಾಟಗಾರರು. ನಿಷ್ಪರ ಬಂಡಾಯ ಕವಿಗಳು, ಕನ್ನಡ ದಲಿತ ಮತ್ತು ಬಂಡಾಯ ಸಾಹಿತಿಗಳಲ್ಲಿ ಅವರೊಬ್ಬ ಪರಿಪೂರ್ಣ ವೈಚಾರಿಕ ಬಹು ಧೀಮಂತ ಕ್ರಾಂತಿಕಾರಿಗಳು. ಕಂಡದ್ದು ಕಂಡಂತೆ ಹೇಳುವ ನಿಷ್ಠುರವಾಧಿ, ಚಂದ್ರಶೇಖರ ಪಾಟೀಲರು ಜಯಪ್ರಕಾಶ ನಾರಾಯಣರ ನವ ನಿರ್ಮಾಣಾಕ್ರಾಂತಿ, ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿ ಸೆರೆಮನೆಗೂ ಹೋದರು. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕಕ್ಕೆ ೩೦ ಕ್ಕೂ ಹೆಚ್ಚು ಕೃತಿಗಳನ್ನು ಅಮೂಲ್ಯ ಕೊಡುಗೆಯಾಗಿ ನೀಡಿದ್ದಾರೆ.

ಕೃತಿಗಳು.
ಅತಿಥಿ, ಒಂದೇ ದಿನವಾದರೂ, ಹತ್ತೀಮತ್ತೂರು, ಹೋಗಿ ಬರ‍್ತೀನಜ್ಜಿ, ಹೂವು ಹೆಣ್ಣು ತಾರೆ, ಪಾರೋತಿ ಮಾಡಿದ ಮೂರುತಿ, ಬಂಡಾಯ, ಕುಂಟ ಕುಂಟ ಕುರುವತ್ತಿ, ಗೋಕರ್ಣದ ಗೌಡಶಾನಿ, ಕೊಡೆಗಳು, ಅಪ್ಪ ಕತ್ತಲ ರಾತ್ರಿ, ಬಾನುಲಿ, ಮಧ್ಯಬಿಂದು, ಹತ್ತೊಂಬತ್ತು ಕವನಗಳು, ಗಾಂಧಿಸ್ಮರಣೆ, ಓ ನನ್ನ ದೇಶ ಬಾಂಧವರೆ, ಸಂಕ್ರಮಣ ಕಾವ್ಯ, ಚಂಪಾಕಲಾ, ಮೊದಲಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೮೮ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ.
೨೦೦೪ ರಿಂದ ೨೦೦೮ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
 

ಜಯದೇವಿ ತಾಯಿ ಲಿಗಾಡೆ
ಜಯದೇವಿ ತಾಯಿ ಲಿಗಾಡೆಯವರು ೧೯೧೨ ಜೂನ್ ೨೩ ರಂದು ಸೊಲ್ಲಾಪುರದ ಶ್ರೀಮಂತ ಮನೆತನವೊಂದರಲ್ಲಿ ಜನಿಸಿದರು. ತಂದೆ ಮಡಿಕೆ ಚನ್ನಬಸಪ್ಪ, ತಾಯಿ ಸಂಗವ್ವ, ಇವರ ಮಾತೃ ಭಾಷೆ ಕನ್ನಡವಾದರೂ ಇವರಿಗೆ ಬಾಲ್ಯದಲ್ಲಿ ಮರಾಠಿಯಲ್ಲಿ ಶಿಕ್ಷಣ ದೊರೆಯಿತು. ಇವರು ಚೆನ್ನಮಲ್ಲಪ್ಪ ಮಹದೇವರಾಯ ಲಿಗಾಡೆಯವರೊಂದಿಗೆ ವಿವಾಹವಾದರು. ಇವರಿಗೆ ಮರಾಠಿ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಒಳ್ಳೆಯ ಪರಿಶ್ರಮವಿತ್ತು. ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಸಾಹಿತ್ಯ ಏಳಿಗಾಗಿ ಶ್ರಮಿಸಿದ ಧೀರ ಮಹಿಳೆ. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ೨೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರದ್ದು ದಾನಧರ್ಮದಲ್ಲೂ ಎತ್ತಿದ ಕೈ ಒಮ್ಮೆ ಇವರಿಗೆ ಬಹುಮಾನವಾಗಿ ಬಂದ ೪೦ ಸಾವಿರ ರೂಪಾಯಿಗಳನ್ನು ವಿದ್ಯಾಸಂಸ್ಥೆಗೆ ದಾನವಾಗಿ ನೀಡಿದರು. ಜಯದೇವಿ ತಾಯಿ ಲಿಗಾಡೆಯವರು ಉತ್ತಮ ಸಾಹಿತಿಯಂತೆ ಉತ್ಕಟ ಕನ್ನಡಾಭಿಮಾನಿಯೂ ಆಗಿದ್ದರು. ಇವರು ೧೯೮೬ ಜುಲೈ ೨೫ ರಂದು ನಿಧನರಾದರು.

ಕೃತಿಗಳು.
ಜಯಗೀತೆ, ತಾಯಿಯ ಪದಗಳು, ಶ್ರೀ ಸಿದ್ಧರಾಮೇಶ್ವರ ಪುರಾಣ, ತಾರಕ ತಂಬೂರಿ, ಮಹಾವೀರವಾಣಿ, ಬಂದೇವು ಕಲ್ಯಾಣಕ, ಸಾವಿರದ ಪದಗಳು, ಸಿದ್ದರಾಮ, ದಾನಮ್ಮ ದೇವಿಯತ್ರಿಪದಿಗಳು, ಸಿದ್ಧಲಿಂಗವಾಣಿ, ಅಣ್ಣ ಬಸವಣ್ಣ, ಶ್ರೀ ಸಿದ್ದರಾಮಾಂಚಿ ತ್ರಿವಿಧಿ, ಬಸವ ವಚನಾಮೃತ, ಶೂನ್ಯ ಸಂಪಾದನೆ, ಮೊದಲಾದವು.

ಗೌರವ, ಪ್ರಶಸ್ತಿ- ಪುರಸ್ಕಾರಗಳು
೧೯೬೮ ರಲ್ಲಿ ಮೈಸೂರು ರಾಜ್ಯ ಸಾಹಿತ್ಯ ಮತ್ತು ಲಲಿತ ಕಲಾ ಅಕಾಡೆಮಿ ಪ್ರಶಸ್ತಿ,
೧೯೭೪ ರಲ್ಲಿ ಮಂಡ್ಯದಲ್ಲಿ ಜರುಗಿದ ೪೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಣೆ
ಕರ್ನಾಟಕ ವಿಶ್ವವಿದ್ಯಾಲಯ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.
೧೯೬೮ ರಲ್ಲಿ ಸಿದ್ದರಾಮೇಶ್ವರ ಪುರಾಣಿ ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ದೇವರಾಜ ಬಹುದ್ದೂರ್ ಪ್ರಶಸ್ತಿ
೧೯೭೬ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್ ಪ್ರಶಸ್ತಿ ಲಭಿಸಿವೆ.
 

ದೇ ಜವರೇಗೌಡ
ದೇ. ಜವರೇಗೌಡರವರು ೧೯೧೮ರ ಜುಲೈ ೬ ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆಯಲ್ಲಿ ಜನಿಸಿದರು. ತಂದೆ ದೇವೇಗೌಡರು. ತಾಯಿ ಚೆನ್ನಮ್ಮ. ದೆ.ಜೇ.ಗೌ ಇವರ ಕಾವ್ಯನಾಮ. ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿ ೧೯೪೧ರಲ್ಲಿ ಬಿ.ಎ. ಅನರ‍್ಸ್ ಪದವಿ ಪಡೆದರು. ಮೈಸೂರಿನಲ್ಲಿ ಕುವೆಂಪುರವರ ಶಿಷ್ಯರಾಗಿದ್ದ ಇವರು ೧೯೪೩ರಲ್ಲಿ ಎಂ.ಎ. ಪದವಿ ಪಡೆದರು. ಸ್ವಲ್ಪಕಾಲ ಗುಮಾಸ್ತರಾಗಿ ದುಡಿದರು. ಗುಮಾಸ್ತನ ಕೆಲಸವನ್ನು ತೊರೆದು ೧೯೪೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿದರು. ೧೯೫೫ರಲ್ಲಿ ಉಪ ಪ್ರಾಧ್ಯಾಪಕರಾದರು. ಕುಲಪತಿಯಾಗಿ ಅಧಿಕಾರ ವಹಿಸಿಕೊಮಡ ನಂತರ ವಿಶ್ವವಿದ್ಯಾಲಯದ ಸರ್ವಾಂಗೀಣ ಪ್ರಗತಿಗೆ ಅಪಾರವಾಗಿ ಶ್ರಮಿಸಿದರು. ಇವರು ಕುವೆಂಪು ಹೆಸರಿನಲ್ಲಿ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ನ್ನು ಸ್ಥಾಪಿಸಿದರು. ಅದರ ಮೂಲಕ ಕುವೆಂಪು ಅವರ ಸಾಹಿತ್ಯ ಸಂಶೋಧನೆಗಳ ಅಧ್ಯಯನ ಬಿಂದುವನ್ನಾಗಿ ಬೆಳೆಸಿದ್ದಾರೆ. ಅನಂತರ ದೇ.ಜ.ಗೌ. ಟ್ರಸ್ಟನ್ನು ಸ್ಥಾಪಿಸಿದ್ದಾರೆ. ಇವರ ಬರವಣೆಗೆಯ ಹಾಗೂ ಗೌರವಧನಗಳನ್ನು ಧಾರೆಯೆರೆದು ಅನೇಕ ಬಡ ವಿದ್ಯಾರ್ಥಿಗಳ ಏಳಿಗೆಗೆ ಕಾರಣರಾಗಿದ್ದಾರೆ. ದೇ.ಜವರೇಗೌಡ ಅವರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಇವರು ಕೆಲ ಕಾಲ ಪ್ರಬುದ್ಧ ಕರ್ನಾಟಕದ ಸಂಪಾದಕರಾಗಿದ್ದರು. ಇವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದರು. ಇಂದಿಗೂ ಕನ್ನಡದ ಕೆಲಸಗಳಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ಇವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು
ಕಬ್ಬಿಗರ ಕಾವ್ಯ, ಗಿರಿಜಾ ಕಲ್ಯಾಣ ಮಹಾಪ್ರಬಂಧಂ, ರುಕ್ಮಾಂಗದ ಚರಿತ್ರೆ, ಜೈಮಿನಿಭಾರತ ಸಂಗ್ರಹ, ಬೆಂಗಳೂರು ಕೆಂಪೇಗೌಡ, ಜಾನಪದ ಸೌಂದರ್ಯ, ಜಾನಪದ ವಾಹಿನಿ, ಯೇಸು ವಿಭೀಷಣರ ನಾಡಿನಲ್ಲಿ ಮುಂತಾದವು.

ಗೌರವ ಪ್ರಶಸ್ತಿ ಪುರಸ್ಕಾರಗಳು.
೧೯೬೭ ರಲ್ಲಿ ಪುನರುತ್ಥಾನ ಕೃತಿಯ ಅನುವಾದಕ್ಕೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಲಭಿಸಿದೆ.
೧೯೭೦ ರಲ್ಲಿ ಬೆಂಗಳುರಿನಲ್ಲಿ ಜರುಗಿದ ೪೭ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೭೪ ರಲ್ಲಿ ಕುರುಕ್ಷೇತ್ರದಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ವಿದ್ಯಾಲಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು.
೧೯೭೫ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರ ಡಾಕ್ಟೋರೇಟ್ ನೀಡಿ ಗೌರವಿಸಿತು.
೧೯೭೯ ರಲ್ಲಿ ತಿರುವಾಂಕೂರಿನ ದ್ರಾವಿಡ ಭಾಷಾ ವಿಜ್ಞಾನ ಸಂಸ್ಥೆಯ ಸೀನಿಯರ್ ಫೆಲೋಷಿಪ್ ಗೌರವ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ, ಡಿ.ಲಿರ್ಟ ಪದವಿ ನೃಪತುಂಗ ಪ್ರಶಸ್ತಿ ಲಭಿಸಿವೆ.
ನಮ್ಮ ನಾಡೋಜ, ರಸಷಷ್ಠಿ, ೭೦ ಹೊಸ್ತಿಲಲ್ಲಿ, ಅಂತಃಕರಣ ಇವು ಅಭಿನಂದನಾ ಗ್ರಂಥಗಳು.

ಶಂ.ಬಾ. ಜೋಶಿ
ಶಂ.ಬಾ.ಜೋಶಿಯವರು ೧೮೯೬ ಜನವರಿ ೪ ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರಿನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಶಂಕರರಾವ್ ಬಾಳದೀಕ್ಷಿತ ಜೋಶಿ. ತಂದೆ ಬಾಳದೀಕ್ಷಿತ ಜೋಶಿ. ತಾಯಿ ಉಮಾಬಾಯಿ. ಸ್ವಂತ ಊರಿನಲ್ಲಿಯೇ ಮುಲ್ಕಿಯವರೆಗೆ ಓದಿದವರು. ಅನಂತರ ಪ್ರಾಥಮಿಕ ಶಿಕ್ಷಕರ ತರಬೇತಿ ಮುಗಿಸಿ ಚಿಕ್ಕೋಡಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾದು. ಅನಂತರ ಧಾರವಾಡದ ರಾಷ್ಟ್ರೀಯ ವಿದ್ಯಾಲಯ, ಕರ್ನಾಟಕ ಹೈಸ್ಕೂಲ್, ವಿಕ್ಟೋರಿಯಾ ಹೈಸ್ಕೂಲಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಲೋಕದಲ್ಲಿ ಶಂಬಾ ಎಂದೇ ಚಿರಪರಿಚಿತರು. ಇವರ ಮಾತೃಭಾಷೆ ಮರಾಠಿ. ೧೯೨೪ರಲ್ಲಿ ಅಸಹಕಾರ ಚಳುವಳಿ ಇವರ ಮೇಲೆ ಪ್ರಭಾವ ಬೀರಿ ನೌಕರಿ ಬಿಟ್ಟರು. ತದನಂತರ ಪತ್ರಿಕೋದ್ಯಮದತ್ತ ಆಸಕ್ತಿ ಸೆಳೆಯಿತು. ಧಾರವಾಡದ ಕರ್ಮವೀರ, ಜಯ ಕರ್ನಾಟಕ ಪತ್ರಿಕೆಗಳ ಸಂಪಾದಕರಾಗಿ ಮಂಡಳಿಯಲ್ಲಿ ಸೇರಿದರು. ಅನಂತರ ತಿಲಕರ ಕೇಸರಿ ಪತ್ರಿಕೆಯಿಂದ ಪ್ರಭಾವಿತರಾದರು. ಜೋಶಿಯವರಿಗೆ ಅರವಿಮದರ ರಾಜಕೀಯ ಆಧ್ಯಾತ್ಮಿಕತೆಯು ಪ್ರಭಾವ ಬೀರಿತು. ದೀರ್ಘ ಸೇವೆಯ ನಂತರ ಇವರು ಸಂಶೋಧನೆಯಲ್ಲಿ ನಿರತರಾದರು. ಇವರು ೧೯೯೧ ರ ಸೆಪ್ಟೆಂಬರ್ ೨೮ರಂದು ನಿಧನರಾದರು.


ಕೃತಿಗಳು
ಅರವಿಂದರ ಜೀವನ ಚರಿತ್ರೆ, ಉಪನಿಷದ್ರಹಸ್ಯ, ಕಣ್ಮರೆಯಾದ ಕನ್ನಡ ಕರ್ಣನ ಮೂರು ಚಿತ್ರಗಳು, ಕಂನಾಡ ಕತೆಯಲ್ಲಿ, ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ, ಭಾಷೆ ಮತ್ತು ಸಂಸ್ಕೃತಿ, ಋಗ್ವೇದಸಾರ, ಮಾನವಧರ್ಮದ ಆಕೃತಿ, ನಾಗಪ್ರತಿಮೆ, ಕಂನಾಡವರ ಗತಿಸ್ಥಿತಿ, ಪ್ರವಾಹ ಪತಿತರ ಕರ್ಮ ಹಿಂದೂ ಎಂಬ ಧರ್ಮ, ಬುದ್ಧನ ಜಾತಕ, ಬಿತ್ತಿದ್ದನ್ನು ಬೆಳಕೊ? ಶಂಬಾ ಕೃತಿ ಸಂಪುಟ (೬ ಸಂಪುಟಗಳಲ್ಲಿ) ಶಂಬಾ ಅವರ ಆಯ್ದ ಲೇಖನಗಳು, ಹಾಲಮತ ದರ್ಶನ, ಯಕ್ಷಪ್ರಶ್ನೆ, ಆಗ್ನಿವಿದ್ಯೆ, ಬೆಳಕ ಕಥಾಮೃತಸಾರ, ಮಹಾರಾಷ್ಟ್ರದ ಮೂಲ, ಶಿವರಹಸ್ಯ, ಋಗ್ವೇದಸಾರ, ಕನ್ನಡದ ನೆಲೆ, ಕಂನಡದ ಹುಟ್ಟು, ಮಕ್ಕಳ ಒಡಪುಗಳು ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೭೦ ರಲ್ಲಿ ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
೧೯೭೩ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.
೧೯೮೧ರಲ್ಲಿ ಮಡಿಕೇರಿಯಲ್ಲಿ ಜರುಗಿದ ೫೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
 

ತ್ರಿವೇಣಿ.
ತ್ರಿವೇಣಿಯವರು ೧೯೨೮ರ ಸೆಪ್ಟೆಂಬರ್ ೧ ರಂದು ಜಿ. ಎಂ. ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿಗಳ ಮಗಳಾಗಿ ಜನಿಸಿದರು. ಇವರ ನಿಜನಾಮ ಅನಸೂಯ. ಬಿ.ಎಂ. ಕೃಷ್ಣಸ್ವಾಮಿಯವರು ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರ ಸಹೋದರ. ಎಂ.ಕೆ.ಇಂದಿರಾರವರು ತ್ರೀವೇಣಿ ಎಂದು ಕರೆದರು. ಅದೇ ಹೆಸರು ಮುಂದೆ ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಯಿತು. ತ್ರೀವೇಣಿಯವರು ಮಂಡ್ಯದ ಪ್ರೌಢಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮುಗಿಸಿ ಮಹಾರಾಜ ಕಾಲೇಜಿನಲ್ಲಿ ೧೯೪೭ರಲ್ಲಿ ಮನಶಾಸ್ತ್ರ ವಿಷಯದಲ್ಲಿ ಬಿ.ಎ. ಪದವಿ ಗಳಿಸಿಕೊಂಡರು. ಕೆಲವು ಕಾಲ ಮಂಡ್ಯದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ೧೯೫೦ರಲ್ಲಿ ತಮ್ಮ ಸಮೀಪದ ಸಂಬಂಧಿ ಎಸ್.ಎಸ್. ಶಂಕರ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರ ಬರವಣಿಗೆಗೆ ಪತಿಯ ಪ್ರೋತ್ಸಾಹವು ದೊರೆಯಿತು. ತ್ರೀವೇಣಿಯವರ ಕಾದಂಬರಿಗಳು ಸಾಮಾಜಿಕ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದವುಗಳು. ಬೆಳ್ಳಿಮೋಡ, ಶರಪಂಜರ, ಹಣ್ಣೆಲೆ ಚಿಗುರಿದಾಗ, ಬೆಕ್ಕಿನ ಕಣ್ಣು, ಹೂವು ಹಣ್ಣು, ಕಂಕಣ ಇವು ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. ಇವರ ಅಪೂರ್ಣ ಕಾದಂಬರಿ ಅವಳ ಮಗಳು ಕೃತಿಯು ಎಂ.ಸಿ. ಪದ್ಮಾರವರಿಂದ ಪೂರ್ಣಗೊಂಡಿತು. ಇವರು ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ನಿಧನರಾದರು.
ಕೃತಿಗಳು
ಹೂವು ಹಣ್ಣು, ಸೋತು ಗೆದ್ದವಳು, ದೂರದ ಬೆಟ್ಟ, ಮೊದಲ ಹೆಜ್ಜೆ ಹೃದಯಗೀತ, ಕಂಕಣ, ಮುಕ್ತಿ ಅವಳ ಮನೆ, ವಸಂತಗಾನ, ಶರಪಂಜರ, ಅವಳ ಮಗಳು, ಎರಡು ಮನಸ್ಸು ಅಪಸ್ವರ, ಬೆಕ್ಕಿನ ಕಣ್ಣು, ಕೀಲುಗೊಂಬೆ, ಮುಚ್ಚಿದ ಬಾಗಿಲು, ಬೆಳ್ಳಿಮೋಡ, ಬಾನು ಬೆಳಗಿತು, ತಾವರೆಯ ಕೊಳ, ಕಾಶೀಯಾತ್ರೆ, ಹಣ್ಣೆಲೆ ಚಿಗುರಿದಾಗ, ಹೆಂಡತಿಯ ಹೆಸರು, ಸಮಸ್ಯೆಯ ಮಗು ಮೊದಲಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೪೮ರಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ. ಪದವಿ, ದೇವರಾಜ ಬಹದ್ದೂರ್ ಪ್ರಶಸ್ತಿ
ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿವೆ.
 

ಹೆಚ್. ತಿಪ್ಪೇರುದ್ರಸ್ವಾಮಿ
ಹೆಚ್. ತಿಪ್ಪೇಸ್ವಾಮಿಯವರು ೧೯೨೮ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು. ಹೊನ್ನಾಳಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ತೀರ್ಥಹಳ್ಳಿಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ೧೯೫೧ರಲ್ಲಿ ಕನ್ನಡ ಬಿ.ಎ. (ಅನರ್ಸ್), ೧೯೫೨ರಲ್ಲಿ ಕನ್ನಡ ಎಂ.ಎ. ಪದವಿಗಳನ್ನು ಪಡೆದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾಗಿ ಸೇರಿದರು. ತದನಂತರ ೧೯೬೪ರಿಮದ ೧೯೭೩ ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೭೩-೭೫ರವರೆಗೆ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ದುಡಿದರು. ೧೯೭೫-೮೪ರವರೆಗೆ ಶಿವಮೊಗ್ಗ ಸ್ನಾತಕೋತ್ರತ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿಯೂ ದುಡಿದರು. ಅನಂತರ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕುವೆಂಪು, ಮಾಸ್ತಿ, ಬೇಂದ್ರೆ, ಡಿ.ವಿ.ಜಿ. ಮುಂತಾದ ಸಾಹಿತಿಗಳು ಇವರ ಮೇಲೆ ಪ್ರಭಾವ ಬೀರಿದ್ದಾರೆ. ಮಾನಸ ಗಂಗೋತ್ರಿಯ ಗಾಂಧಿಭವನದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. ಇವರ ಶರಣರ ಅನುಭವ ಸಾಹಿತ್ಯ ಡಾಕ್ಟರೇಟ್ ಪಡೆದ ಕೃತಿ ಇವರು ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ೧೯೯೪ ರಲ್ಲಿ ನಿಧನರಾದರು.

ಕೃತಿಗಳು
ಕದಳಿಯ ಕರ್ಪೂರ, ಸತ್ಯಾಶ್ರಯ ಸಾಮ್ರಾಜ್ಯ, ತೌಲನಿಕ ಕಾವ್ಯ ಮೀಮಾಂಸೆ, ವಿಜಯಕಲ್ಯಾಣ, ವಚನ ವಿರೂಪಾಕ್ಷ, ನೆರಳಿನಾಚೆಯ ಬೆಳಗು, ಕರ್ತಾರನ ಕಮ್ಮಟ, ವಿಧಿಪಂಜರ, ತಪೋರಂಗ, ಶಿಸ್ತುಗಾರ ಶಿವಪ್ಪನಾಯಕ, ಪರಿಪೂರ್ಣದೆಡೆಗೆ, ಕನ್ನಡ ಅನುಭಾವ ಸಾಹಿತ್ಯ, ಜ್ಯೋತಿ ಬೆಳಗುತಿದೆ. ನಿಜಗುಣ ಶಿವಯೋಗಿ, ಸಿದ್ದರಾಮ ಚರಿತೆ, ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಅಂಡಯ್ಯ, ಬಸವ ಕಲ್ಯಾಣ, ಚೆನ್ನಬಸವಣ್ಣ, ಶ್ರೀ ಶರಣ ಚರಿತ ಮಾನಸ, ಎ.ಆರ್. ಕೃಷ್ಣಶಾಸ್ತ್ರ ಜೀವನ ಸಾಧನೆ, ಚಾಮರಸ, ಭೀಮಕವಿ, ವಚನಗಳಲ್ಲಿ ವೀರಶೈವಧರ್ಮ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟೋರೇಟ್ ಪದವಿ
೧೯೬೯ರಲ್ಲಿ ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ
೧೯೮೫ ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
 

ತಿರುಮಲೆ ತಾತಾಚಾರ್ಯ ಶರ್ಮ
ತಿರುಮಲೆ ತಾತಾಚಾರ್ಯ ಶರ್ಮರವರು ೧೮೯೬ ನವೆಂಬರ್ ೨೭ ರಂದು ಚಿಕ್ಕಬುಳ್ಳಾಪುರದಲ್ಲಿ ಜನಿಸಿದರು. ತಂದೆ ಶ್ರೀನಿವಾಸ ತಾತಾಚಾರ್ಯ, ತಾಯಿ ಜಾನಕಿ ತಿರುಮಲೆ ಎಂಬುದು ಮನೆತನದ ಹೆಸರು ಪ್ರೌಢಶಾಲಾ ವ್ಯಾಸಂಗವನ್ನು ಹಾಸನದಲ್ಲಿ ನಡೆಸಿದರು. ಪದವಿ ವ್ಯಾಸಂಗ ಮುಂದುವರಿಸದೆ ಬೆಂಗಳೂರಿಗೆ ಆಗಮಿಸಿದರು. ೧೯೧೯ರಲ್ಲಿ ಭಾರತ ಸರ್ಕಾರ ಶಾಸನ ಇಲಾಖೆಯ ಉದಕಮಂಡಲದಲ್ಲಿ ತೆಲುಗು ಕನ್ನಡ ಸಹಾಯಕರಾಗಿ ಕೆಲಸಕ್ಕೆ ಸೇರಿದರು.
ದೇಶದಾದ್ಯಂತ ಅಸಹಕಾರ ಚಳುವಳಿ ತೆಲಯೆತ್ತಿತ್ತು. ಇದರ ಕರೆಗೆ ಓಗೊಟ್ಟು ೧೯೨೩ ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು. ಗಾಂಧಿಜೀಯವರ ಸಲಹೆಯಂತೆ ೧೯೨೫ರಲ್ಲಿ ತುಮಕೂರಿನಿಂದ ಪ್ರಕಟವಾಗುತ್ತಿದ್ದ ಮೈಸೂರು ಕ್ರಾನಿಕಲ್ ಪತ್ರಿಕೆಯನ್ನು ವಹಿಸಿಕೊಮಡು ಅದನ್ನು ವಿಶ್ವಕರ್ನಾಟಕ ಎಂಬ ಹೆಸರಿನಿಂದ ವಾರಪತ್ರಿಕೆಯನ್ನಾಗಿ ಪ್ರಕಟಿಸಿದರು. ತದನಂತರ ೧೯೩೪ರಲ್ಲಿ ಇದು ದಿನಪತ್ರಿಕೆಯಾಗಿ ಪ್ರಕಟವಾಗಿಯಿತು. ಗಾಂಧೀಜಿಯವರ ಆತ್ಮಕತೆಯನ್ನು ಕನ್ನಡದಲ್ಲಿ ಮೊದಲಿಗೆ ಪ್ರಕಟಿಸಿದ ಕೀರ್ತಿ ವಿಶ್ವ ಕರ್ನಾಟಕ ಪತ್ರಿಕೆಗೆ ಸಲ್ಲುತ್ತದೆ. ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ ಶರ್ಮರವರು ಕೆಲಕಾಲ ಕಾರಾಗೃಹ ವಾಸವನ್ನು ಅನುಭವಿಸಿದರು. ಇವರು ಕನ್ನಡ ಇಂಗ್ಲಿಷ್, ಸಂಸ್ಕೃತ ಪ್ರಾಕೃತ, ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. ಇತಿಹಾಸವನ್ನು ಕುರಿತಂತೆ ನೂರಾರು ಲೇಖನಗಳನ್ನು ಹತ್ತಾರು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ಪ್ರಸಿದ್ಧ ಪತ್ರಿಕೋದ್ಯಮಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಾಹಿತಿಯಾದ ಇವರು ೭೬ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

ಕೃತಿಗಳು:
ಶಾಸನಗಳಲಿ ಕಂಡುಬರುವ ಕನ್ನಡ ಕವಿಗಳು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ವಿಕ್ರಾಂತ ಭಾರತ, ಹೈದರ್ ನಾಮೆ, ಕೈಲಾಸಂ ಜೋಕುಗಳು, ಕರ್ನಾಟಕ ಕೈಪಿಡಿ, ಮಾಸ್ತಿಯವರ ಮನೋಧರ್ಮ, ಸರ್.ಎಂ. ವಿಶ್ವೇಶ್ವರಯ್ಯ ಮುಂತಾದವು.

ಗೌರವ, ಪ್ರಶಸ್ತಿ-ಪುರಸ್ಕಾರಗಳು;
೧೯೪೭ ರಿಂದ ೧೯೪೯ ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ
೧೯೪೩ ರಲ್ಲಿ ಮೈಸೂರು ಪತ್ರಿಕೋದ್ಯೋಗಿಗಳ ಸಂಘದ ಅಧ್ಯಕ್ಷರಾಗಿದ್ದರು.
೧೯೪೭ ರಲ್ಲಿ ಕಾಸರಗೋಡಿನಲ್ಲಿ ಜರುಗಿದ ೩೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಆರ್.ಆರ್. ದಿವಾಕರ
ದಿವಾಕರ ರಂಗರಾವ್ ರಾಮಚಂದ್ರ ಇವರ ಪೂರ್ಣ ಹೆಸರು. ಇವರು ೧೮೯೪ರ ಸೆಪ್ಟೆಂಬರ್ ೩೦ ರಂದು ಧಾರವಾಡದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ರಾಮಚಂದ್ರ ತಾಯಿ, ಸೀತಾ, ಪ್ರಾತಮಿಕ ಹಂತದ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿ ನಂತರ ಬೆಳಗಾವಿ, ಪೂನಾ ಮತ್ತು ಮುಂಬಯಿಗಳಲ್ಲಿ ಶಿಕ್ಷಣ ಪಡೆದು ಎಂ.ಎ. ಪದವೀಧರಾದರು. ಅನಂತರ ಇಂಗ್ಲೀಷ್ ಅಧ್ಯಾಪಕರಾದರು. ಆರಂಭದಿಂದಲೂ ತಿಲಕ್, ಶ್ರೀ ಅರವಿಂದರಂತಹ ಮಹಾನ್ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿದ್ದ ದಿವಾಕರರು ವೃತ್ತಿಯನ್ನು ತ್ಯಜಿಸಿ ೧೯೨೦ರಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರವೇಶಿಸಿದರು. ಗಾಂಧೀಜಿಯವರ ಕರೆಗೆ ಓಗೊಟ್ಟು ಅಸಹಕಾರ ಆಂದೋಲನದಲ್ಲಿ ಧುಮಿಕಿದರು. ಈ ವಿಷಯವಾಗಿ ಹಲವಾರು ಬಾರಿ ಸೆರೆಮನೆವಾಸವನ್ನು ಸಹ ಅನುಭವಿಸಿದರು.
೧೯೨೧ರಲ್ಲಿ ಕರ್ಮವೀರ ವಾರಪತ್ರಿಕೆಯನ್ನು ಪ್ರಾರಂಭಿಸಿ ತೀಕ್ಷ್ಣವಾದ ಲೇಖನಗಳನ್ನು ಬರೆದು ಜನಜಾಗೃತಿ ಮುಡಿಸಲು ಯತ್ನಿಸಿದರು. ೧೯೨೮ ರಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಪುಸ್ತಕಗವನ್ನು ಬರೆದು ಪ್ರಕಟಿಸಿದರು. ಇವರು ೧೯೪೨ರಲ್ಲಿ ಚಲೇಜಾವ್ ಚಳುವಳಿಯಲ್ಲಿ ಅದ್ವಿತೀಯವಾದ ಪಾತ್ರವಹಿಸಿ ಕರ್ನಾಟಕದಲ್ಲಿ ಈ ಆಂದೋಲನದ ಸೂತ್ರಧಾರರೆನಿಸಿದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದರು. ಘಟನಾ ಸಮಿತಿ ಅಧ್ಯಕ್ಷರಾಗಿ ಭಾರತದ ಸಂವಿಧಾನದ ರೂಪಕರಾದರು. ಸ್ವಾತಂತ್ರ್ಯ ಬಂದ ನಂತರ ಕೇಂದ್ರ ಸರ್ಕಾರದ ಸುದ್ದಿ ಶಾಖೆ ಮಂತ್ರಿಯಾಗಿ ೧೯೪೮ರಿಂದ ೫೨ರವರೆಗೆ ಸೇವೆ ಸಲ್ಲಿಸಿದರು. ೧೯೫೨ರಿಂದ ೫೭ ರ ಅವಧಿಯಲ್ಲಿ ಬಿಹಾರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದರು. ೧೯೬೨ರಿಂದ ೬೮ ರವರೆಗೆ ರಾಜ್ಯ ಸಭೆಯ ಸದಸ್ಯರಾಗಿದ್ದರು.
ಆರಂಭದಲ್ಲಿ ಗಾಂಧಿಜಿಯವರ ಪ್ರಭಾವಕ್ಕೊಳಗಾಗಿದ್ದ ದಿವಾಕರರು ಗಾಂಧೀಜಿ ಹಾಗೂ ಸತ್ಯಾಗ್ರಹದ ಬಗ್ಗೆ ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಇವರು ಗಾಂಧೀ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದರು.
ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಿಂತಕ, ಲೇಖಕ, ಆಡಳಿತಗಾರ, ರಾಜಕಾರಣಿ ಹೀಗೆ ಬಹುಮುಖ ಪ್ರತಿಭೆಯೊಂದಿದ್ದ ಇವರು ಪತ್ರಿಕಾರಂಗದಲ್ಲಿ ಹಿರಿಯ ವ್ಯಕ್ತಿಗಳಾಗಿದ್ದ ಇವರು ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ ಈ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾಗಿದ್ದರು. ಇವರು ೧೯೯೦ರಲ್ಲಿ ನಿಧನರಾದರು.
ಕೃತಿಗಳು:
ವಚನ ಶಾಸ್ತ್ರ ರಹಸ್ಯ, ನಾಗರೀಕ, ಅಂತರಾತ್ಮನಿಗೆ, ವಿಶ್ವಾತ್ಮನಿಗೆ, ಸೆರೆಯಮರೆಯಲ್ಲಿ, ಉಪನಿಷತ್ ಪ್ರಕಾಶ, ಉಪನಿಷತ್, ಕಥಾವಳಿ, ಗೀತೆಯ ಗುಟ್ಟು ಕರ್ಮಯೋಗ, ಹರಿಭಕ್ತ ಸುಧೆ, ಮಹಾತ್ಮಕ ಮನೋರಂಗ ಇತ್ಯಾದಿ.
ಇಂಗ್ಲೀಷಿನಲ್ಲಿ: ಸತ್ಯಾಗ್ರಹ, ಗ್ಲಿಂಪ್ಸಸ್ ಆಫ್ ಗಾಂಧೀಜಿ, ಉಪನಿಷದ್ಸ್ ಇನ್ ಸ್ಟೋರಿ ಅಂಡ್ ಡಯಲಾಗ್, ಭಗವಾನ್ ಬುದ್ದ ಇತ್ಯಾದಿ
ಸಂಪಾದಿತ: ಬಿಹಾರ್ ಥ್ರೈ ದಿ ಎಜಸ್, ಕರ್ನಾಟಕ ಥ್ರೂ ದಿ ಏಜಸ್

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಇವರ ಸಾಹಿತ್ಯ ಸೇವೆಯನ್ನು ಮೆಚ್ಚಿ ಕನ್ನಡನಾಡು ೧೯೩೮ರಲ್ಲಿ ಬಳ್ಳಾರಿಯಲ್ಲಿ ಜರುಗಿದ ೨೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರಿಗೆ ವಹಿಸಿತುತ.
೧೯೯೦ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟೊರೇಟ್ ಪದವಿ ನೀಡಿದೆ.
 

ದಿನಕರ ದೇಸಾಯಿ
ದಿನಕರ ದೇಸಾಯಿಯವರು ೧೯೦೯ ಸೆಪ್ಟೆಂಬರ್ ೧೦ ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಹೊನ್ನಕೇರಿಯಲ್ಲಿ ಜನಿಸಿದರು. ತಂದೆ ದತ್ತಾತ್ರೇಯ ದೇಸಾಯಿ, ತಾಯಿ ಅಂಬಿಕಾ ದೇಸಾಯಿ. ತಂದೆ ಉಪಾಧ್ಯಾಯ ವೃತ್ತಿಯಲ್ಲಿದ್ದರು. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿಯೇ ಬೆಳೆದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣವನ್ನು ಅಂಕೋಲದ ಆಲಗೆರಿಯಲ್ಲಿ ಮುಗಿಸಿದರು. ಅನಂತರ ಅಂಕೋಲ ಮತ್ತು ಕಾರವಾರಗಳಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಬೆಂಗಳೂರಿನಲ್ಲಿ ಪದವಿ, ಮುಂಬಯಿಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ವ್ಯಾಸಂಗವನ್ನು ಏಕಕಾಲದಲ್ಲಿಯೇ ಮಾಡಿದರು. ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ರಜತ ಪದಕ ಪಡೆದರು.
ಸ್ನಾತಕೋತ್ತರ ಹಾಗೂ ಕಾನೂನು ಪದವಿಗಳನ್ನು ಗಳಿಸಿದ ಇವರಿಗೆ ಹಲವು ಉದ್ಯೋಗಗಳ ಅವಕಾಶವಿತ್ತು. ಆದರೆ ಇವರು ಸಮಾಜ ಸೇವೆಲಯಲ್ಲಿ ಆಸಕ್ತಿಯನ್ನು ಹೊಂದಿದ್ದರಿಂದ ಸಮಾಜ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಗೋಪಾಕೃಷ್ಣ ಗೋಖಲೆಯವರು ಗವರ್ನರ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಿದರು. ಮುಂಬಯಿ ಪ್ರಾಂತ್ಯದ ಟ್ರೇಡ್ ಯೂನಿಯನ್ ಕಾರ್ಯದರ್ಶಿ, ಕಡಲ ಕಾರ್ಮಿಕರ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು. ಕಾರ್ಮಿಕ ಸಂಘದ ನಾಯಕರಾಗಿ ೧೯೪೬ ರಲ್ಲಿ ಡೆನ್ಮಾರ್ಕ್ ಮತ್ತು ಅಮೇರಿಕಾಗಳಲ್ಲಿ ನಡೆದ ಮಹಾಅಧಿವೇಶನಗಳಲ್ಲಿ ಪಾಲ್ಗೊಂಡರು. ೧೯೪೮-೬೧ರಲ್ಲಿ ಮುಂಬಯಿ ನಗರದ ಪಾಲಿಕೆ ಸದಸ್ಯರಾಗಿಯೂ ಇವರು ಸೇವೆಯನ್ನು ಸಲ್ಲಿಸಿದರು. ಅಂಕೋಲದಲ್ಲಿ ರೈತಕೂಟ ಮತ್ತು ಕೆನಡಾ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಿದರೂ ಮುಂಬಯಿಯಲ್ಲಿ ವಾಸವಿದ್ದರೂ ಕೂಡ ಇವರ ಹೃದಯ ಸದಾ ಹಂಬಲಿಸುತ್ತಿದ್ದುದ್ದು ಉತ್ತರ ಕನ್ನಡ ಜಿಲ್ಲೆಯತ್ತ ರೈತರನ್ನು ಒಂದುಗೂಡಿಸಿ ಗೇಣಿ ಪದ್ಧತಿಯಲ್ಲಿದ್ದ ಸಾಮಾಜಿಕ ಅನ್ಯಾಯಗಳನ್ನು ಪ್ರತಿಭಟಿಸಿದರು. ೧೯೬೭ರಲ್ಲಿ ಲೋಕಸಭಾ ಸದಸ್ಯರಾಗಿ ತಮ್ಮ ವಾದಗಳ ಮುಖಾಂತರ ಜನರ ಹಿತಾಸಕ್ತಿ ಕಾಪಾಡಲು ತೀವ್ರ ಹೋರಾಟ ನಡೆಸಿದರು. ಈ ಹೋರಾಟಕ್ಕೆ ಬೆಂಬಲವಾಗಿ ಜನಸೇವಕ ಎಂಬ ವಾರ ಪತ್ರಿಕೆಯನ್ನು ಕೂಡ ಪ್ರಕಟಿಸಿ ಜನ ಜಾಗೃತಿಯನ್ನುಂಟುಮಾಡಿದರು. ಇವರು ೧೯೮೨ರ ನವೆಂಬರ್ ೬ ರಂದು ಮುಂಬಯಿಯಲ್ಲಿ ನಿಧನರಾದರು.

ಕೃತಿಗಳು
ಪ್ರಪಂಚದ ಕೆಲಸಗಾರರು, ಪ್ರೈಮರಿ ಎಜುಕೇಷನ್ ಇನ್ ಇಂಡಿಯಾ, ಟುವರ್ಡ್ಸ್ ಲಿಟರೇಟ್ ಬಾಂಬೇ, ಲ್ಯಾಂಡ್ ರೇಂಟ್ಸ್ ಇನ್ ನಾತ್ ಕೆನರಾ, ಎಮಾಂಗ್ ಇಂಡಿಯನ್ ಗೇಮನ್ ಇನ್ ಗ್ರೇಟ್ ಬ್ರಿಟನ್, ರೈತರ ಹಾಡುಗಳು, ಹೂಗೊಂಚಲು, ದಾಸಳ, ದೀನಗಿಂತ ದೇವ ಬಡವ, ನನ್ನ ದೇಹದ ಬೂದಿ, ಕೆಂಪು ದಾಸಾಳ, ಆತ್ಮವಿಶ್ವಾಸ, ಬಿರುಗಾಳಿ, ಮಕ್ಕಳ ಪದ್ಯ, ಮಕ್ಕಳ ಗೀತೆಗಳು ಇತ್ಯಾದಿ. ನಾ ಕಂಡ ಪಡುವಣ ಇವರ ಪ್ರವಾಸ ಕಥನ. ಐದು ಸಾವಿರಕ್ಕೂ ಹೆಚ್ಚು ಚುಟುಕಗಳನ್ನು ರಚಿಸಿದ ಇವರು ಚುಟುಕುಗಳ ಬ್ರಹ್ಮ ಎಂದೇ ಖ್ಯಾತಿ ಹೊಂದಿದ್ದಾರೆ. ಇವರ ಚುಟುಕುಗಳ ಸಂಕಲನವನ್ನು ದಿನಕರನ ಚೌಪದಿ ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೭೫ ರಲ್ಲಿ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟೋರೇಟ್ ಪದವಿ ನೀಡಿದೆ.
೧೯೭೬ರಲ್ಲಿ ಗೋಕರ್ಣದ ಪರ್ತಗಾಳಿ ಮಠದ ವಿದ್ಯಾಧಿರಾಜ ಪುರಸ್ಕಾರ ಹಾಗೂ ಜನ್ಮಭೂಮಿ ಟ್ರಸ್ಟ್‌ನ ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿದೆ.
೧೯೮೦ ರಲಲಿ ಇವರ ದಿನಕರನ ಚೌಪದಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ.

ದೇವನೂರು ಮಹಾದೇವ
ದೇವನೂರು ಮಹಾದೇವ ಅವುರ ೧೯೪೮ ಜೂನ್ ೧೦ ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ಇವರ ನಿಜವಾದ ಹೆಸರು ಎನ್. ಮಹಾದೇವಯ್ಯ.ಲ ಇವರ ಹುಟ್ಟೂರು ದೇವನೂರಾದ್ದರಿಂದ ಇವರು ದೇವನೂರು ಮಹಾದೇವ ಎಂದೇ ಚಿರಪರಿಚಿತರಾಗಿದ್ಧಾರೆ. ತಂದೆ ನಂಜಯ್ಯ, ತಾಯಿ ನಂಜಮ್ಮ. ತಂದೆ ಪೋಲಿಸ್ ಕಾನ್ಸ್‌ಟೇಬಲ್ ವೃತ್ತಿಯಲ್ಲಿದ್ದರು. ಇವರ ವಿದ್ಯಾಭ್ಯಾಸ ದೇವನೂರು, ನಂಜನಗೂಡು ಮತ್ತು ಮೈಸೂರುಗಳಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದುಕೊಂಡರು. ಅನಂತರ ೧೯೮೯ರಲ್ಲಿ ಇಲ್ಲಿಯೇ ಕೆಲವು ಕಾಲ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕ ಸಂಶೋಧಕರಾಗಿ ಕಾರ್ಯ ನಿರ್ವಹಿಸಿದರು.
ಆರಂಭದಲ್ಲಿ ಇವರು ಬರೆದ್ದು ಕವನಗಳನ್ನು ಅನಂತರ ನವ್ಯ ಸಾಹಿತ್ಯ ಉಚ್ಟ್ರಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ಕಥಾಸಾಹಿತ್ಯ ರಚನೆಯತ್ತ ತೊಡಗಿಕೊಂಡರು. ದಲಿತ ಸಂವೇದನೆಯನ್ನೊಳಗೊಂಡ ಮೌಲಿಕ ಕಥೆಗಳನ್ನು ಪ್ರಕಟಿಸಿದರು. ಎಣಿಕೆಯ ದೃಷ್ಟಿಯಿಮದ ಇವರ ಕೃತಿಗಳು ವಿರಳವೆನಿಸಿದರೂ ಸತ್ವದ ಮೌಲಿಕ ದೃಷ್ಟಿಯಿಂದ ಇವರ ಕೃತಿಗಳು ಮಹತ್ವವನ್ನು ಪಡೆದುಕೊಂಡಿವೆ.
ಅಂಬೇಡ್ಕರ್ ಚಳುವಳಿಯ ಪ್ರಭಾವ ಮತ್ತು ಆಧುನಿಕ ವಿದ್ಯಮಾನಗಳ ದೃಷ್ಠಿಕೋನಗಳಿಂದ ದಲಿತರಲ್ಲಿ ಜಾಗೃತಿ ಮೂಡಿಸುವ ದಲಿತ ಲೇಖಕರು. ದಲಿತ ಪ್ರಪಂಚದಲ್ಲಿ ಅರಿವನ್ನು ಅದುವರೆಗೆ ಕಂಡರಿಯದ ರೀತಿಯಲ್ಲಿ ಅನಾವರಣ ಮಾಡತೊಡಗಿದರು. ದಲಿತರನ್ನು ಕಾಡುತ್ತ ಬಂದಿರುವ ಅಸ್ಪೃಶ್ಯತೆ, ಧಾರ್ಮಿಕ, ಸಾಮಾಜಿಕ ಅಮಾನುಷ ಪದ್ಧತಿಗಳು, ಅಪಮಾನದ ಸಂಗತಿಗಳು, ಸಾಹಿತ್ಯದಲ್ಲಿ ಅನಾವರಣ ಮಾಡತೊಡಗಿದರು. ಪೂರ್ಣವಾಗಿ ದಲಿತ ಲೋಕವನ್ನು ದಲಿತ ಸಂಸ್ಕೃತಿಯ ಸೂಕ್ಷ್ಮಗಳನ್ನು ತೆರೆದಿರಡುವುದೇ ಇಲ್ಲಿ ಪ್ರಮುಖ ವಿಷಯವಾಯಿತು. ಮಹಾದೇವ ಅವರ ಕಥಾಸಾಹಿತ್ಯ ಈ ಪ್ರಮುಖ ವಿಷಯಗಳನ್ನೊಳಗೊಂಡಿದೆ.
ಲೋಹಿಯಾವಾದಿ, ಸಮಾಜವಾದಿ ಪಕ್ಷ, ಸಮಾಜವಾದಿ ಯುವಜನ ಸಭಾದ ಚಟುವಟಿಕೆಗಳ ಪ್ರಭಾವಕ್ಕೊಳಗಾಗಿದ್ದ ಮಹಾದೇವ ಅವರ ವ್ಯಕ್ತಿತ್ವದ ಮೇಲೆ ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ ಇವರ ಪ್ರಭಾವವು ಬೀರಿತ್ತೆಂದು ಹೇಳಬಹುದು.
ಇವರು ವಿದ್ಯಾರ್ಥಿ ದಿನಗಳಲ್ಲಿಯೇ ನರ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ, ಪ್ರಕಾಶಕರಾಗಿದ್ದರು. ಮಹಾದೇವ ಅವರು ೧೯೭೫ರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯರಣರು ಮೈಸೂರಿಗೆ ಬಂದಿದ್ದಾಗ ಸಾರ್ವಜನಿಕ ಸಭೆಯೊಂದರ ಅಧ್ಯಕ್ಷತೆ ವಹಿಸಿದ್ ಗೌರವಕ್ಕೆ ಪಾತ್ರರಾಗಿದ್ದರು. ೧೯೭೯ರಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಘಟಕರಾಗಿಯೂ ಕಾರ್ಯ ನಿರ್ವಹಿಸಿದರು. ಇವರು ಸಮಿತಿಯ ಪ್ರಧಾನ ಸಂಘಟಕರಾಗಿಯೂ ಕಾರ್ಯ ನಿರ್ವಹಿಸಿದರು. ಇವರು ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ೧೯೮೯ ರಲ್ಲಿ ಅಮೆರಿಕಾದ ಅಯೋವ ವಿಶ್ವವಿದ್ಯಾಲದಯಲ್ಲಿ ನಡೆದ ಇಂಟರ್‌ನ್ಯಾಷನಲ್ ರೈಟಿಂಗ್ ಪ್ರೋಗ್ರಾಮ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೮೪ರಲ್ಲಿ ಕಲ್ಕತ್ತೆಯ ಭಾರತೀಯ ಭಾಷಾ ಪರಿಷತ್ತು ಒಡಲಾಳಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.
೧೯೯೧ರಲ್ಲಿ ಕುಸಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
೧೯೯೫ ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿ ಸಹ ಲಭಿಸಿದೆ.

ದೇವುಡು ನರಸಿಂಹಶಾಸ್ತ್ರಿ
ದೇವುಡು ನರಸಿಂಹಶಾಸ್ತ್ರಿಯವರು ೧೮೯೭ರ ಡಿಸೆಂಬರ್ ೨೭ ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ದೇವುಡ ಕೃಷ್ಣಶಾಸ್ತ್ರೀ, ತಾಯಿ ಸುಬ್ಬಮ್ಮ, ಮೈಸೂರಿನಲ್ಲಿ ಅಧ್ಯಯನವನ್ನು ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದುಕೊಂಡರು. ತದನಂತರ ಬೆಂಗಳೂರಿಗೆ ಬಂದು ನೆಲೆಸಿದರು.
ಕೆಲವು ಕಾಲ ಆರ್ಯವಿದ್ಯಾಶಾಲೆಯಲ್ಲಿ ಶಿಕ್ಷಕರಾಗಿ ದುಡಿದರು. ನಮ್ಮ ಪುಸ್ತಕ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಕೆಲವು ಕಾಲ ನಡೆಸಿದರು. ಇವರಿಗೆ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಒಳ್ಳೆಯ ಅಭಿರುಚಿ ಇತ್ತು. ಮಾರ್ಕಂಡೇಯ ಎಂಬ ಚಲನಚಿತ್ರದಲ್ಲೂ ಇವರು ಅಬಿನಯಿಸಿದರು. ಬೆಂಗಳೂರು ಅಮೆಚೂರ್ ಷಮಾಟಿಕ್ ಸಂಸ್ಥೆಯ ರಂಗಭೂಮಿ ಎಂಬ ಪತ್ರಿಕೆಯ ಸಂಪಾದಕರಾಗಿ ಕೆಲವು ಕಾಲ ದುಡಿದರು. ಇವರು ಗಾಂಧಿನಗರ ಹೈಸ್ಕೂಲಕನ್ನು ಸ್ಥಾಪಿಸಿದರು. ಇವರು ೧೯೬೨ ಅಕ್ಟೋಬರ್ ೨೪ ರಂದು ನಿಧನರಾದರು.
ಇವರ ಲೇಖನಗಳನ್ನು ಮಲ್ಲೇಪುರಂ ಜಿ.ವೆಂಕಟೇಶ್ ಅವರ ಸಂಪಾದಕತ್ವದಲ್ಲಿ ದೇವುಡು ಲೇಖನ ಸಂಪುಟ ಎಂಬ ಪುಸ್ತಕ ಹೊರಬಂದಿದೆ. ದೇವುಡ ಅವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಘನ ವಿದ್ವಾಂಸರು. ಇವರ ಪೂರ್ಜಜರು ಮೈಸೂರು ಅರಮನೆಯಲ್ಲಿ ರಾಜ ಪುರೋಹಿತರಾಗಿದ್ದರು.

ಕೃತಿಗಳು
ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ, ರಾಮಾಯಣದ ಮಹಾಪಾತ್ರಗಳು, ಎರಡನೆಯ ಜನ್ಮ ಗೆದ್ದವರು ಯಾರು, ಕಳ್ಳರ ಕೂಟ, ಮಯೂರ, ಕರ್ನಾಟಕ ಸಂಸ್ಕೃತಿಯ ದರ್ಶನ, ಅಂತರಂಗ, ಮೀಮಾಂಸಾದರ್ಪಣ, ವಿಚಿತ್ರಶಿಷೆ, ಕಂದನ ಕಥೆಗಳು, ಕನ್ನಡಿಯ ಕಥೆ, ಬಂಜೆಯ ಮಗ, ಭೀಮಸೇನ ಬೆಕ್ಕು, ಕಥಾಸರಿತ್ಸಾಗರ, ಹೊಸಗನ್ನಡ ಪಂಚತಂತ್ರ, ಬಾಲ ರಾಮಾಯಣ, ಬಾಲಭಾಗವತ, ಬುದ್ದಿಯ ಕತೆಗಳು ಮುಂತಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೨ರಲ್ಲಿ ಮಹಾಕ್ಷತ್ರಿಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
 

ರಾ.ಯ. ಧಾರವಾಡಕರ
ರಾ.ಯ. ಧಾರವಾಡಕರು ೧೯೧೯ ಜುಲ್ಲೈ ೧೫ ರಂದು ಜನಿಸಿದರು. ಇವರು ವಿದ್ಯಾಭ್ಯಾಸವನ್ನು ಸಾಂಗ್ಲಿ ಬಾಗಲಕೋಟೆ, ಮುಂಬೈ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ೧೯೪೨ರಲ್ಲಿ ಮುಂಬೈ ಸೆಕ್ರೆಟರಿಯೇಟ್‌ನಲ್ಲಿ ಸರ್ಕಾರಿ ಸೇವೆಗೆ ಸೇರಿದರು. ತದನಂತರ ಧಾರವಾಡದ ಜಿ.ಎಸ್. ಎಸ್. ಕಾಲೇಜಿನಲ್ಲಿ ಕನ್ನಡ, ಇಂಗ್ಲೀಷ್ ಪ್ರಾಧ್ಯಾಪಕರಾದರು. ಅನಂತರ ಕಾಲೇಜಿನ ಪ್ರಾಂಶುಪಾಲರಾಗಿ ಸುಧೀರ್ಘವಾದ ಸೇವೆ ಸಲ್ಲಿಸಿ ನಿವೃತ್ತರಾದರು.
ಕನ್ನಡ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಇವರಿಗೆ ಶಬ್ದಮಣಿದರ್ಪಣ ಪ್ರಿಯವಾಗಿತ್ತು. ಧಾರವಾಡಕರರು ಅದ್ಭುತ ವಾಗ್ಮಿಗಳು. ಪ್ರಬಂಧ ರಚನೆ ಇವರ ಪ್ರಿಯ ಬರವಣಿಗೆಯಾಗಿತ್ತು. ಹೊಸಗನ್ನಡ ಅರುಣೋದಯ ಕಾಲದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ವಿಪುಲವಾದ ಅಕರ ಸಾಮಗ್ರಿಯ ಮೂಲಕ ವಿಚೇಸಿದ್ದಾರೆ. ಶಿಕ್ಷಣ ತಜ್ಞರಾಗಿ, ದಕ್ಷ ಆಡಳಿತಗಾರರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿವಿಧ ಮಂಡಳಿಗಳ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಇವರು ಸೇವೆ ಸಲ್ಲಿಸಿದ್ದಾರೆ.

ಕೃತಿಗಳು
ಕನ್ನಡ ಭಾಷಾಶಾಸ್ತ್ರ, ಹೊಸಗನ್ನಡ ಸಾಹಿತ್ಯದ ಉದಯಕಾಲ, ಕನ್ನಡದಲ್ಲಿ ಕಾನೂನು ಸಾಹಿತ್ಯ, ನಮ್ಮ ದೇಶದ ಯೋಜನೆಗಳು, ಪತ್ರಿಕಾ ವ್ಯವಸಾಯ, ಕನ್ನಡದಲ್ಲಿ ವೃತ್ತ ಪತ್ರಿಕೆಗಳು, ನಂದಿ ಮಠ ನೆನಪು, ರೊದ್ದ ಶ್ರೀ ನಿವಾಸರಾಯರು, ಕಾವ್ಯನಂದ ಪುಣೇಕರ, ಸಾಗರೋತ್ತರ ಕಥೆಗಳು, ತೂರಿದ ಚಿಂತನಗಳು.
ಸಂಪಾದಿತ ಕೃತಿಗಳು: ಕನ್ನಡದಲ್ಲಿ ಗಾಂಧಿ ಸಾಹಿತ್ಯ, ಭೀಷ್ಮಪರ್ವ ಸಂಗ್ರಹ,
ಪ್ರವಾಸ ಕಥನ: ನಾನು ಕಂಡ ಅಮೇರಿಕಾ
ಕಥಾಸಂಕಲನ : ತೆರೆಯ ಹಿಂದೆ
ಅನುವಾದಿತ ಕೃತಿಗಳು : ಬಿ.ಎಂ. ಶ್ರೀಕಂಠಯ್ಯ, ಎಸ್.ಸಿ. ನಂದೀಮಠ, ವೆಂಕಟರಂಗೋಕಟ್ಟಿ ಮೊದಲಾದವರ ಜೀವನ ಸಾದನೆ.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಪ್ರಬಂಧ ಪ್ರಪಂಚ ಎಂಬ ಅಭಿನಂದ ಗ್ರಂಥವನ್ನು ಅರ್ಪಿಸಲಾಗಿದೆ.
ತೂರಿದ ಚಿಂತನಗಳು, ನಾನು ಕಂಡ ಅಮೆರಿಕೆ, ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
೧೯೯೧ ಏಪ್ರಿಲ್ ೧೨ ರಂದು ಧಾರವಾಡದಲ್ಲಿ ನಿಧನರಾದರು.

ದೊಡ್ಡರಂಗೇಗೌಡ
ದೊಡ್ಡ ರಂಗೇಗೌಡರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯ ೧೯೪೬ರ ಫೆಬ್ರವರಿ ೭ ರಂದು ಜನಿಸಿದರು ತಂದೆ ಕೆ. ರಂಗೇಗೌಡ, ತಾಯಿ ಅಕ್ಕಮ್ಮ, ಇವರ ವಿದ್ಯಾಭ್ಯಾಸ ಕುರುಬರಹಳ್ಳಿ, ಬಡವನಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರುಗಳಲ್ಲಿ ಜರುಗಿತು. ೧೯೭೦ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಆನರ‍್ಸ್ ಪದವಿ ಹಾಗೂ ೧೯೭೨ರಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಕನ್ನಡ ನವೋದಯ ಕಾವ್ಯ ಒಂದು ಪುನರ್ ಮೌಲ್ಯಮಾಪನ ಎಂಬ ಸಂಶೋಧನ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಮದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
೧೯೭೨ರ ಜೂನ್ ೧೮ ರಂದು ಬೆಂಗಳೂರಿನ ಎಸ್.ಎಲ್.ಎನ್. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೮೦ರಲ್ಲಿ ಕನ್ನಡ ಪ್ರವಾಚಕರಾಗಿ, ೧೯೮೫ರಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ೧೯೯೦ರಿಂದ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಸದ್ಯ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ದೊಡ್ಡರಂಗೇಗೌಡರು ಇದುವರೆಗೆ ೬೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.
ಶಿಕ್ಷಣ, ಸಾಹಿತ್ಯ, ಚಲನಚಿತ್ರ, ಸುಗಮ ಸಂಗೀತ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ತೊಡಗಿಸಿಕೊಂಡ ಸೃಜನಶೀಲ. ಕವಿ ದೊಡ್ಡರಂಗೇಗೌಡರು ಇದುವರೆಗೆ ೫೦೦ ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗೀತೆಗಳನ್ನು ಬರೆದು ಸಿನಿಮಾ ರಂಗದಲ್ಲೂ ಮನೆಮಾತಾಗಿದ್ದಾರೆ.

ಗೌರವ, ಪ್ರಶಸ್ತಿ - ಪುರಸ್ಕಾರಗಳು
೧೯೭೨ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೦ರಲ್ಲಿ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ,
೧೯೯೯ರಲ್ಲಿ ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ
೨೦೦೦ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ
೨೦೦೨ ರಲ್ಲಿ ವರ್ಧಮಾನ ಮಹಾವೀರ್ ಪ್ರಶಸ್ತಿ ಮುಂತಾದವು.

   ಮುಂದಿನಪುಟಕ್ಕೆ